ಹಿಂದೂಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಕ್ಷಮಿಸಿ; ಬಾಂಗ್ಲಾದೇಶದ ಮಧ್ಯಂತರ ಸರಕಾರ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ನೂತನ ಗೃಹ ಸಚಿವ ಸಖಾವತ್ ಹುಸೇನ್ ಅವರು ಹಿಂದೂ ಸಮುದಾಯವನ್ನು ಸಮರ್ಪಕವಾಗಿ ರಕ್ಷಿಸದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸುವುದು ಬಹುಸಂಖ್ಯಾತ ಮುಸಲ್ಮಾನರ ಕರ್ತವ್ಯವಾಗಿದೆ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ, ‘ಪ್ರತಿಭಟನಾಕಾರರು ಆಗಸ್ಟ್ 19 ರೊಳಗೆ ಎಲ್ಲಾ ಅಕ್ರಮ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಜಮಾ ಮಾಡಬೇಕು’, ಎಂದು ಸಖಾವತಖ ಹುಸೇನ ಮನವಿ ಮಾಡಿದ್ದಾರೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ಶಸ್ತ್ರಗಳನ್ನು ಜಮಾ ಮಾಡದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಇದರೊಂದಿಗೆ ಯಾರಾದರೂ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಮಡಿರುವುದು ಕಂಡುಬಂದರೆ ಅವರ ವಿರುದ್ಧ ಅಪರಾಧ ದಾಖಲಿಸಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಕ್ಷಮೆ ಕೇಳಿದರೆ ಸಾಲದು, ಹಿಂದೂಗಳಿಗೆ ನಷ್ಟಪರಿಹಾರ ನೀಡಬೇಕು. ಹಿಮಸಾಚಾರ ಮಾಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಹಿಂದೂಗಳ ಶಾಶ್ವತ ರಕ್ಷಣೆಗೆ ಪ್ರತ್ಯೇಕ ಕಾನೂನು ಮತ್ತು ಇಲಾಖೆಯನ್ನು ರಚಿಸಬೇಕು !