ಶ್ರೀಕೃಷ್ಣ ಜನ್ಮಭೂಮಿಯ ಕುರಿತಾದ ಮುಸ್ಲಿಂ ಪಕ್ಷದ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ ಹೈಕೋರ್ಟ್

ಈಗ ಉಚ್ಚ ನ್ಯಾಯಾಲಯದಲ್ಲಿ ಹಿಂದೂಗಳ ಒಟ್ಟು 18 ಅರ್ಜಿಗಳ ವಿಚಾರಣೆ ನಡೆಯಲಿದೆ !

ಪ್ರಯಾಗರಾಜ (ಉತ್ತರ ಪ್ರದೇಶ) – ಅಲಹಾಬಾದ ಉಚ್ಚನ್ಯಾಯಾಲಯವು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷದ ಅರ್ಜಿಯನ್ನು ತಿರಸ್ಕರಿಸಿ ಹಿಂದೂಗಳ ಪರವಾಗಿ ಸಲ್ಲಿಸಿರುವ ಎಲ್ಲಾ 18 ಅರ್ಜಿಗಳ ವಿಚಾರಣೆ ನಡೆಸಲಿದೆ. ಮುಂದಿನ ವಿಚಾರಣೆ ಆಗಸ್ಟ್ 12 ರಂದು ನಡೆಯಲಿದೆ. ಈ ಸಂಬಂಧ ಉಭಯ ಪಕ್ಷಗಳ ವಾದ-ಪ್ರತಿವಾದಗಳು ಪೂರ್ಣಗೊಂಡ ಬಳಿಕ ನ್ಯಾಯಾಲಯ ಜೂನ್ 6ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈ ಅರ್ಜಿಗಳ ಮೂಲಕ ಹಿಂದೂಗಳು ‘ಶಾಹಿ ಈದ್ಗಾದ ಜಾಗ ಹಿಂದೂಗಳಿಗೆ ಸೇರಿದ್ದು, ಅದನ್ನು ಹಿಂದೂಗಳಿಗೆ ಮರಳಿ ನೀಡಬೇಕು ಮತ್ತು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

1. ಈ ಪ್ರಕರಣದಲ್ಲಿ ಹಿಂದೂ ಪಕ್ಷ ಸಲ್ಲಿಸಿರುವ ಅರ್ಜಿಯಲ್ಲಿ ಶಾಹಿ ಈದ್ಗಾ ಮಸೀದಿಯ ಭೂಮಿ ಹಿಂದೂಗಳ ಭೂಮಿ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಅಲ್ಲಿ ಪೂಜೆ ಮಾಡುವ ಹಕ್ಕನ್ನು ನೀಡುವಂತೆ ಆಗ್ರಹಿಸಿದ್ದಾರೆ.

2. ಅದೇ ಸಮಯದಲ್ಲಿ, ಮುಸ್ಲಿಂ ಪಕ್ಷವು ಪೂಜಾ ಸ್ಥಳಗಳ ಕಾಯಿದೆ (ಪ್ಲೇಸಸ್ ಆಫ್ ವರ್ಶಿಪ್ 1991), ವಕ್ಫ್ ಕಾಯಿದೆ ಇತ್ಯಾದಿ ಕಾಯಿದೆಗಳ ಸಂದರ್ಭ ಉಲ್ಲೇಖಿಸಿ ಹಿಂದೂಗಳ ಅರ್ಜಿಗಳನ್ನು ತಿರಸ್ಕರಿಸಲು ವಾದಿಸಿತ್ತು. ಮಥುರಾ ನ್ಯಾಯಾಲಯದಲ್ಲಿ, ಹಿಂದೂ ಪಕ್ಷವು ಸಲ್ಲಿಸಿದ 18 ಪ್ರತ್ಯೇಕ ಸಿವಿಲ್ ಮೊಕದ್ದಮೆಗಳ ನಿರ್ವಹಣೆಯನ್ನು ಪ್ರಶ್ನಿಸಲಾಯಿತು. ಶಾಹಿ ಈದ್ಗಾ ಸಮಿತಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಉಚ್ಚ ನ್ಯಾಯಾಲಯ ಈ ಮೇಲಿನ ತೀರ್ಪು ನೀಡಿದೆ.

3. ಅಲಹಾಬಾದ ಉಚ್ಚ ನ್ಯಾಯಾಲಯವು 18 ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಿತ್ತು. ಈ ಕುರಿತು ತೀರ್ಪು ನೀಡುವಾಗ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.