ಬಾಂಗ್ಲಾದೇಶದ ಮಧ್ಯಂತರ ಸರಕಾರದ ಭರವಸೆಯ ಮೇರೆಗೆ ಪೊಲೀಸರಿಂದ ಮುಷ್ಕರ ಹಿಂಪಡೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ ಪೊಲೀಸರು ಮುಷ್ಕರ ನಡೆಸಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಕೆಲಸಕ್ಕೆ ಬರಲು ಪೊಲೀಸರು ನಿರಾಕರಿಸಿದ್ದರು. ಇದೀಗ ಪೊಲೀಸರು ತಮ್ಮ ಮುಷ್ಕರವನ್ನು ಹಿಂಪಡೆಯಲು ಒಪ್ಪಿದ್ದಾರೆ. ಹಂಗಾಮಿ ಸರಕಾರ ಪೊಲೀಸರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಮುಷ್ಕರ ಹಿಂಪಡೆಯಲು ಪೊಲೀಸರು ಒಪ್ಪಿದ್ದಾರೆ.

‘ಢಾಕಾ ಟ್ರಿಬ್ಯೂನ್’ ಪತ್ರಿಕೆ ನೀಡಿದ ವರದಿಯ ಪ್ರಕಾರ, ಆಗಸ್ಟ್ 11 ರಂದು ಮುಷ್ಕರ ನಿರತ ಪೊಲೀಸರ ಪ್ರತಿನಿಧಿಗಳು ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ. ಸಖ್ವತ್ ಹುಸೇನ್ ಅವರೊಂದಿಗೆ ಸಭೆ ನಡೆಸಿದರು. ಅವರ 11 ಅಂಶಗಳ ಪಟ್ಟಿಯಲ್ಲಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಪೊಲೀಸರಿಗೆ ಭರವಸೆ ನೀಡಲಾಯಿತು. ಆ ಬಳಿಕ ಪೊಲೀಸ್ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಮುಷ್ಕರ ಹಿಂಪಡೆಯುವುದಾಗಿ ಘೋಷಿಸಿದರು.