ಕೃತಜ್ಞತೆಯ ಭಾವ

ಶ್ರೀ. ರಮಣ ಮಹರ್ಷಿ

ನರಕದ ದವಡೆಯಿಂದ ಮರಳಿ ತಂದ ಗುರುಗಳ ಬಗ್ಗೆ ಕೃತಜ್ಞತೆ ಬಿಟ್ಟು ಬೇರೆ ಯಾವ ಭಾವವಿರಲು ಸಾಧ್ಯ ?

ಒಂದೊಮ್ಮೆ ನೀವು ನನ್ನನ್ನು ಗುರು ಎಂದು ಒಪ್ಪಿಕೊಂಡು, ನಂತರ ನೀವು ನನ್ನನ್ನು ಬಿಟ್ಟರೂ ನಾನು ನಿಮ್ಮನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಈ ಆಶ್ವಾಸನೆಯು ಎಲ್ಲರಿಗಾಗಿದೆ. ಹುಲಿಯು ತನ್ನ ದವಡೆಯಲ್ಲಿ ಸಿಕ್ಕಿದ ಪ್ರಾಣಿಯನ್ನು ಯಾವ ರೀತಿ ಬಿಡುವುದಿಲ್ಲವೋ, ಅದೇ ರೀತಿಯಾಗಿ ಯಾರ ಮೇಲೆ ಗುರುಗಳು ಕೃಪೆಯನ್ನು ಮಾಡುವರೋ, ಅವನು ಮೋಕ್ಷಕ್ಕೆ ಹೋಗುವವರೆಗೂ ಗುರುಗಳು ಅವನನ್ನು ಎಂದಿಗೂ ಬಿಟ್ಟುಬಿಡುವುದಿಲ್ಲ. ಶಿಷ್ಯನು ನರಕಕ್ಕೆ ಹೋಗುತ್ತಿದ್ದಲ್ಲಿ, ಭಗವಂತನು (ಅಂದರೆ ನಾನು ರಮಣ) ನಿಮ್ಮ ಹಿಂದೆ ಹಿಂದೆ ಹೋಗಿ ಮತ್ತೆ ನಿಮ್ಮನ್ನು ಕರೆದುಕೊಂಡು ಮರಳಿ ತರುವನು. ನೀವು ಅಂತರ್ಮುಖರಾಗಬೇಕು’, ಅಂತಹ ಪರಿಸ್ಥಿತಿಯನ್ನು ಗುರುಗಳು ತಂದಿಡುತ್ತಾರೆ. ನಿಮ್ಮನ್ನು ಆತ್ಮದಕಡೆಗೆ ಅಂದರೆ ಬ್ರಹ್ಮನಕಡೆಗೆ ಕರೆದುಕೊಂಡು ಹೋಗಬೇಕೆಂದು ಗುರುಗಳು ಒಳಗೂ ಅಂದರೆ ಹೃದಯದಲ್ಲೂ ಸಿದ್ಧತೆಯನ್ನು ಮಾಡುತ್ತಿರುತ್ತಾರೆ. ನೀವು ನನಗೆ ಶರಣಾಗಿರಿ, ಎಂದರೆ ನಿಮ್ಮ ಮನೋಲಯ ವಾಗುವವರೆಗೂ ನಾನು ನಿಮ್ಮ ಮನಸ್ಸನ್ನು ಹಿಡಿತಕ್ಕೆ ತೆಗೆದು ಕೊಳ್ಳುತ್ತೇನೆ. ನೀವು ಶಾಂತಿಯಿಂದಿರಿ. – ರಮಣ ಮಹರ್ಷಿಗಳು.

`ಒಟ್ಟಿನಲ್ಲಿ ಮಾನವನದೆಲ್ಲವೂ ಸೀಮಿತವಾಗಿರುತ್ತದೆ ಮತ್ತು ಈಶ್ವರನದೆಲ್ಲವೂ ಸೀಮಾತೀತವಾಗಿರುತ್ತದೆ, ಉದಾ. ಅವನ ಸರ್ವಜ್ಞತೆ, ಸರ್ವಶಕ್ತಿಮಾನತೆ, ಸರ್ವವ್ಯಾಪಕತೆ ಮುಂತಾದವುಗಳು. ಆದುದರಿಂದಲೇ ಶಂಕರಾಚಾರ್ಯರು ಮುಂದಿನಂತೆ ಹೇಳಿದ್ದಾರೆ, `ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪೃಥ್ವಿಯಷ್ಟು ಕಾಗದ, ಪರ್ವತದಷ್ಟು ಲೇಖನಿ ಮತ್ತು ಸಮುದ್ರದಷ್ಟು ಮಸಿ ಇದ್ದರೂ ಅದು ಸಾಕಾಗುವುದಿಲ್ಲ.’

– (ಪರಾತ್ಪರಗುರು) ಡಾ. ಆಠವಲೆ

ಕೃತಜ್ಞತೆಯಿಂದ ಅನುಭವಿಸಿದ ಭಾವಾವಸ್ಥೆ,ಧ್ಯಾನಾವಸ್ಥೆ, ಮತ್ತು ಆನಂದಾವಸ್ಥೆ !

ಪ್ರತಿಯೊಂದು ಕೃತಿ ಕಲಿತ ನಂತರ ಒಮ್ಮೆ ಮಾತ್ರ ಕೃತಜ್ಞತೆಯು ವ್ಯಕ್ತವಾಗುವುದು ಮತ್ತು ಪ್ರಾರ್ಥನೆಯನ್ನು ಮಾಡಿ ೧೦೦ ಬಾರಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾಗ ೨೦ ರಿಂದ ೨೫ ನಿಮಿಷ ಧ್ಯಾನ ತಗಲುವುದು ! : `೧೩.೬.೨೦೦೮ ರಂದು ನಾನು ಧ್ಯಾನಮಂದಿರಕ್ಕೆ ಹೋಗಿದ್ದಾಗ `ಪ.ಪೂ. ಡಾಕ್ಟರರು ಪ್ರತಿದಿನ ನನಗೆ ಅನೇಕ ಕೃತಿಗಳನ್ನು ಸೇವೆಯೆಂದು ಹೇಗೆ ಮಾಡಬೇಕು’, ಎಂಬುದನ್ನು ಕಲಿಸುತ್ತಿರುತ್ತಾರೆ ಮತ್ತು ಪ್ರತಿಯೊಂದು ಕೃತಿಯನ್ನು ಕಲಿತ ನಂತರ ನಾನು ಒಮ್ಮೆ ಮಾತ್ರ `ಹೇ ಗುರುದೇವ ನಿಮ್ಮ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತ ಮಾಡುತ್ತೇನೆ’, ಎಂದು ಶಬ್ದಗಳಲ್ಲಿ ಹೇಳುತ್ತೇನೆ. ಅದರಿಂದ ನನಗೆ ಸಮಾಧಾನ ಸಿಗುತ್ತಿರಲಿಲ್ಲ. ಆದುದರಿಂದ `ಹೇ ಗುರುದೇವ, ನೀವು ಯಾವುದೇ ಒಂದು ಕೃತಿಯನ್ನು ಕಲಿಸಿದಾಗ, ನನ್ನಿಂದ ೧೦೦ ಬಾರಿ ಕೃತಜ್ಞತೆಯನ್ನು ವ್ಯಕ್ತ ಮಾಡಿದ ಭಾವವು ಮನಸ್ಸಿನಲ್ಲಿ ನಿರ್ಮಾಣವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಿದೆ. ಅನಂತರ ಮನಸ್ಸಿನಲ್ಲಿ `ಗುರುದೇವರು ಆ ರೀತಿಯ ಭಾವವನ್ನು ಮನಸ್ಸಿನಲ್ಲಿ ಮೂಡಿಸಿದರೆ ಅದು ನನಗೆ ಹೇಗೆ ತಿಳಿಯುವುದು ?’ ಎಂಬ ವಿಚಾರ ಬಂದು `ಹೇ ಗುರುದೇವ, ಈ ಕೃತಿಯನ್ನು (ಸೇವೆ ಯನ್ನು) ಕಲಿಸಿದುದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ’, ಎಂದು ಎದ್ದು ನಿಂತು ೧೦೦ ಬಾರಿ ಹೇಳುತ್ತಿರುವಾಗ ನನಗೆ ೨೦ ರಿಂದ ೨೫ ನಿಮಿಷಗಳ ಕಾಲ ಧ್ಯಾನ ತಗಲಿತು. ಆ ಸಮಯದಲ್ಲಿ ಹೃದಯದಲ್ಲಿ ಮೂಡಿದ್ದ ಭಾವ ಮತ್ತು ಏಕಾಗ್ರತೆಯನ್ನು ಅನುಭವಿಸುತ್ತಿರುವಾಗ ಬಹಳ ಆನಂದ ಸಿಗುತ್ತಿತ್ತು. ಈಗ ನನಗೆ ೧೦೦ ಬಾರಿ ಕೃತಜ್ಞತೆಯನ್ನು ವ್ಯಕ್ತ ಪಡಿಸಿದ ಮೇಲೆ ಭಾವವು ಹೇಗೆ ಮೂಡಬಲ್ಲದು ಎಂದು ತಿಳಿಯಿತು.’

– ಶ್ರೀ. ಅಶೋಕ ನಾಯಿಕ, ಸನಾತನ ಆಶ್ರಮ, ರಾಮನಾಥಿ, ಗೋವಾ.