ರಸ್ತೆಯಲ್ಲಿ ಸಾಗುವಾಗ ವಾಹನಗಳನ್ನು ಮತ್ತು ತಗ್ಗುಗಳನ್ನು ತಪ್ಪಿಸುವಾಗ ಬೆನ್ನುಮೂಳೆಗಳು ಸಡಿಲಗೊಳ್ಳುತ್ತವೆ. ಅದರಲ್ಲೂ ದ್ವಿಚಕ್ರವಾಹನದಲ್ಲಿ ದೂರದ ಪ್ರಯಾಣ ಮಾಡುವುದರಿಂದ ನಮ್ಮ ಬೆನ್ನುಮೂಳೆಗಳ ಮೇಲೆ ಬಹಳ ಒತ್ತಡ ಬರುವ ಸಾಧ್ಯತೆಯಿದೆ. ಸದ್ಯ ಬರುವ ರೋಗಿಗಳಲ್ಲಿ ಸೊಂಟದ ಬೆನ್ನುಮೂಳೆಗಳಲ್ಲಿ ದೋಷವಿರುವ ಪ್ರಮಾಣ ಬಹಳ ಹೆಚ್ಚಾಗಿದೆ. ಅದರಲ್ಲಿಯೇ ನಾವು ಎಲ್ಲ ಕೃತಿಗಳನ್ನು ನಿಂತುಕೊಂಡು ಮಾಡುತ್ತೇವೆ. ಅಡುಗೆ ಕಟ್ಟೆಯ ಬಳಿ ನಿಂತುಕೊಂಡು, ನಂತರ ಊಟ ‘ಡೈನಿಂಗ್ ಟೇಬಲ್’ ಮೇಲೆ ಮತ್ತು ನಂತರ ಸೋಫಾ ಅಥವಾ ಕುರ್ಚಿ ಈ ಎಲ್ಲ ಚಲನವಲನಗಳಲ್ಲಿ ಸೊಂಟ ಮತ್ತು ಕುತ್ತಿಗೆ ಇವುಗಳ ಕಡೆಗೆ ಗಮನ ನೀಡಲಾಗುವುದಿಲ್ಲ. ಕಾಲುಗಳೂ ಒಂದೇ ಸ್ಥಿತಿಯಲ್ಲಿರುವುದರಿಂದ ಕಾಲುಗಳ ಸಣ್ಣ ಕೀಲುಗಳು/ಪಾದಗಳು ನೋಯುತ್ತವೆ. ಇದರೊಂದಿಗೆ ಹೊಟ್ಟೆಯಲ್ಲಿ ಗ್ಯಾಸ್, ಮಲಬದ್ಧತೆ ಈ ತಕರಾರು ಇದ್ದರೆ, ತೊಂದರೆಗಳನ್ನು ಇನ್ನೂ ಅನುಭವಿಸಬೇಕಾಗುತ್ತದೆ.
೧. ಸಂಧಿವಾತ, ಆಮವಾತ ಇವುಗಳಂತಹ ಕಾಯಿಲೆಗಳು ಹೆಚ್ಚಾಗುವ ಹಿಂದಿನ ಕಾರಣಗಳು
ನಮ್ಮ ಮನೆಗೆ ಮನೆ ಕೆಲಸಕ್ಕೆ ಒಬ್ಬರು ಬರುತ್ತಾರೆ. ಅವರ ಕೆಲಸ ಚಳಿ ಇರಲಿ, ಬಿಸಿಲಿರಲಿ, ಅವರು ಯಾವಾಗಲೂ ನೀರಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ‘ಹಿಂದಿನ ದಿನದ ಚಪಾತಿ/ಅನ್ನ ಮರುದಿನ ತಿನ್ನುವುದು, ಅಂದರೆ ತಂಗಳು ತಿನ್ನುತ್ತಾರೆ’, ಎಂದು ಅವರಿಗೆ ಹೆಚ್ಚಿನ ಬಾರಿ ಗೊತ್ತಿರುವುದಿಲ್ಲ. ಈ ರೀತಿ ತಂಗಳು ಮತ್ತು ಖಾರ ತಿನ್ನುವುದು, ಯಾವಾಗಲೂ ನಿಂತುಕೊಂಡು ಕೆಲಸ ಮಾಡುವುದು ಮತ್ತು ನೀರಿನಲ್ಲಿ ನಿರಂತರ ಕೆಲಸಗಳು, ಈ ರೀತಿಯ ಕೆಲಸ ಇರುವ ಎಲ್ಲ ವ್ಯಕ್ತಿಗಳಲ್ಲಿ ಸಣ್ಣ ಕೀಲುಗಳು ನೋವಾಗುವುದು ಅಥವಾ ಕೈಗಂಟುಗಳ, ಮಣಿಕಟ್ಟಿನ ಕೀಲುಗಳು ನೋವಾಗುವುದು, ಬಾವು ಬರುವುದು ಈ ಲಕ್ಷಣಗಳು ಬಹಳ ಸಾಮಾನ್ಯವಾಗಿ ಕಾಣಿಸುತ್ತವೆ. ಬಹಳಷ್ಟು ಜನರು ಪ್ರತಿದಿನ ನೋವುನಿವಾರಕ ಮಾತ್ರೆಗಳನ್ನು ಅಥವಾ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುತ್ತಾರೆ; ಏಕೆಂದರೆ ಇವುಗಳಿಂದ ನೋವು ನಿಯಂತ್ರಣಕ್ಕೆ ಬರುತ್ತದೆ, ಎಂದು ಅವರಿಗೆ ಗೊತ್ತಿರುತ್ತದೆ. ನಮ್ಮ ಬಳಿಗೆ ಬರುವ ಸಹಾಯಕ ವರ್ಗವು ಬಂದಾಗಿನಿಂದ ಸಂಪೂರ್ಣ ಆಯುರ್ವೇದಿಕ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಅದರಿಂದ ಅವರಿಗೆ ಲಾಭವಾಗಿದೆ. ನಾವೆಲ್ಲರೂ ನಮ್ಮ ವತಿಯಿಂದ ಅವರಿಗೆ ಹೇಳುತ್ತಲೇ ಇರಬೇಕು; ಏಕೆಂದರೆ ಸಂಧಿವಾತ, ಆಮವಾತ ಇವುಗಳಂತಹ ಕಾಯಿಲೆಗಳು ತಕ್ಷಣ ನಿಯಂತ್ರಣಕ್ಕೆ ಬರುವುದಿಲ್ಲ ಮತ್ತು ಕೆಲಸ ಕಳೆದುಕೊಂಡು ಕುಳಿತುಕೊಂಡರೆ ಉದರ ನಿರ್ವಹಣೆ ಕಠಿಣವಾಗುತ್ತದೆ. ಇದಕ್ಕಾಗಿ ಮುಂದಿನ ಕೆಲವು ವಿಷಯಗಳನ್ನು ಮಾಡಬಹುದಾಗಿದೆ –
೨. ಸುಲಭವಾಗಿ ಮಾಡಬಹುದಾದ ಸರಳ-ಸುಲಭ ಚಿಕಿತ್ಸೆಗಳು
ಅ. ಸುಮಾರು ೨೦ ನಿಮಿಷಗಳ ಕಾಲ ಮುಂದೆ-ಹಿಂದೆ ಬಗ್ಗುವ ವ್ಯಾಯಾಮ ಅಥವಾ ಯೋಗಾಸನಗಳನ್ನು ಮಾಡುವುದು.
ಆ. ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು
ಇ. ಅಡುಗೆ ಮಾಡುವಾಗ ನಿಂತುಕೊಂಡೇ ಕುತ್ತಿಗೆಯ ಮತ್ತು ಕೈಗಳ ಕೀಲುಗಳ ವ್ಯಾಯಾಮ ಮಾಡಬೇಕು.
ಈ. ಆಮ್ಲಪಿತ್ತ ಮತ್ತು ಕುತ್ತಿಗೆ ನೋವು ಇವುಗಳ ಹತ್ತಿರದ ಸಂಬಂಧವಿರುವುದರಿಂದ ಆ ಕಡೆಗೆ ಗಮನ ನೀಡಬೇಕು.
ಉ. ಹೊಟ್ಟೆ ಪೂರ್ತಿ ಸ್ವಚ್ಛವಾಗುವ ಕಡೆಗೆ ಗಮನವಿಡಬೇಕು.
ಊ. ಜಾಗರಣೆ, ತಂಗಳು, ಹುಳಿ, ಉಪ್ಪು, ಖಾರ ಈ ರುಚಿಗಳ ಮತ್ತು ಕುರುಕುಲು ತಿಂಡಿಗಳ ಸೇವನೆ ಕಡಿಮೆ ಮಾಡಬೇಕು.
ಎ. ಹಾಲುಣಿಸುವ ಮಹಿಳೆಯರು ‘ಭಂಗಿ’ (ಪೊಶ್ಚರ್)ಯ ಕಡೆಗೆ ವಿಶೇಷ ಗಮನ ನೀಡಬೇಕು.
ಏ. ಕುತ್ತಿಗೆ, ಕೀಲುಗಳು ಮತ್ತು ಸೊಂಟ ಇವುಗಳಿಗೆ ಸ್ನಾನದ ಮೊದಲು ನಿಯಮಿತವಾಗಿ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು.
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಪುಣೆ.