ಸಾರ್ವಜನಿಕರ ತೀವ್ರ ವಿರೋಧ
ತುಮಕೂರು – ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಕೆಡವಿ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ (ಮಾಲ್) ನಿರ್ಮಿಸಲು ತುಮಕೂರು ನಗರ ಪಾಲಿಕೆಯು ಯೋಜಿಸಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ರದ್ದಾಗಿದ್ದ ಈ ಯೋಜನೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಚಾಲನೆ ನೀಡಲಾಗಿದೆ.
Jago Hindu,
Tumkur City Corporation has illegally registered a 1.30 acre land worth Rs 70 crore near Vinayaka Temple near Tumkur main bus stand for a multi-utility mall in the name of PK Mohammed of UK Monu Timber, Kanachuru Islamic Education Trust & contractor Mohammed Ibrahim. pic.twitter.com/aJYYQdqbkb
— 🚩Mohan Gowda🇮🇳 (@MohanGowda_HJS) July 25, 2024
1. ನಗರಪಾಲಿಕೆಯ ಈ ನಿರ್ಧಾರಕ್ಕೆ ಶಾಸಕರು, ರಾಜಕೀಯ ಮುಖಂಡರು, ಹಿಂದುತ್ವವಾದಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯೋಜನೆ ಕೈಬಿಡುವಂತೆ ಕೋರಿದ್ದಾರೆ. ಈ ಬಗ್ಗೆ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಹಿಂದುತ್ವವಾದಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
2. 2 ವರ್ಷಗಳ ಹಿಂದೆ ಈ ಯೋಜನೆ ಜಾರಿಗೊಳಿಸಲು ತುಮಕೂರು ನಗರಸಭೆ ಹಾಗೂ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ’ (ಎಪಿಎಂಸಿ) ಮುಂದೆ ಬಂದಿತ್ತು. ಈ ಯೋಜನೆ ಅನುಷ್ಠಾನಗೊಳಿಸಲು ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಕೆಡವಲು ಯತ್ನಿಸಿದಾಗ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ವಿರೋಧದಿಂದಾಗಿ ಆಗ ಯೋಜನೆಯನ್ನು ರದ್ದುಗೊಳಿಸಲಾಗಿತ್ತು.
ಸಂಪಾದಕೀಯ ನಿಲುವುದೇವಸ್ಥಾನದ ಜಾಗದಲ್ಲಿ ಮಸೀದಿ ಇದ್ದಿದ್ದರೆ ತುಮಕೂರು ನಗರ ಪಾಲಿಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿತ್ತೇ ? ಕಾಂಗ್ರೆಸ್ ರಾಜ್ಯದಲ್ಲಿ ಇದಕ್ಕಿಂತ ಬೇರಿನ್ನೇನು ನಡೆಯಬಹುದು ? |