ನ್ಯೂಯಾರ್ಕ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ; ಆದರೆ ತಥಾಕಥಿತ ಮಾನವ ಹಕ್ಕುಗಳ ಅಧಿಕಾರಿಗಳು ಹಿಂದೂಗಳಿಗೆ ನ್ಯಾಯ ಒದಗಿಸುವ ಬದಲು ಹಿಂದೂಗಳ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನು ಮಾಡುತ್ತಿದ್ದಾರೆ. ‘ಹ್ಯೂಮನ್ ರೈಟ್ಸ್ ವಾಚ್’ನ ಏಷ್ಯಾದ ಉಪ ನಿರ್ದೇಶಕಿ ಮೀನಾಕ್ಷಿ ಗಾಂಗೂಲಿ ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಇಸ್ಲಾಮವಾದಿಗಳಿಂದ ನಡೆಯುತ್ತಿರುವ ಹಿಂಸಾಚಾರವು ಹಿಂದೂ ವಿರೋಧಿ ದ್ವೇಷದಿಂದಲ್ಲ, ಬದಲಾಗಿ ರಾಜಕೀಯ ಕಾರಣಗಳಿಂದಾಗಿ ನಡೆಯುತ್ತಿದೆಯೆಂದು ಹೇಳಿದ್ದಾರೆ.
ಮೀನಾಕ್ಷಿ ಗಾಂಗೂಲಿ ಅವರು ‘X’ ಪೋಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ‘ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ಸರಣಿ ಪ್ರಾರಂಭವಾಗಿದೆಯೋ, ಅದರಲ್ಲಿ ಸಂಗೀತಕಾರ ರಾಹುಲ ಆನಂದ ಅವರ ಮನೆಯನ್ನು ಸುಟ್ಟು ಹಾಕಲಾಯಿತು; ಕಾರಣ ಅವರು ಶೇಖ ಹಸೀನಾರ ಅವಾಮಿ ಲೀಗ ಪಕ್ಷವನ್ನು ಬೆಂಬಲಿಸಿದ್ದರು. ಅಧಿಕಾರಿಗಳು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|