ಆಗಸ್ಟ್ ೧೫ ರಂದು ಮಹರ್ಷಿ ಅರವಿಂದ ಇವರ ಜಯಂತಿ ಇದೆ. ಆ ನಿಮಿತ್ತ ಲೇಖನ …
ಯೋಗಿ ಅರವಿಂದ ಇವರು, ”ನಾನು ಸ್ವಾತಂತ್ರ್ಯ ಬಗ್ಗೆ ಚಿಂತೆ ಮಾಡುವುದಿಲ್ಲ, ಇತರರಿಗೆ ಏನು ಬೇಕಾಗುತ್ತದೆಯೋ, ಆ ವಿಷಯಗಳ ಬಗ್ಗೆ ನನಗೆ ಆಕರ್ಷಣೆ ಇಲ್ಲ. ಒಟ್ಟಿನಲ್ಲಿ ನನಗೆ ಈ ದೇಶವನ್ನು ಕಾಪಾಡಲು ಮತ್ತು ನನ್ನ ಪ್ರಿಯ ದೇಶವಾಸಿಗಳ ಸೇವೆಯನ್ನು ಮಾಡಲು ಶಕ್ತಿ ಬೇಕು, ರಾಷ್ಟ್ರ ಮತ್ತು ಮಾನವತೆಗಾಗಿ ನಾನು ನಿರಂತರ ಶ್ರಮಪಡುವೆನು” ಎಂದು ಹೇಳಿದ್ದರು.
ಯೋಗಿ ಅರವಿಂದರವರ ಸಂಪೂರ್ಣ ಜೀವನ ಮತ್ತು ಅವರ ಯೋಗಸಾಧನೆಯು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಭಾರತೀಯ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ಇತ್ತು. ಅವರು ನರ್ಮದಾ ನದಿಯ ತೀರದಲ್ಲಿನ ಅನೇಕ ಯೋಗಿಪುರುಷರನ್ನು ಭೇಟಿಯಾದರು ಮತ್ತು ಯೋಗಸಾಧನೆಯಿಂದ ಭಾರತದ ರಾಜಕೀಯ ಮತ್ತು ಸಂಸ್ಕೃತಿಯನ್ನು ಉಳಿಸಲು, ಸ್ವಾತಂತ್ರ್ಯವೀರ ಸಾವರಕರರಂತೆ ಅವರು ಸಾವಿರಾರು ಕ್ರಾಂತಿ, ಲೇಖನ, ದೇಶಸೇವಕರ ಸಂಘಟನೆ, ಪ್ರಾಚಾರ್ಯಪದವಿಯ ತ್ಯಾಗ, ಉಚ್ಚ ಸೈನಿಕ ಶಿಕ್ಷಣಕ್ಕಾಗಿ ತಮ್ಮ ಸ್ನೇಹಿತನನ್ನು ಕಳುಹಿಸುವುದು, ಶಿಕ್ಷಣಸಂಸ್ಥೆಯ ಹೆಸರಿನಲ್ಲಿ ಶಸ್ತ್ರಾಸ್ತ್ರಗಳ ಕಾರ್ಖಾನೆಯನ್ನು ತೆರೆಯುವುದು, ಉದಯಪುರದ ಓರ್ವ ಸರದಾರನು ಸ್ಥಾಪಿಸಿದ ರಹಸ್ಯ ಸಂಘಟನೆಯ ಮಹಾರಾಷ್ಟ್ರ ವಿಭಾಗದಲ್ಲಿ ಸಹಭಾಗಿ ಆಗುವುದು, ಕಠಿಣ ಸೆರೆಮನೆವಾಸ, ರಾಷ್ಟ್ರೀಯ ಸ್ವತಂತ್ರ ಕಾರ್ಯದಲ್ಲಿ ಗಡಿಪಾರು, ಎರಡನೇ ಮಹಾಯುದ್ಧದಲ್ಲಿ ಅಸುರಿ ಜರ್ಮನ್ ಶಕ್ತಿಯ ವಿರುದ್ಧ ಸೈನಿಕರಿಗೆ ಪ್ರೋತ್ಸಾಹ, ಬುದ್ಧಿನಿಷ್ಠ, ತೀವ್ರ ರಾಷ್ಟ್ರಭಕ್ತಿ ಈ ಎಲ್ಲ ವೃತ್ತಿ-ಶಕ್ತಿಯ ಅವಿಷ್ಕಾರ ಮಾಡಿದರು.
ಕ್ರಾಂತಿಕಾರಿ ಖುದಿರಾಮ ಬೋಸ್ ಇವರು ಮಾಡಿದ ಸ್ಫೋಟದಿಂದ ಎಲ್ಲ ಕ್ರಾಂತಿಕಾರಿಗಳು ಸಿಕ್ಕಿಬಿದ್ದರು. ಅವರ ಜೊತೆಗೆ ಶ್ರೀ ಅರವಿಂದರು ಇರುವುದರಿಂದ ಅವರನ್ನೂ ಬಂಧಿಸಿ ಇತರರೊಂದಿಗೆ ವರ್ಷವಿಡಿ ಅಲೀಪುರದ ಕಾರಾಗೃಹದಲ್ಲಿಟ್ಟಿದ್ದರು. ಅಲ್ಲಿನ ಕೊಠಡಿಯು ೬ ಅಡಿ ಉದ್ದ ಮತ್ತು ೪ ಅಡಿ ಅಗಲವಾಗಿತ್ತು. ಅವರ ಹತ್ತಿರ ಕೇವಲ ಒಂದು ಒರಟಾದ ದಪ್ಪ ಕಂಬಳಿಯಿತ್ತು. ಕೊಠಡಿಯಲ್ಲಿ ಸತತವಾಗಿ ಜಾಳಿಗೆಯ ಬಾಗಿಲಿನಿಂದ ಮಳೆ, ಗಾಳಿ, ಕಸಕಡ್ಡಿಗಳು ಬರುತ್ತಿದ್ದವು. ನೀರಿನ ಒಂದೇ ಪಾತ್ರೆ, ಕೀಟಗಳು, ಧೂಳಿನಿಂದ ಕೂಡಿದ ಅನ್ನ, ಹುಲ್ಲು-ಎಲೆಗಳನ್ನು ಸೇರಿಸಿದ ಪಲ್ಯ, ಸಪ್ಪೆ ಸಾರು ಈ ರೀತಿ ಊಟ ಇರುತ್ತಿತ್ತು. ಬೇಸಿಗೆಯಲ್ಲಿ ಆ ಕೊಠಡಿಯು ಭಟ್ಟಿಯಾಗಿರುತ್ತಿತ್ತು. ಅಂತಹ ಕೊಠಡಿಯಲ್ಲಿ ಅವರು ಗೀತಾ-ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದರು ಮತ್ತು ಸಾಧನೆಯಿಂದ ‘ವಾಸುದೇವನ ದರ್ಶನ’ವನ್ನು ಪಡೆದರು.
‘ಅವರು ತಮ್ಮ ಒಂದು ಸಂದೇಶದಲ್ಲಿ, ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಇದು ಅವರ ಯೋಗಸಾಧನೆಯ ದೈವೀ ಮುದ್ರೆಯಾಗಿದೆ’, ಎಂದು ಬರೆದಿದ್ದಾರೆ.
(ಆಧಾರ : ಮಾಸಿಕ ‘ಧರ್ಮಭಾಸ್ಕರ’, ಆಗಸ್ಟ್ ೨೦೦೭, ಪುಟ ಕ್ರ. ೨೨)