ಧ್ಯಾನಮಂದಿರದಲ್ಲಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ ಮನಸ್ಸು  ಏಕಾಗ್ರವಾಗಲು ಏನು ಭಾವವನ್ನು ಇಡಬೇಕು ?

ಸೌ. ಸ್ವಾತಿ ಶಿಂದೆ

‘ಕೆಲವೊಮ್ಮೆ ಆಶ್ರಮದ ಧ್ಯಾನಮಂದಿರದಲ್ಲಿ ನಾಮಜಪ ಮಾಡುವಾಗ ನಿದ್ರೆ ಬರುತ್ತದೆ ಅಥವಾ ತುಂಬಾ ವಿಚಾರಗಳು ಬರುತ್ತವೆ. ನನ್ನ ಏಕಾಗ್ರತೆ ಕಡಿಮೆ ಆಗುತ್ತದೆ. ಇಂತಹ ಸಮಯದಲ್ಲಿ ಮನಸ್ಸನ್ನು ‘ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳಲ್ಲಿ ಹೇಗೆ ಉಳಿಸಿಕೊಳ್ಳಬೇಕು ?’, ಈ ವಿಷಯದಲ್ಲಿ ದೇವರು ಸೂಚಿಸಿದ ವಿಚಾರಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಪ್ರಾರ್ಥನೆ ಮಾಡಿ ಎಲ್ಲ ದೇವತೆಗಳ, ಗುರುಪರಂಪರೆಯ, ಯಂತ್ರ ಹಾಗೂ ದೀಪದ ದರ್ಶನ ಪಡೆಯಬೇಕು.

೨. ಪ್ರತಿಯೊಂದು ದೇವತೆಯ ಪ್ರತಿಮೆ ಅಥವಾ ಮೂರ್ತಿಯನ್ನು ಏಕಾಗ್ರತೆಯಿಂದ ಗಮನಕೊಟ್ಟು ನೋಡಬೇಕು

೩. ಭಗವಾನ ಶಿವನ ಕಡೆಗೆ ನೋಡುವಾಗ ‘ಅವನ ಜಡೆಯಿಂದ ಹರಿಯುವ ಗಂಗೆಯ ಪ್ರವಾಹದಲ್ಲಿ ನಾವು ಶುದ್ಧವಾಗುತ್ತಿದ್ದೇವೆ, ಭಗವಾನ ಶಿವನು ಡಮರೂ ಬಾರಿಸುತ್ತಿದ್ದಾನೆ, ಇದರಿಂದ ನಮಗೆ ತೊಂದರೆ ಕೊಡುವ ಅನಿಷ್ಟ ಶಕ್ತಿಗಳು ನಾಶವಾಗುತ್ತಿವೆ ಹಾಗೂ ನಕಾರಾತ್ಮಕ ಆವರಣ ದೂರವಾಗುತ್ತಿದೆ’, ಎನ್ನುವ ಭಾವವನ್ನಿಡಬೇಕು.

೪. ಭಗವಾನ ಶ್ರೀಕೃಷ್ಣನ ಕಡೆಗೆ ನೋಡುವಾಗ ‘ಅವನ ಕೈಯಲ್ಲಿನ ಸುದರ್ಶನ ಚಕ್ರ ನಮ್ಮ ಸುತ್ತಲೂ ತಿರುಗುತ್ತಿರುವುದರಿಂದ ನಮ್ಮ ಸುತ್ತಲಿನ ತೊಂದರೆದಾಯಕ ಶಕ್ತಿಗಳ ಆವರಣ ನಾಶವಾಗುತ್ತಿದೆ ಹಾಗೂ ಚೈತನ್ಯದ ಕವಚ ನಿರ್ಮಾಣವಾಗುತ್ತಿದೆ. ಭಗವಂತನು ಶಂಖನಾದ ಮಾಡಿದ್ದಾನೆ ಹಾಗೂ ಆ ನಾದದಿಂದ ಎಲ್ಲ ಅನಿಷ್ಟ ಶಕ್ತಿಗಳು ಓಡಿ ಹೋಗುತ್ತಿವೆ ಹಾಗೂ ನಮ್ಮ ಸುತ್ತಲಿನ ನಕಾರಾತ್ಮಕ ಆವರಣ ನಾಶವಾಗುತ್ತಿದೆ. ನಾವು ತುಂಬಾ ಉತ್ಸಾಹಿತರಾಗಿ ನಮ್ಮ ದೋಷಗಳೊಂದಿಗೆ ಹೋರಾಡಲು ಸಿದ್ಧರಾಗಿದ್ದೇವೆ’, ಎನ್ನುವ ಭಾವವನ್ನಿಡಬೇಕು.

೫. ಹನುಮಂತನ ದರ್ಶನ ಪಡೆಯುವಾಗ ಈ ಮುಂದಿನಂತೆ ಭಾವವನ್ನಿಡಬೇಕು. ‘ಹನುಮಂತನ ಚರಣಗಳ ಮೇಲೆ ತಲೆಯನ್ನಿಟ್ಟು ಅವನಿಗೆ ನಮಸ್ಕಾರ ಮಾಡುತ್ತಿದ್ದೇವೆ. ಅವನ ಆಶೀರ್ವಾದ ನೀಡುವ ಕೈಯನ್ನು ನೋಡುತ್ತಾ ನಾಮಜಪ ಮಾಡಬೇಕು. ಹನುಮಂತನು ನಮ್ಮ ಆಧ್ಯಾತ್ಮಿಕ ತೊಂದರೆಯಾಗುವ ಸ್ಥಳದ ಮೇಲೆ ಅಥವಾ ತಲೆಯ ಮೇಲೆ ಅವನ ಗದೆಯನ್ನಿಟ್ಟಿದ್ದಾನೆ. ತಲೆಯ ಮೇಲಿರುವ ಗದೆಯ ತುದಿಯನ್ನು ನನ್ನ ಆಜ್ಞಾಚಕ್ರದ ಮೇಲೆ ಇಟ್ಟಿದ್ದಾನೆ, ಆದ್ದರಿಂದ ನನ್ನ ಮನಸ್ಸು ಏಕಾಗ್ರವಾಗಿದೆ. ನನಗೆ ಧ್ಯಾನ ತಗಲಿದೆ. ಚೈತನ್ಯ ಹಾಗೂ ಶಕ್ತಿ ಗ್ರಹಣವಾಗುತ್ತಿದೆ.

೬. ಪ್ರಭು ಶ್ರೀರಾಮನ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು. ಅವನ ಆಶೀರ್ವಾದ ನೀಡುವ ಕೈಯನ್ನು ನೋಡುತ್ತಾ ನಾಮಜಪ ಮಾಡಬೇಕು, ಅವನ ಮೋಹಕ ರೂಪವನ್ನು ನೋಡುತ್ತ ಅವನ ಸ್ತುತಿ ಮಾಡಬೇಕು.

೭. ದತ್ತಗುರುಗಳ ಚರಣಗಳಲ್ಲಿ ನತಮಸ್ತಕರಾಗಿ ಪ್ರಾರ್ಥನೆ ಮಾಡಬೇಕು, ಅವರ ಕೈಗಳನ್ನು ನೋಡುತ್ತಾ ಜಪ ಮಾಡಬೇಕು. ‘ಅವರು ತಮ್ಮ ಕಮಂಡಲದಲ್ಲಿನ ತೀರ್ಥವನ್ನು ನನ್ನ ಮೇಲೆ ಸಿಂಪಡಿಸಿದ್ದಾರೆ. ಅದರಿಂದ ತೊಂದರೆದಾಯಕ ಶಕ್ತಿಯ ಆವರಣ ನಾಶವಾಗುತ್ತಿದೆ ಹಾಗೂ ನನಗೆ ಉತ್ಸಾಹ ಅನಿಸುತ್ತದೆ ಎನ್ನುವ ಭಾವವನ್ನಿಡಬೇಕು.

೮. ಗಣಪತಿಯ ಚರಣಗಳಿಗೆ ನಮಸ್ಕಾರ ಮಾಡಬೇಕು. ಅವನ ಚರಣಗಳ ಸ್ಪರ್ಶವನ್ನು ಅನುಭವಿಸಬೇಕು. ಅವನ ಆಶೀರ್ವಾದ ನೀಡುವ ಕೈಯನ್ನು ನೋಡುತ್ತಾ ನಾಮಜಪ ಮಾಡಬೇಕು. ಅವನ ಕೈಯಲ್ಲಿನ ಶಸ್ತ್ರಗಳನ್ನು ನೋಡುವಾಗ ಅನಿಷ್ಟ ಶಕ್ತಿಗಳ ತೊಂದರೆ ದೂರವಾಗಲಿ ಎಂದು ಪ್ರಾರ್ಥನೆ ಮಾಡಬೇಕು. ಅವನು ತನ್ನ ಸೊಂಡಿಲನ್ನು ನನ್ನ ತಲೆಯ ಮೇಲಿಟ್ಟು ನನಗೆ ಚೈತನ್ಯ ಹಾಗೂ ಆಶೀರ್ವಾದ ನೀಡಿದ್ದಾನೆ, ಅವನ ಚರಣಗಳಿಗೆ ಅರ್ಪಿಸಿದ ದುರ್ವೆಗಳನ್ನು ಅವನು ನಮಗೆ ಉಪಾಯಕ್ಕಾಗಿ ಕೊಟ್ಟಿದ್ದಾನೆ, ಅವು ನಮ್ಮ ಕೈಯಲ್ಲಿವೆ ಎಂದು ಊಹಿಸಬೇಕು.

೯. ಲಕ್ಷ್ಮಿದೇವಿಗೆ ನಮಸ್ಕಾರ ಮಾಡಿ ‘ನಮ್ಮಲ್ಲಿ ಗುರುಗಳಿಗೆ ಇಷ್ಟವಾಗುವ ಗುಣಗಳ ಸಂಪತ್ತು ವೃದ್ಧಿಯಾಗಲಿ’, ಎಂದು ಪ್ರಾರ್ಥನೆ ಮಾಡಬೇಕು. ‘ಅವಳ ಚರಣಸ್ಪರ್ಶವಾಗಿರುವ ನೀರಿನಿಂದ ನಮ್ಮ ಮೇಲಿನ ತೊಂದರೆದಾಯಕ ಶಕ್ತಿಯ ಆವರಣ ದೂರವಾಗುತ್ತಿದೆ, ನಮ್ಮ ಮನಸ್ಸು ಶಾಂತವಾಗಿದೆ’, ಎಂಬುದನ್ನು ಅನುಭವಿಸಬೇಕು.

೧೦. ದುರ್ಗಾಮಾತೆಯ ದರ್ಶನ ಪಡೆಯಬೇಕು. ಅವಳಿಗೆ ನಮಸ್ಕಾರ ಮಾಡುವಾಗ ಅವಳ ಚರಣಗಳ ಸ್ಪರ್ಶವನ್ನು ಅನುಭವಿಸಬೇಕು. ಮೇಲೆ ಎತ್ತಿರುವ ಅವಳ ಕಾಲು ನಮ್ಮ ತಲೆಯ ಮೇಲಿದೆ. ಅದರ ಹೆಬ್ಬೆರಳಿನ ತುದಿ ನಮ್ಮ ಆಜ್ಞಾಚಕ್ರದ ಮೇಲಿದೆ. ಅದು ನಮಗೆ ಅಭಯವನ್ನು ನೀಡುತ್ತಿದೆ, ಎನ್ನುವ ಭಾವವನ್ನಿಡಬೇಕು.

೧೧. ದೇವಿಯ ಮೂರ್ತಿಯನ್ನು ನೋಡುವಾಗ ‘ಅವಳು ಕೆಳಗೆ ಇಟ್ಟಿರುವ ಕಾಲು ನಮ್ಮ ತಲೆಯ ಮೇಲಿದೆ ಅಥವಾ ಆ ಚರಣದ ಮೇಲೆ ತಲೆಯನ್ನಿಟ್ಟು ನಾವು ನಮಸ್ಕಾರ ಮಾಡುತ್ತಿದ್ದೇವೆ’ ಎನ್ನುವ ಭಾವವನ್ನಿಡಬೇಕು. ಅವಳ ಕೈಯಲ್ಲಿನ ಎಲ್ಲ ಶಸ್ತ್ರಗಳನ್ನು ನೋಡಬೇಕು ಹಾಗೂ ಅವುಗಳ ಶಕ್ತಿಯನ್ನು ಅನುಭವಿಸಬೇಕು.

೧೨. ಗುರುಪರಂಪರೆಯ ಛಾಯಾಚಿತ್ರಗಳನ್ನು ನೋಡುವಾಗ ಅವರನ್ನು ಏಕಾಗ್ರತೆಯಿಂದ  ನೋಡಬೇಕು. ಅವರ ಕಣ್ಣುಗಳನ್ನು ನೋಡುತ್ತಾ ಜಪ ಮಾಡುವುದು, ಅವರ ಮಂದಹಾಸವನ್ನು ನೋಡುವುದು, ಹೀಗೆ ಮಾಡುತ್ತಾ ಅವರ ಕೃಪೆಯನ್ನು ಅನುಭವಿಸಬೇಕು.

೧೩. ಧ್ಯಾನಮಂದಿರದಲ್ಲಿ ಇಟ್ಟಿರುವ ಯಂತ್ರಗಳಿಂದ ನಿರ್ಗುಣ ಚೈತನ್ಯ ಪ್ರಕ್ಷೇಪಣೆಯಾಗುತ್ತಿದೆ. ‘ಅವು ನಮ್ಮ ರಕ್ಷಕವಾಗಿವೆ’, ಎನ್ನುವ ಭಾವದಿಂದ ಕೃತಜ್ಞತೆಯನ್ನು ಸಲ್ಲಿಸಬೇಕು.

೧೪. ನಂದಾದೀಪವನ್ನು ನೋಡುವಾಗ ಅದರ ಜ್ಯೋತಿಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು ಹಾಗೂ ಅದರ ಜ್ಯೋತಿಯನ್ನು ಹೃದಯದಲ್ಲಿ ಅನುಭವಿಸಬೇಕು.

೧೫. ಸ್ಥಾನದೇವತೆಯ ಚಿತ್ರವನ್ನು ನೋಡಿ ಎಲ್ಲ ಸಾಧಕರ ರಕ್ಷಣೆಯಾಗಬೇಕೆಂದು ಹಾಗೂ ಗುರುಗಳ ಕಾರ್ಯದಲ್ಲಿನ ಅಡಚಣೆಗಳು ದೂರವಾಗಲಿ ಎಂದು ಪ್ರಾರ್ಥನೆ ಮಾಡಬೇಕು.

೧೬. ಗುರುಪಾದುಕೆಗಳನ್ನು ನೋಡುವಾಗ ಅವುಗಳ ಸ್ಪರ್ಶವನ್ನು ಅನುಭವಿಸಬೇಕು. ಅವುಗಳ ಮೇಲೆ ನತಮಸ್ತಕರಾಗಿ ಆಜ್ಞಾಚಕ್ರದ ಮೇಲೆ ಸದ್ಗುರುಗಳ ಹೆಬ್ಬೆರಳ ಸ್ಪರ್ಶವನ್ನು ಅನುಭವಿಸಬೇಕು.

೧೭. ಗುರುದೇವರು ಅನೇಕ ಬಾರಿ ಧ್ಯಾನಮಂದಿರಕ್ಕೆ ಬಂದಿದ್ದಾರೆ. ನಾಮಸ್ಮರಣೆ ಮಾಡುವಾಗ ಅವರ ಅಸ್ತಿತ್ವವನ್ನು ಅನುಭವಿಸಬೇಕು.

೧೮. ಧ್ಯಾನಮಂದಿರದಲ್ಲಿ ಕುಳಿತುಕೊಳ್ಳಲು ಎಲ್ಲ ರೀತಿಯ ಉಪಕರಣಗಳಿವೆ. ಪಂಖಾ, ದೀಪ ಇತ್ಯಾದಿ ಪ್ರತಿಯೊಂದು ವಸ್ತು ನಿರಂತರ ಸೇವೆಯನ್ನು ಸಲ್ಲಿಸುತ್ತಿವೆ. ಅದಕ್ಕಾಗಿ ಅವುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೧೯. ಧ್ಯಾನಮಂದಿರದ ಹೊರಗೆ ಇರುವ ಗಿಡಗಳೂ ಸಾಧನೆಯನ್ನು ಮಾಡುತ್ತಿವೆ. ಅವು ಆಶ್ರಮದ ಶೋಭೆಯನ್ನು ಹೆಚ್ಚಿಸುತ್ತಿವೆ. ಅವುಗಳ ಗಮನ ಗುರುಗಳ ಕಡೆಗಿದೆ. ಅವುಗಳ ಮೂಲಕ ಸಾಧಕರಿಗೆ ವಿವಿಧ ತತ್ತ್ವಗಳು ಸಿಗುತ್ತವೆ. ಅದಕ್ಕಾಗಿ ಅವುಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಅವುಗಳಿಗೆ ಪ್ರಾರ್ಥನೆಯನ್ನು ಮಾಡಬೇಕು. ‘ಗುರುದೇವರೇ ನನಗೂ ವಿಚಲಿತಳಾಗದೆ ನಿರಂತರ ಸೇವೆಯನ್ನು ಮಾಡಲು ಸಾಧ್ಯವಾಗಲಿ’, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ

– ಸೌ. ಸ್ವಾತಿ ಶಿಂದೆ, ಸನಾತನ ಆಶ್ರಮ, ರಾಮನಾಥಿ ಗೋವಾ. (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೬) (೫.೬.೨೦೨೩)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.