೧. ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !
೨. ಮನಸ್ಸಿಗೆ ಭಾವ ಪೂರ್ಣ ಪ್ರಾರ್ಥನೆಯ ಮತ್ತು ಶರಣಾಗತಿಯನ್ನು ವ್ಯಕ್ತಪಡಿಸುವ ಅಭ್ಯಾಸವನ್ನು ಮಾಡಿಸಬೇಕು.
೩. ಶರಣಾಗತಿಯು ಸಾಧಕರಿಗಾಗಿ ಪ್ರಾಣವಾಯು ಆಗಿದೆ. ಆಧ್ಯಾತ್ಮಿಕ ತೊಂದರೆ ಆಗುತ್ತಿರುವಾಗ ಶರಣಾಗುವುದೊಂದೇ ಪರಿಹಾರವಾಗಿದೆ. ಶರಣಾಗುವುದರಿಂದಲೇ ಸೇವೆಯನ್ನು ಮಾಡಬಲ್ಲೆವು.
೪. ಸೇವೆಯನ್ನು ಮಾಡುವಾಗ ಈಶ್ವರನ ಕಡೆಗೆ ಸಾಧಕರ ಮಾರ್ಗಕ್ರಮಣವಾಗಬೇಕು ! ಅನುಭೂತಿಗಳು ಬರುವುದು ಮತ್ತು ಆಧ್ಯಾತ್ಮಿಕ ಮಟ್ಟ ಹೆಚ್ಚಳವಾಗುವುದು, ಇವೆಲ್ಲ ಅದರ ಹಂತಗಳಾಗಿವೆ.
೫. ಇಷ್ಟವಾಗುವಂತಹ ಸೇವೆಯನ್ನು ಯಾರೂ ಸಹಜವಾಗಿ ಮಾಡಬಹುದು; ಆದರೆ ಯಾವ ಸೇವೆಯು ಸಾಧ್ಯವಾಗುವುದಿಲ್ಲವೋ, ಅದನ್ನು ಮಾಡಲು ಪ್ರಯತ್ನಿಸಬೇಕು ಮತ್ತು ಅನಂತರ ಅದರ ಮುಂದಿದ್ದನ್ನು ಕಲಿಯಬೇಕು. ಹೀಗೆ ಕಲಿಯುತ್ತಿದ್ದರೆ, ಆನಂದ ಸಿಗುತ್ತದೆ.