ಭಾರತೀಯ ಮೂಲದ ಅಮೇರಿಕಾದ ಸಂಸದ ಶ್ರೀ ಠಾಣೇದಾರ ಇವರ ನಿರ್ಧಾರ
ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ ಎಂದು ಅಮೇರಿಕದಲ್ಲಿರುವ ಭಾರತೀಯ ಮೂಲದ ಹಿಂದೂ ಸಂಸದ ಶ್ರೀ ಠಾಣೇದಾರ್ ಹೇಳಿದ್ದಾರೆ. ಅವರು ಈ ಸಂದರ್ಭದಲ್ಲಿ ತಮ್ಮ ವಿಡಿಯೋ ಪ್ರಸಾರ ಮಾಡಿದ್ದಾರೆ.
ಈ ವೀಡಿಯೊದಲ್ಲಿ ಅವರು ಮಾತನಾಡುತ್ತಾ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ನ್ಯಾಯ ಸಿಗಬೇಕಾಗಿದೆ. ಅವರಿಗಾದ ಅನ್ಯಾಯದ ಸುದ್ದಿಯನ್ನು ಓದಿ ಮನಸ್ಸು ದಂಗಾಯಿತು. ಇದೆಲ್ಲ ನಿಲ್ಲಬೇಕು ಮತ್ತು ನಾನು ಅವರಿಗೆ ನ್ಯಾಯವನ್ನು ಒದಗಿಸಿಕೊಡಲು ಸಿದ್ಧನಾಗಿದ್ದೇನೆ. ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಮೇಲಿನ ದಾಳಿಯನ್ನು ಸಂಪೂರ್ಣವಾಗಿ ಒಪ್ಪಲಾಗದು. ನಾನು ಅಮೇರಿಕಾದ ವಿದೇಶಾಂಗ ಇಲಾಖೆ ಮತ್ತು ವಿಶ್ವದಾದ್ಯಂತ ಇರುವ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ಈ ಎಲ್ಲ ವಿಷಯಗಳು ಬಗೆಹರಿಯುವವರೆಗೂ ನಾವು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಠಾಣೇದಾರ ಇವರು ಅಮೇರಿಕಾ ಮತ್ತು ಜಗತ್ತಿನ ಇತರ ಭಾಗಗಳಲ್ಲಿನ ಹಿಂದೂ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಲು ಹಿಂದೂ, ಬೌದ್ಧ, ಸಿಖ್ ಮತ್ತು ಜೈನ್ ಅಮೇರಿಕನ್ ಕಾಂಗ್ರೆಸ ‘ಕಾಕಸ್’ (ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುವ ಗುಂಪು) ಅನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಠಾಣೇದಾರ ಮಾತನಾಡುತ್ತಾ, ವಿವಿಧ ದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿಗಳಾಗುತ್ತಿವೆ ಹಾಗಾಗಿ ನಾನು ವಿಶೇಷವಾಗಿ ಚಿಂತಿತನಾಗಿದ್ದೇನೆ. ಹಿಂದೂಗಳ ದೇವಸ್ಥಾನಗಳು ಮತ್ತು ಮನೆಗಳನ್ನು ಧ್ವಂಸಗೊಳಿಸುವುದು, ಅವರನ್ನು ಗುರಿ ಮಾಡುವುದು ಇಂತಹ ಘಟನೆಗಳನ್ನು ಎಷ್ಟು ನಿಷೇದಾರ್ಹವಾಗಿದೆಯೋ ಅಷ್ಟೇ ತೊಂದರೆದಾಯಕವಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದ ಹಿಂದುತ್ವನಿಷ್ಠ ಸಂಸದರು ಮತ್ತು ಶಾಸಕರಲ್ಲಿ ಇಂತಹ ನಿರ್ಣಯವನ್ನು ಎಂದಾದರೂ ಮಾಡಿದ್ದಾರೆಯೇ ? ಹಿಂದೂಗಳಿಗೆ ಈಗ ಯಾರೂ ರಕ್ಷಕರೇ ಉಳಿದಿಲ್ಲ ಎನ್ನುವುದು ಭಾರತದ ಇಂತಹ ದಯನೀಯ ಸ್ಥಿತಿಯಿಂದ ಗಮನಕ್ಕೆ ಬರುತ್ತದೆ. ಅಲ್ಲವೇ? |