ಪ್ರತಿಯೊಬ್ಬ ಸಾಧಕನ ಸೂಕ್ಷ್ಮ ಪರೀಕ್ಷಣೆಯಲ್ಲಿ ವ್ಯತ್ಯಾಸವಿರುವುದರ ಕಾರಣಗಳು ಹಾಗೂ ಅದರಿಂದ ಸಿಗುವ ಆನಂದ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ಸಾಧಕರಲ್ಲಿ ಸೂಕ್ಷ್ಮವನ್ನು ಅರಿತುಕೊಳ್ಳುವ ಕ್ಷಮತೆ ಬೇರೆ ಬೇರೆ ಇರುವುದರಿಂದ ಸೂಕ್ಷ್ಮಪರೀಕ್ಷಣೆಯಲ್ಲಿ ವ್ಯತ್ಯಾಸ ಬರುತ್ತದೆ

‘ಯಾವುದಾದರೊಂದು ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಬಹಳಷ್ಟು ಸಲ ಪರೀಕ್ಷಣೆಯನ್ನು ಮಾಡುವ ಸಾಧಕರ ಪರೀಕ್ಷಣೆಯಲ್ಲಿ ವ್ಯತ್ಯಾಸ ಬರುತ್ತಿತ್ತು. ಪ್ರತಿಯೊಬ್ಬರ ಪರೀಕ್ಷಣೆ ಬೇರೆಯೆ ಆಗಿರುತ್ತಿತ್ತು; ಆದರೆ ಅದರ ಅರ್ಥ ಮಾತ್ರ ಒಂದೇ ಆಗಿರುತ್ತಿತ್ತು. ಪರಾತ್ಪರ ಗುರು ಡಾಕ್ಟರರಿಗೆ ‘ನಮ್ಮ ಪರೀಕ್ಷಣೆಯಲ್ಲಿ ವ್ಯತ್ಯಾಸ ಏಕೆ ಬರುತ್ತದೆ ?’, ಎಂದು ಕೇಳಿದಾಗ ಅವರು, ”ಸೂಕ್ಷ್ಮ ಜಗತ್ತಿನ ವ್ಯಾಪ್ತಿ ವಿಶಾಲವಾಗಿರುವುದರಿಂದ ಮಾನವನಿಗೆ ಈ ಜಗತ್ತನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ಕ್ಷಮತೆಗೆ ಮಿತಿಯಿರುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಸೂಕ್ಷ್ಮಜ್ಞಾನದ ಕ್ಷಮತೆಗನುಸಾರ ಪರೀಕ್ಷಣೆ ಮಾಡುತ್ತಾರೆ” ಎಂದರು. ಪರಾತ್ಪರ ಗುರು ಡಾಕ್ಟರರು ಈ ದೃಷ್ಟಿಕೋನವನ್ನು ವಿವರಿಸಲು ನಮಗೆ ಒಂದು ಉದಾಹರಣೆಯನ್ನು ನೀಡಿದರು, ”ಒಂದು ವೇಳೆ ನಿಮ್ಮೆಲ್ಲ ಸಾಧಕರಿಗೆ ಒಂದು ಕೋಣೆಯ ಪರೀಕ್ಷಣೆ ಮಾಡಲು ಹೇಳಿದರೆ, ಒಬ್ಬ ಸಾಧಕ, ಕೋಣೆಯಲ್ಲಿ ಫ್ಯಾನ್, ಕಪಾಟು, ಸ್ಟೂಲ್‌ ಇದೆ ಎಂದು ಹೇಳುವನು, ಇನ್ನೊಬ್ಬ ಸಾಧಕ ಕೋಣೆಯಲ್ಲಿ ಫ್ರಿಡ್ಜ್‌, ಸೋಫಾ ಮತ್ತು ದೂರದರ್ಶನ ಉಪಕರಣವೂ ಇದೆ ಎಂದು ಹೇಳಬಹುದು. ಇಬ್ಬರ ಪರೀಕ್ಷಣೆಯಲ್ಲಿ ವ್ಯತ್ಯಾಸವಿದ್ದರೂ, ಅದು ತಪ್ಪಲ್ಲ. ಇಬ್ಬರೂ ತಮ್ಮ ತಮ್ಮ ಕ್ಷಮತೆಗನುಸಾರ ಸರಿಯಾಗಿದ್ದಾರೆ. ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಯಾರಿಗೆ ಏನು ಕಾಣಿಸುತ್ತದೆ ? ಏನು ಅರಿವಾಗುತ್ತದೆ ? ಎಂಬುದನ್ನು  ನಮಗೆ ಹೇಳಲು ಸಾಧ್ಯವಿಲ್ಲ. ಅದು ಆ ಸಾಧಕ ಆ ಘಟನೆಯಲ್ಲಿನ ಯಾವ ವಿಷಯದೊಂದಿಗೆ ಏಕರೂಪವಾಗುತ್ತಾನೆಯೋ, ಅದನ್ನು ಅವಲಂಬಿಸಿರುತ್ತದೆ. ಒಬ್ಬ ಸಾಧಕ ಕೋಣೆಯಲ್ಲಿನ ಫ್ರಿಡ್ಜ್‌ನ ಸ್ಪಂದನಗಳೊಂದಿಗೆ ಏಕರೂಪವಾದರೆ ಹಾಗೂ ಆಯಾ ವಿಷಯದಲ್ಲಿ ಹೆಚ್ಚು ಏಕಾಗ್ರತೆಯಿಂದ ಆಳವಾಗಿ ಹೋಗಲು ಪ್ರಯತ್ನಿಸಿದರೆ, ಅವನಿಗೆ ಆ ಫ್ರಿಡ್ಜ್‌ನಲ್ಲಿ ಇಟ್ಟಿರುವ ವಸ್ತುಗಳೂ ಕಾಣಿಸಲು ಪ್ರಾರಂಭವಾಗುವುದು. ನೀವು ಆಯಾ ಸಮಯದಲ್ಲಿ ಯಾವ ವಿಷಯದೊಂದಿಗೆ ಏಕರೂಪವಾಗುತ್ತೀರೊ, ಅದಕ್ಕನುಸಾರ ನಿಮ್ಮ ಸೂಕ್ಷ್ಮ ಪರೀಕ್ಷಣೆಯ ಭಾಷೆ ಹಾಗೂ ಆ ಘಟನೆಯ ಬಗ್ಗೆ ಮಾಡಿದ ವಿಸ್ತಾರವಾದ ವಿವರಣೆ ಅವಲಂಬಿಸಿರುತ್ತದೆ. ಅದು ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ಇರಬಹುದು. ಮುಂದೆ ಸಾಧನೆ ಹೆಚ್ಚುತ್ತಾ ಹೋದಂತೆ ಒಂದೇ ಸಮಯದಲ್ಲಿ ಘಟನೆಯಲ್ಲಿನ ಅನೇಕ ವಿಷಯಗಳು ತಿಳಿಯಲು ಆರಂಭವಾಗುತ್ತದೆ ಹಾಗೂ ಸೂಕ್ಷ್ಮ ಪರೀಕ್ಷಣೆ ವಿಸ್ತಾರವಾಗಿ ಆಗಲು ಆರಂಭವಾಗುತ್ತದೆ.” ಈ ರೀತಿ ಪರಾತ್ಪರ ಗುರು ಡಾಕ್ಟರರು ನಮ್ಮ ಮುಂದೆ ಪ್ರತಿಯೊಬ್ಬ ಸಾಧಕನ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವ ವ್ಯತ್ಯಾಸದ ರಹಸ್ಯವನ್ನು  ನಮ್ಮ ಮುಂದೆ ತೆರೆದಿಟ್ಟರು.

೨. ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಹೆಚ್ಚೆಚ್ಚು ಚಿಂತನೆ ಹಾಗೂ ಪ್ರಾರ್ಥನೆ ಮಾಡಲು ಆರಂಭಿಸಿದ್ದರಿಂದ ಸೇವೆಯನ್ನು ಮಾಡುವಾಗ ಆನಂದ ಸಿಗುವುದು

  ಇದರಿಂದಾಗಿ ನಾವು ಯಾವುದಾದರೊಂದು ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಅದರ ಬಗ್ಗೆ ಹೆಚ್ಚೆಚ್ಚು ಚಿಂತನೆ ಮಾಡಿ, ಈಶ್ವರನಿಗೆ ಪ್ರಾರ್ಥನೆ ಮಾಡಿ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿದೆವು. ಇದರಿಂದ ನಮಗೆ ಈ ಸೇವೆಯನ್ನು ಮಾಡುವಾಗ ಬೇರೆಯೆ ಆನಂದ ಸಿಗಲು ಆರಂಭವಾಯಿತು. ಈ ಆನಂದವು ಸೂಕ್ಷ್ಮ ಪರೀಕ್ಷಣೆಯಲ್ಲಿನ ವ್ಯಾಪಕತೆಯದ್ದಾಗಿತ್ತು, ಎಂಬುದರಲ್ಲಿ ಸಂಶಯವಿಲ್ಲ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ ತಮಿಳುನಾಡು. (೬.೨.೨೦೨೨)