ಶಿವನ ದೇವಾಲಯದ ಬಳಿ ಇರುವ ಮದ್ಯದಂಗಡಿ ತೆಗೆಯಲು ಒತ್ತಾಯ !

ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಅಯೋಧ್ಯೆ – ಅಲಹಾಬಾದ್ ಹೈಕೋರ್ಟ್ ಜುಲೈ 22 ರಂದು ಖಿಹರಾನ್‌ನ ಮಿಲ್ಕಿಪುರದಲ್ಲಿರುವ ಭಗವಾನ ಶಿವನ ಶ್ರಾವಣ ಶ್ರಮ ಮಂದಿರದ ಬಳಿ ಇರುವ ಮದ್ಯದ ಅಂಗಡಿಯನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿತು. ಈ ಸಂಬಂಧ ಅಯೋಧ್ಯೆಯ ಜಿಲ್ಲಾ ಅಬಕಾರಿ ಅಧಿಕಾರಿಯಿಂದ ಹೈಕೋರ್ಟ್ ಉತ್ತರ ಕೇಳಿದೆ. ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸ್ವಾಮಿ ಕೃಷ್ಣಾಚಾರ್ಯ ಅಲಿಯಾಸ್ ಕಾಳಿ ಪ್ರಸಾದ್ ಮಿಶ್ರಾ ಸಲ್ಲಿಸಿದ್ದಾರೆ. ಅವರ ಪರವಾಗಿ ವಕೀಲ ಹರೇಂದ್ರ ಸಿಂಗ್ ಮತ್ತು ವಕೀಲ ಸತೀಶ್ ಕುಮಾರ್ ಶರ್ಮಾ ಅವರು ದೇವಸ್ಥಾನದ ಆವರಣದಲ್ಲಿ ಮದ್ಯದಂಗಡಿ ನಡೆಸುವುದರಿಂದ ಶ್ರಾವಣ ಮಾಸದಲ್ಲಿ ಭಕ್ತರಿಗೆ ತೊಂದರೆಯಾಗುತ್ತದೆ ಎಂದು ವಾದಿಸಿದರು. ದೇವಸ್ಥಾನದ ಪಕ್ಕದಲ್ಲಿರುವ ಮದ್ಯದಂಗಡಿಯನ್ನು ಕೂಡಲೇ ತೆಗೆದುಹಾಕಬೇಕು, ಶ್ರಾವಣದ ಮಾಸದಲ್ಲಿ ಭಕ್ತರು ಶಿವನ ಪೂಜೆ ಮಾಡಲು ಸಾಧ್ಯವಾಗಬಹುದು ಎಂದು ಹೇಳಿದ್ದಾರೆ.

1. ಅರ್ಜಿದಾರರು ಅಯೋಧ್ಯೆಯ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದರು; ಆದರೆ ಅಂಗಡಿ ಮುಚ್ಚಿದರೆ ಅಬಕಾರಿ ಇಲಾಖೆಗೆ ಆರ್ಥಿಕ ನಷ್ಟವಾಗುತ್ತದೆ ಎಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಿತ್ತು. (ಆದಾಯ ಗಳಿಸಲು ದೇವಸ್ಥಾನದ ಆವರಣದಲ್ಲಿ ಮದ್ಯದಂಗಡಿಗಳನ್ನು ನಡೆಸುವ ಮತ್ತು ಬೆಂಬಲಿಸುವ ಆಡಳಿತದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಿ ! – ಸಂಪಾದಕರು)

2. ಮದ್ಯದಂಗಡಿಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

3. ನ್ಯಾಯಮೂರ್ತಿ ಸಂಗೀತಾ ಚಂದ್ರ ಮತ್ತು ನ್ಯಾಯಮೂರ್ತಿ ಶ್ರೀಪ್ರಕಾಶ್ ಸಿಂಗ್ ಅವರ ಪೀಠವು 100 ಮೀಟರ್ ಕಡ್ಡಾಯ ಅಳತೆಗೆ ಅನುಸರಿಸಿದ ಕಾರ್ಯವಿಧಾನದ ಬಗ್ಗೆ ಜಿಲ್ಲಾ ಅಬಕಾರಿ ಅಧಿಕಾರಿಗಳ ಬಳಿ ವೈಯಕ್ತಿಕ ಅಫಿಡವಿಟ್ ಕೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 31 ರಂದು ನಡೆಯಲಿದೆ.

ಸಂಪಾದಕೀಯ ನಿಲುವು

ಹಿಂದೂಗಳು ಇಂತಹ ಅರ್ಜಿಯನ್ನು ಸಲ್ಲಿಸುವ ಪ್ರಮೇಯ ಏಕೆ ಬರುತ್ತದೆ ? ಸಂಬಂಧಪಟ್ಟವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !