ಉಸಿರು ಇಲ್ಲದ ಮಾನವ ಜೀವನದ ಕಲ್ಪನೆಯೇ ನಿರರ್ಥಕ ಮತ್ತು ಶುದ್ಧ ಪ್ರಾಣವಾಯು (ಆಕ್ಸಿಜನ್) ಮನುಷ್ಯನ ನೈಸರ್ಗಿಕ ಅಧಿಕಾರವಾಗಿದೆ, ಅದು ಅವನಿಗೆ ಭೌತಿಕತೆ(ಲೌಕಿಕತೆ)ಯ ಹಿಂದೆ ಧಾವಿಸುವ ಇಂದಿನ ಜಗತ್ತಿನಲ್ಲಿ ಸಿಗುವುದಿಲ್ಲ, ಇದಕ್ಕೆ ಮನುಷ್ಯ ಮತ್ತು ಅವನ ದುರಾಸೆಯ ಪ್ರವೃತ್ತಿಯೇ ಕಾರಣವಾಗಿದೆ.
೧. ನಿಸರ್ಗವನ್ನು ಯೋಗ್ಯ ರೀತಿಯಲ್ಲಿ ಮತ್ತು ಕೃತಜ್ಞತಾಭಾವದಿಂದ ಹೇಗೆ ಬಳಸಬೇಕು ? ಎಂದು ನಮ್ಮ ವೇದಗಳ ಮತ್ತು ಪರಿಸರಕ್ಕೆ ಸಂಬಂಧಿಸಿದ ಸಂಸ್ಕೃತಿಯ ಮಾಧ್ಯಮದಿಂದ ಇಡೀ ಜಗತ್ತಿಗೆ ತಿಳಿಸಿಕೊಡಲಾಗಿದೆ. ಹೀಗಿರುವಾಗ ರಾಷ್ಟ್ರದಲ್ಲಿ ವಾಯು ಪ್ರದೂಷಣೆಯ ಸಂಕಟವಿದೆ, ಇದು ಒಂದು ವಿರೋಧಾಭಾಸವಲ್ಲದೇ ಮತ್ತೇನು ? ಈ ವಿರೋಧಾಭಾಸವು ನಮ್ಮ ರಾಷ್ಟ್ರೀಯ ಮೂಲ ಚರಿತ್ರೆಯು ಭ್ರಷ್ಟವಾದುದರಿಂದಲೇ ಉಂಟಾಗಿದೆ.
೨. ಯಾವ ರಾಷ್ಟ್ರದಲ್ಲಿ ಪರಿಸರದ ಶುದ್ಧಿಗಾಗಿ ನಿಯಮಿತವಾಗಿ ಹಸುವಿನ ತುಪ್ಪದ ಆಹುತಿಯನ್ನು ನೀಡಿ (ಗೋಘೃತ) ಯಜ್ಞ-ಯಾಗಗಳ ಹವನ ಮಾಡಲಾಗುತ್ತಿತ್ತೋ, ಅಲ್ಲಿ ಇಂದು ಗೋಹತ್ಯೆಗಾಗಿ ಕಸಾಯಿಖಾನೆಗಳನ್ನು ತೆರೆಯಲು ಸರಕಾರವೇ ಅನುಮತಿಯನ್ನು ನೀಡುತ್ತಿದ್ದರೆ, ಅಲ್ಲಿ ಪ್ರದೂಷಣೆಯಾಗುವುದರಲ್ಲಿ, ಆಶ್ಚರ್ಯವೇನಿಲ್ಲ !
೩. ಯಾವ ಸಂಸ್ಕೃತಿಯಲ್ಲಿ ಮರಗಳ ಪೂಜೆ ಮಾಡುವ ಸಂಪ್ರದಾಯವಿದೆಯೋ, ಇಂದು ಅಲ್ಲಿಯೇ ವಿಕಾಸದ (ಅಭಿವೃದ್ದಿಯ) ಹೆಸರಿನಲ್ಲಿ ಬಹಳಷ್ಟು ಮರಗಳ ಕಡಿಯುವಿಕೆ ನಿರಂತರವಾಗಿ ನಡೆದಿದೆ, ಹಾಗೆಯೇ ಅನೇಕ ವರ್ಷಗಳಿಂದ ದೇಶದಲ್ಲಿ ಪ್ರತಿವರ್ಷ ಅನೇಕ `ಸಸಿಗಳನ್ನು ನೆಡಲಾಗುತ್ತದೆ ಮತ್ತು ಭ್ರಷ್ಟಾಚಾರವೆಂಬ ರಾಕ್ಷಸನನ್ನು ಪೋಷಿಸಲಾಗುತ್ತದೆ, ಅದರಲ್ಲಿನ ಹೆಚ್ಚಿನ ಸಸಿಗಳು ಮರಗಳಾಗಲು ಸಾಧ್ಯವಿಲ್ಲ. ಹೀಗಿದ್ದಾಗ, ಪ್ರದೂಷಣೆ(ಮಾಲಿನ್ಯ)ಯಿಂದ ಮುಕ್ತಿ ಸಿಗಲು ಸಾಧ್ಯವಿದೆಯೇ ?
(ಆಧಾರ : ಸಾಮಾಜಿಕ ಜಾಲತಾಣ)
ನಮ್ಮಲ್ಲಿ ಭಾವವಿರುವುದರಿಂದ ಇತರರಿಗೆ ಬರುವ ಅನುಭೂತಿ ! ೧. ರಾಮನಾಥಿ ಆಶ್ರಮದಲ್ಲಿ ತೋಟದ ಗಿಡಗಳನ್ನು ನೋಡಿ ಅವುಗಳಲ್ಲಿ ಭಾವ ನಿರ್ಮಾಣವಾಗಿರುವುದರ ಅರಿವಾಗುವುದು ! : `ಕೆಲವು ಸಾಧಕರ ಜೊತೆಗೆ ನಾವು ರಾಮನಾಥಿ ಆಶ್ರಮದ ಮೇಲ್ಭಾಗದಲ್ಲಿರುವ ತೋಟವನ್ನು ನೋಡಲು ಹೋಗಿದ್ದೆವು. ನಾವು ಗುಡ್ಡವನ್ನು ಹತ್ತಲು ಪ್ರಾರಂಭಿಸಿದೆವು, ಆಗ `ಪ್ರತಿಯೊಂದು ಗಿಡವೂ ಪ.ಪೂ. ಡಾಕ್ಟರರ ಬಗ್ಗೆ ಇರುವ ಭಾವವನ್ನು ವ್ಯಕ್ತ ಪಡಿಸುತ್ತಿವೆ ಮತ್ತು ಎಲ್ಲ ಗಿಡಗಳಿಗೂ ತಾವು ಪ.ಪೂ. ಡಾಕ್ಟರರವರಾಗಿದ್ದೇವೆ ಎಂದೆನಿಸುತ್ತಿದೆ’, ಇದರ ಅರಿವಾಯಿತು. ಆನಂತರ `ಗಿಡಗಳಿಗೆ ಇಷ್ಟು ಭಾವವನ್ನು ಬೆಳೆಸಿಕೊಳ್ಳಲು ಹೇಗೆ ಸಾಧ್ಯವಾಗಿರಬಹುದು ?’, ಎಂಬ ವಿಚಾರವು ಮನಸ್ಸಿನಲ್ಲಿ ಬಂದಿತು. ನಂತರ ನಾನು ಆ ವಿಷಯವನ್ನು ಮರೆತು ಹೋದೆನು ಮತ್ತು ಗಿಡಗಳ ಬೇರೆ ಬೇರೆ ಬಣ್ಣ ಮತ್ತು ಸೌಂದರ್ಯವನ್ನು ನೋಡಲು ಆರಂಭಿಸಿದೆನು. ಇದೆಲ್ಲವನ್ನು ನೋಡಿ ನನ್ನ ಮನಸ್ಸಿಗೆ ಆನಂದ ಉಂಟಾಯಿತು. ಎಲ್ಲೆಡೆಯಲ್ಲಿ ಗಿಡಗಳ ಬಣ್ಣ ಅಚ್ಚ ಹಸಿರಾಗಿ ಕಾಣಿಸುತ್ತಿತ್ತು. ಗಿಡಗಳ ತುಂಬ ಹೂವುಗಳು ಅರಳಿದ್ದವು. ಕಳೆದ ವರ್ಷಕ್ಕಿಂತಲೂ ಈ ವರ್ಷ ಬಹಳಷ್ಟು ಗಿಡಗಳು ಬೆಳೆದಿದ್ದವು. ಕೆಲವು ಹೊಸ ಗಿಡಗಳನ್ನು ನೆಟ್ಟಿದ್ದರು. ೨. ತೋಟವನ್ನು ನೋಡಿಕೊಳ್ಳುವ ಸಾಧಕನಲ್ಲಿರುವ ಭಾವದಿಂದ ಅಲ್ಲಿರುವ ಗಿಡಗಳಲ್ಲಿ ಪ.ಪೂ. ಡಾಕ್ಟರರ ಬಗ್ಗೆ ಭಾವ ಮೂಡಿದೆ ಎಂದು ಬೆಳಕಿಗೆ ಬಂದಿತು : ಗುಡ್ಡದ ತುದಿಯಲ್ಲಿ ತೋಟವನ್ನು ನೋಡಿಕೊಳ್ಳುವ ಸಾಧಕನ ಜೊತೆಗೆ ನಮ್ಮ ಭೇಟಿಯಾಯಿತು. ಅವನು ನಗುಮುಖದಿಂದ ನಮ್ಮನ್ನು ಸ್ವಾಗತಿಸಿದನು. ಪ.ಪೂ. ಡಾಕ್ಟರರ ಬಗ್ಗೆ ಇರುವ ಅವರ ಭಾವ ಮತ್ತು ಗಿಡಗಳ ಮೇಲಿನ ಪ್ರೀತಿಯನ್ನು ನೋಡಿ `ಗಿಡಗಳಲ್ಲಿ ಪ.ಪೂ. ಡಾಕ್ಟರರ ಬಗ್ಗೆ ಭಾವವು ಹೇಗೆ ಬಂದಿರಬಹುದು ?’, ಎಂದು ನನಗೆ ಆರಂಭದಲ್ಲಿ ಮೂಡಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು.’ – ಸೌ. ಲೋಲಾ ವೆಜಿಲಿಚ, ಯುರೋಪ (ಫೆಬ್ರುವರಿ ೨೦೦೮) |