Chinese Nationals Arrested : ಭಾರತಕ್ಕೆ ನುಸುಳುತ್ತಿದ್ದ ಚೀನೀ ಪ್ರಜೆಗಳು ಸಹಿತ ಅವರಿಗೆ ಸಹಾಯ ಮಾಡುತ್ತಿದ್ದ ಭಾರತೀಯನ ಬಂಧನ !

ಮಹಾರಾಜಗಂಜ್ (ಉತ್ತರ ಪ್ರದೇಶ) – ಭಾರತ-ನೇಪಾಳದ ಸೊನೌಲಿ ಗಡಿಯಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಇವರೊಂದಿಗೆ ಟಿಬೆಟಿಯನ್ ಮೂಲದ ಓರ್ವ ನಿರಾಶ್ರಿತನೂ ಸಿಕ್ಕಿದ್ದಾನೆ. ಪೋಲೀಸರು ಪರಿಶೀಲನೆ ಮಾಡಿದಾಗ ಈತನಿಂದ ಭಾರತೀಯ ಆಧಾರ್ ಕಾರ್ಡ್ ಸಿಕ್ಕಿದೆ. ಅವರು ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ 2 ವಿವಿಧ ವಿಳಾಸಗಳಲ್ಲಿ ಆಧಾರ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು. ಇದರಲ್ಲಿ ಅವರಿಗೆ ದೆಹಲಿಯಲ್ಲಿ ನೆಲೆಸಿರುವ ಟಿಬೆಟಿಯನ್ ಮೂಲದ ಭಾರತೀಯ ಪ್ರಜೆಯೊಬ್ಬರು ನೆರವು ನೀಡಿದ್ದರು. ಈ ಮೂವರನ್ನೂ ಬಂಧಿಸಲಾಗಿದೆ.

ಭದ್ರತಾ ಪಡೆಗಳು ಹಿಡಿದ ನಂತರ, ಇಬ್ಬರು ಮೂಕರಂತೆ ನಟಿಸಲು ಪ್ರಯತ್ನಿಸುತ್ತಿದ್ದರು; ಆದರೆ ಸೈನಿಕರು ಕಠಿಣವಾಗಿ ತನಿಖೆ ಮಾಡಿದಾಗ ಅವರು ಮಾತನಾಡಲು ಪ್ರಾರಂಭಿಸಿದರು. ಮೊದಲಿಗೆ ಅವರು ಔಷಧಿ ತಯಾರಿಸುವ ವ್ಯಾಪಾರದಲ್ಲಿದ್ದು ಗಿಡಮೂಲಿಕೆಗಳನ್ನು ಹುಡುಕಿಕೊಂಡು ಭಾರತಕ್ಕೆ ಬಂದಿರುವುದಾಗಿ ಹೇಳಿದರು; ಆದರೆ ಭದ್ರತಾ ಪಡೆಗಳು ಅವರನ್ನು ನಂಬಲಿಲ್ಲ. ಪಾಸ್‌ಪೋರ್ಟ್ ಪರಿಶೀಲನೆ ನಡೆಸಿದಾಗ ಅವರು ಚೀನಾ ಪ್ರಜೆ ಎಂಬುದು ಬೆಳಕಿಗೆ ಬಂದಿದೆ. ಅವರಲ್ಲಿ ಒಬ್ಬನನ್ನು ಜೂ ವಾಕ್ಯಾಂಗ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನನ್ನು ಯಾಂಗ್ ಮೆಂಗ್‌ಮೆಂಗ್ ಎಂದು ಗುರುತಿಸಲಾಗಿದೆ. ಟಿಬೆಟಿಯನ್ ಮೂಲದ ಲುವ್ಸಾಂಗ್ ತ್ಸೆರಿಂಗ್ ಅವರನ್ನು ಭಾರತದಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದರು. ಅವರನ್ನು ಗೋರಖ್‌ಪುರಕ್ಕೆ ಕಳುಹಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ಈ ಕೆಲಸಕ್ಕಾಗಿ ಅವನು ಚೀನಾ ಪ್ರಜೆಗಳಿಂದ 40 ಸಾವಿರ ರೂಪಾಯಿ ತೆಗೆದುಕೊಂಡಿದ್ದ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳಿಂದಲೇ ಭಾರತಕ್ಕೆ ದೊಡ್ಡ ಅಪಾಯ. ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸಬೇಕು !