ಸಂತಪದವಿಯಲ್ಲಿ ವಿರಾಜಮಾನರಾದ ಕೇರಳದ ಕೊಚ್ಚಿಯ ತ್ಯಾಗಿವೃತ್ತಿಯ ದಿ. (ಶ್ರೀಮತಿ) ಸೌದಾಮಿನಿ ಕೈಮಲ (ವಯಸ್ಸು ೮೨ ವರ್ಷ) !

ಪೂ. (ಶ್ರೀಮತಿ) ಸೌದಾಮಿನಿ ಮಾಧವನ್ ಕೈಮಲ

ರಾಮನಾಥಿ (ಗೋವಾ) – ಪ್ರೇಮಭಾವ, ತ್ಯಾಗ ವೃತ್ತಿ ಮತ್ತು ಅನೇಕ ಗುಣಗಳಿಂದ ತುಂಬಿರುವ ಕೇರಳದ ಸನಾತನದ ಸಾಧಕಿ ದಿ. (ಶ್ರೀಮತಿ) ಸೌದಾಮಿನಿ ಮಾಧವನ್ ಕೈಮಲ (ದೇಹತ್ಯಾಗ : ೬.೭.೨೦೨೪) ಇವರು ಸನಾತನದ ೧೨೮ ನೇ ಸಂತಪದವಿಯಲ್ಲಿ ವಿರಾಜಮಾನರಾಗಿರುವ ಆನಂದವಾರ್ತೆಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಒಂದು ಸಂದೇಶದ ಮೂಲಕ ನೀಡಿದರು.

ಕೈ. ಕೈಮಲ ಅಜ್ಜಿಯವರು ಕಳೆದ ೮ ವರ್ಷಗಳಿಂದ ಕೇರಳದ ಕೊಚ್ಚಿಯಲ್ಲಿನ ಸೇವಾಕೇಂದ್ರದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದರು. ಪೂ. ಕೈಮಲ ಅಜ್ಜಿಯವರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ದೃಢ ಶ್ರದ್ಧೆ ಇತ್ತು ಮತ್ತು ಅವರ ಬಗ್ಗೆ ತುಂಬಾ ಸಮರ್ಪಿತಭಾವ ಮತ್ತು ಕೃತಜ್ಞತಾಭಾವವಿತ್ತು. ಕಳೆದ ೧ ವರ್ಷದಿಂದ ಅವರ ಆರೋಗ್ಯವು ಹದಗೆಟ್ಟಿತ್ತು. ಅವರು ಕೊನೆಯವರೆಗೂ ನಿರಂತರ ನಾಮಜಪವನ್ನು ಮಾಡುತ್ತಿದ್ದರು. ಪೂ. ಕೈಮಲ ಅಜ್ಜಿಯವರನ್ನು ಕೇರಳದ ಸಾಧಕರು ಪ್ರೀತಿಯಿಂದ `ಅಮ್ಮ’ ಎಂದು ಕರೆಯುತ್ತಿದ್ದರು.

ಕೊನೆಯ ಉಸಿರಿನ ತನಕ ಸೇವೆ ಆಗಬೇಕು’, ಎಂಬ ತಳಮಳವಿದ್ದ ಮತ್ತು ಸನಾತನದ ೧೨೮ ನೇ ಸಂತಪದವಿಯಲ್ಲಿ ವಿರಾಜಮಾನರಾದ ದಿ. (ಶ್ರೀಮತಿ) ಸೌದಾಮಿನಿ ಮಾಧವನ್ ಕೈಮಲ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಕೇರಳದ ತ್ರಿಶ್ಯಿವಪೇರೂರ ಜಿಲ್ಲೆಯ ಶ್ರೀಮತಿ ಸೌದಾಮಿನಿ ಕೈಮಲ ಇವರು ಆರಂಭದಲ್ಲಿ ಮನೆಯಲ್ಲಿ ಒಬ್ಬರೇ ಇದ್ದು ಸಾಧನೆ ಮಾಡಿದರು. ಮನೆಯಲ್ಲಿ ಸಾಧನೆಯ ಬಗ್ಗೆ ಯಾರ ಮಾರ್ಗದರ್ಶನ ಇಲ್ಲದಿರುವಾಗಲೂ ಅವರು ಸಂತರ ಆಜ್ಞಾಪಾಲನೆಯನ್ನು ಮಾಡಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡಿದರು ಮತ್ತು ೨೦೧೨ ರಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರು. ಕಳೆದ ೮ ವರ್ಷಗಳಿಂದ ಅವರು ಕೇರಳದ ಕೊಚ್ಚಿ ಸೇವಾಕೇಂದ್ರದಲ್ಲಿದ್ದು ಸಾಧನೆಯನ್ನು ಮಾಡುತ್ತಿದ್ದರು. `ಪ್ರೇಮಭಾವ’ ಇದು ಶ್ರೀಮತಿ ಕೈಮಲಅಜ್ಜಿಯವರ ಸ್ಥಾಯಿಭಾವ (ಸ್ಥಿರಸ್ವರೂಪ) ವಾಗಿತ್ತು. ಅವರಿಗೆ ಎಲ್ಲ ಸಾಧಕರ ಬಗ್ಗೆ ನಿರಪೇಕ್ಷ ಪ್ರೀತಿ ಎನಿಸುತ್ತಿತ್ತು. ಎಲ್ಲರೊಂದಿಗೆ ಮಾತೃ ವಾತ್ಸಲ್ಯದಿಂದ ವರ್ತಿಸುವ ಅಜ್ಜಿಯವರು ಎಲ್ಲ ರೀತಿಯಲ್ಲಿ ಸಾಧಕರ `ಅಮ್ಮ’ ನಾದರು ಮತ್ತು ಸಾಧಕರ ಆಧಾರಸ್ತಂಭವಾದರು.

ಅನೇಕ ವರ್ಷಗಳಿಂದ ಅಜ್ಜಿಯವರು ಪ್ರತಿದಿನ ಮುಂಜಾನೆ ೪ ಗಂಟೆಗೆ ಎದ್ದು ನಾಮಜಪವನ್ನು ಮಾಡುತ್ತಿದ್ದರು. ಇಳಿವಯಸ್ಸಿನಲ್ಲಿ ಆಶ್ರಮಜೀವನವನ್ನು ಅಳವಡಿಸಿಕೊಂಡಿದ್ದರೂ ಸ್ವಾವಲಂಬನೆ, ಶಿಸ್ತುಬದ್ಧ ದಿನಚರಿ ಮತ್ತು ಆಯೋಜನಾಬದ್ಧ ಕೃತಿಗಳನ್ನು ಮಾಡುವುದು ಮುಂತಾದ ಗುಣಗಳಿಂದ ಅವರು ಸೇವಾಕೇಂದ್ರದಲ್ಲಿನ ಜೀವನದಲ್ಲಿ ಏಕರೂಪವಾಗಿದ್ದರು.

೬.೭.೨೦೨೪ ರಂದು ಕೈಮಲಅಜ್ಜಿಯವರು ದೇಹತ್ಯಾಗ ಮಾಡಿದರು. `ಸಾಧನೆಯ ಗಾಂಭೀರ್ಯ’, `ಜಿಗುಟುತನ’, `ತಳಮಳ’, `ದೇವರ ಮೇಲಿನ ಶ್ರದ್ಧೆ’ ಮತ್ತು `ಭಾವ’ ಈ ಗುಣಗಳಿಂದ ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಿಂದ ಆಗುತ್ತಿದೆ. ೨೦೨೩ ರಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೯ ರಷ್ಟಿತ್ತು. ಈಗ ಕೈಮಲಅಜ್ಜಿ ಯವರು ಶೇ. ೭೧ ರಷ್ಟು ಮಟ್ಟವನ್ನು ತಲುಪಿ `ವ್ಯಷ್ಟಿ ಸಂತರು’ಎAದು ಸನಾತನದ ೧೨೮ ನೇ ಸಂತಪದವಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಪೂ. ಅಜ್ಜಿಯವರ ಸುಪುತ್ರರಾದ ಶ್ರೀ. ನಂದಕುಮಾರ ಕೈಮಲ ಇವರೂ ಸಹ ಪೂರ್ಣವೇಳೆ ಸಾಧನೆಯನ್ನು ಮಾಡುತ್ತಿದ್ದು ಇವರ ಆಧ್ಯಾತ್ಮಿಕ ಉನ್ನತಿಯು ಒಳ್ಳೆಯ ರೀತಿಯಲ್ಲಿ ಆಗುತ್ತಿದೆ.

ದೇಹತ್ಯಾಗದ ನಂತರವೂ `ಪೂ. ಕೈಮಲಅಜ್ಜಿಯವರ ಆಧ್ಯಾತ್ಮಿಕ ಉನ್ನತಿಯು ಅತ್ಯಂತ ಶೀಘ್ರವಾಗಿ ಆಗುವುದು’, ಎಂಬುದು ನನಗೆ ಖಾತ್ರಿಯಿದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೭.೭.೨೦೨೪)