ದೇವರ ಬಗ್ಗೆ ನಿಃಶಬ್ದ ಕೃತಜ್ಞತೆ !

೧. ದೇವರು ಹಾಗೂ ನಿಸರ್ಗದಲ್ಲಿನ ಎಲ್ಲರೂ ನಮಗಾಗಿ ಮಾಡುತ್ತಿರುವ ಕಾರ್ಯ ಬಗ್ಗೆ ಅವುಗಳ ಉಪಕಾರವನ್ನು ತಿಳಿದುಕೊಳ್ಳಲು ಮನಸ್ಸು ಮತ್ತು ಬುದ್ಧಿಯು ಕಡಿಮೆ ಬೀಳುವುದು ಅಥವಾ ಅದರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ನಿಃಶಬ್ದವಾಗುವುದು !

ದೇವರು ನಿರಂತರವಾಗಿ ಕಾರ್ಯನಿರತನಾಗಿರುತ್ತಾನೆ. ಅವನು ಎಲ್ಲ ಮಾಧ್ಯಮಗಳಿಂದ ಕೃಪೆ ಮತ್ತು ನಿರಪೇಕ್ಷ ಪ್ರೇಮವನ್ನು ಮಾಡುತ್ತಿರುತ್ತಾನೆ; ಆದರೆ ಅದರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಹೋದಾಗ ನಿಶ್ಯಬ್ದವಾಗುತ್ತೇವೆ. ಎಲ್ಲರೂ ನಮಗಾಗಿ ಏನೆಲ್ಲ ಮಾಡುತ್ತಿರುತ್ತಾರೆ. ವ್ಯಕ್ತಿ, ವಸ್ತು, ವನಸ್ಪತಿಗಳು ನಮಗೆ ಮಾಡುತ್ತಿರುವ ಉಪಕಾರವನ್ನು ತೀರಿಸಲು ನಮಗೆ ಸಾಧ್ಯವಾಗುವುದಿಲ್ಲ. ನನಗನಿಸುತ್ತದೆ, `ಇದೆಲ್ಲವನ್ನು ನೋಡಲು ಮತ್ತು ತಿಳಿದುಕೊಳ್ಳಲು ನಮ್ಮ ಜನ್ಮವು ಕಡಿಮೆ ಬೀಳುವುದು.’ ಪ್ರತಿಯೊಬ್ಬ ವ್ಯಕ್ತಿಯ, ವಸ್ತು, ವನಸ್ಪತಿ, ಪ್ರಾಣಿ ಇವುಗಳ ಮಹತ್ವವು ಅರಿವಿಗೆ ಬರುತ್ತದೆ. ಅವುಗಳ ಉಪಕಾರವನ್ನು ತಿಳಿದುಕೊಳ್ಳಲು ಮನಸ್ಸು ಮತ್ತು ಬುದ್ಧಿ ಎರಡೂ ಕಡಿಮೆ ಬೀಳುತ್ತವೆ. ಈಗ `ಕಲಿಯಲು ಮನಸ್ಸು ಮತ್ತು ಬುದ್ಧಿ ಎರಡೂ ಬೇಡ’, ಎಂದೆನಿಸುತ್ತದೆ. ಅವು ಸೀಮಿತವಾಗಿರುತ್ತದೆ.

೨. ನಮಗಾಗಿ ದೇವರ ಪರಿಶ್ರಮ

ನಮಗಾಗಿ ಪ್ರತಿದಿನ ದೇವರು ಏನೆಲ್ಲ ಮಾಡುತ್ತಾನೆ. ಅವನು ಪ್ರತಿದಿನ ನಮ್ಮನ್ನು ಮಲಗಿಸುತ್ತಾನೆ. `ನಮಗೆ ವಿಶ್ರಾಂತಿ ಸಿಗಬೇಕೆಂದು ಅವನು ರಾತ್ರಿಯನ್ನು ಮಾಡಿದ್ದಾನೆ’, ಎಂದರಿವಾಗುತ್ತದೆ. ನಾವು ರಾತ್ರಿ ಮಲಗಿದ ನಂತರ ನಮಗೆ ಏನೂ ತಿಳಿಯುವುದಿಲ್ಲ. ಕೇವಲ ದೇವರ ಕೃಪೆಯಿಂದ ಬೆಳಗ್ಗೆ ನಾವು ಜೀವಂತವಾಗಿರುತ್ತೇವೆ. ಅವನಿಂದ ನಮಗೆ ಎಚ್ಚರವಾಗುತ್ತದೆ ಮತ್ತು ನಮ್ಮ ಅಸ್ತಿತ್ವದ ಅರಿವಾಗುತ್ತದೆ. ಕನಸಿನಲ್ಲಿ ನಾವು ಎಲ್ಲೆಲ್ಲೋ ತಿರುಗಿಬಂದರೂ ಕೂಡ, ಬೆಳಗ್ಗೆ ಎದ್ದ ನಂತರ ನಮಗೆ ಕನಸು ಮತ್ತು ವಾಸ್ತವದಲ್ಲಿನ ಭೇದವು ತಾನಾಗಿ ತಿಳಿಯುತ್ತದೆ. ನಮಗೆ ದಿನನಿತ್ಯದ ಕೃತಿಗಳನ್ನು ನೆನಪಿಡಬೇಕಾಗುವುದಿಲ್ಲ. ತನ್ನಿಂದತಾನೇ ನಮ್ಮ ಶರೀರವು ಕೆಲಸ ಮಾಡಲು ಆರಂಭಿಸುತ್ತದೆ. ನಾವು ನಿದ್ದೆಗಣ್ಣಿನಲ್ಲಿದ್ದರೂ, ನಮಗೆ ವಿಸ್ಮರಣೆಯಾಗುವುದಿಲ್ಲ. ನಮ್ಮ ಶರೀರವು ಮುಖಶುದ್ಧಿ, ಮಲ-ಮೂತ್ರ ವಿಸರ್ಜನೆ ಕರ್ಮಗಳನ್ನು ನಿಯಮದ ಹಾಗೆ ಮಾಡುತ್ತಿರುತ್ತದೆ; ಆದರೆ ಅದು ದೇವರ ಇಚ್ಛೆಯಿಂದಲೇ ಆಗಬಹುದು. ಈ ಸಂಗತಿಗಳು ನಮ್ಮ ಕೈಯಲ್ಲಿರುವುದೇ ಇಲ್ಲ.

೩. ದೇವರು ಕೊಟ್ಟಿರುವ ವಸ್ತಗಳು

ನಮಗೆ ನಿದ್ದೆ ಬರಬೇಕು, ಸುಖ ಸಿಗಬೇಕು ಇದಕ್ಕಾಗಿ ದೇವರು ಹಾಸಿಗೆ, ಹೊದಿಕೆ, ದಿಂಬು, ಮಂಚ ಮತ್ತು ಇನ್ನಿತರ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾನೆ. ನಮಗೆ ಅವುಗಳ ಉಪಕಾರದ ಅರಿವಿಲ್ಲದಿದ್ದರೂ ಆ ಎಲ್ಲ ವಸ್ತುಗಳು ಯಾವುದೇ ತಕರಾರಿಲ್ಲದೆ ಅನೇಕ ವರ್ಷಗಳಿಂದ ನಮ್ಮ ಆರೈಕೆಯನ್ನು ಮಾಡುತ್ತಿರುತ್ತವೆ ! ನಮಗೆ ಸ್ನಾನಗೃಹ, ಶೌಚಾಲಯ ದೇವರೆ ಕೃಪೆಯಿಂದಲೇ ಲಭ್ಯವಾಗಬಲ್ಲದು. ಆ ಕ್ರಿಯೆಗಳಿಗಾಗಿ ನಮಗೆ ಸಹಾಯ ಮಾಡಲು ವಸ್ತು ಮತ್ತು ನೀರನ್ನು ದೇವರೇ ಒದಗಿಸಿರುತ್ತಾನೆ. ನಲ್ಲಿ ಇದೆ ಆದರೆ ನಲ್ಲಿಯಲ್ಲಿ ನೀರೇ ಇಲ್ಲದಿದ್ದರೆ, ನಾವು ಏನು ಮಾಡಲಿಕ್ಕಾಗುತ್ತದೆ ? ನಲ್ಲಿಯಲ್ಲಿ ನೀರನ್ನು ದೇವರೇ ಕೊಟ್ಟಿರುತ್ತಾನೆ. ಅದನ್ನು ನಾವು ನಮಗೆ ಬೇಕಾದಷ್ಟು ಉಪಯೋಗಿಸುತ್ತೇವೆ. ನಲ್ಲಿಯ ಬಗ್ಗೆ ಕೃತಜ್ಞತೆ ಇರುವುದಿಲ್ಲ. ಇಂದು ನನಗನಿಸಿತು, `ಸ್ನಾನಗೃಹದ ಬಾಗಿಲೆಂದರೆ ದೇವರೇ ಆಗಿದ್ದಾನೆ. ಅವನು ನಮಗಾಗಿ ಸತತವಾಗಿ ನಿಂತುಕೊಂಡು ನಮ್ಮ ರಕ್ಷಣೆಯನ್ನು ಮಾಡುತ್ತಿರುತ್ತಾನೆ.’ ದೇವರೇ ನಮಗೆ ಬಟ್ಟೆಗಳನ್ನು ಕೊಟ್ಟಿರುತ್ತಾನೆ. ನಾವು ಚೆನ್ನಾಗಿ ಕಾಣಬೇಕೆಂದು ಮಾಧ್ಯಮಗಳನ್ನು ಕೊಟ್ಟಿರುತ್ತಾನೆ. ದೇವರೇ ಆಹಾರವನ್ನು ಕೊಟ್ಟಿದ್ದಾನೆ. ಪದಾರ್ಥಗಳನ್ನು ಮಾಡುವುದಕ್ಕಾಗಿ ಅಗ್ನಿ ಮತ್ತು ನೀರನ್ನು ಕೊಟ್ಟಿದ್ದಾನೆ. ಮಾಡಿದ ಪದಾರ್ಥವು ರುಚಿಯಾಗ ಬೇಕೆಂದು ಅವಶ್ಯವಿರುವ ಎಲ್ಲ ಘಟಕಗಳನ್ನು ಲಭ್ಯಮಾಡಿ ಕೊಟ್ಟಿದ್ದಾನೆ. ಅಡಿಗೆ ಮತ್ತು ಊಟಕ್ಕಾಗಿ ಪಾತ್ರೆಗಳನ್ನು ಕೊಟ್ಟಿದ್ದಾನೆ.

೪. ದೇವರು ಕೊಟ್ಟಿರುವ ಶರೀರ

ದೇವರು ಹಲ್ಲುಗಳನ್ನು ಆಹಾರವನ್ನು ತಿನ್ನಲೆಂದು ಕೊಟ್ಟಿದ್ದಾನೆ. ಆಹಾರವನ್ನು ಅರಗಿಸುವ ಕ್ರಿಯೆಯನ್ನು ನಮ್ಮ ಹೊಟ್ಟೆಯಲ್ಲೆ ಮಾಡಿಟ್ಟಿದ್ದಾನೆ. ನಡೆದಾಡಲು ಕಾಲುಗಳನ್ನು ಕೊಟ್ಟಿದ್ದಾನೆ. ಕಾಲುಗಳಲ್ಲಿ ಶಕ್ತಿಯನ್ನು ಕೊಟ್ಟಿದ್ದಾನೆ. ಹೇಗೆ ನಡೆಯಬೇಕೆಂದು ಕಲಿಸಿದ್ದಾನೆ. ಕಾಲುಗಳಿಗೆ ಕಲ್ಲುಗಳು ಚುಚ್ಚಬಾರದೆಂದು ಚಪ್ಪಲಿಗಳನ್ನು ಕೊಟ್ಟಿದ್ದಾನೆ.

ಸೃಷ್ಟಿಯನ್ನು ನೋಡಲು ದೃಷ್ಟಿಯನ್ನು ಕೊಟ್ಟಿದ್ದಾನೆ. ನಮಗೆ ಆನಂದ ಸಿಗಬೇಕೆಂದು; ಸೃಷ್ಟಿಯನ್ನು ಸುಂದರವಾಗಿ ಮಾಡಿದ್ದಾನೆ. ಸೃಷ್ಟಿಯು ಬಣ್ಣ ಬಣ್ಣದಿಂದ ಕೂಡಿದೆ ಮತ್ತು ದೃಷ್ಟಿಯು ಕಪ್ಪು ಬಿಳುಪಾಗಿದ್ದಿದ್ದರೆ ಆನಂದವು ಸಿಗುತ್ತಿರಲಿಲ್ಲ. ಗಣಕಯಂತ್ರದಲ್ಲಿ ನಮ್ಮ ಇಚ್ಛೆಯಿಂದ, ಬಲದಿಂದ ನಾವು ಒಂದು ಅಕ್ಷರವನ್ನೂ ಮೂಡಿಸಲು ಸಾಧ್ಯವಿಲ್ಲ. ಈ ಎಲ್ಲ ಮತ್ತು ಇದಕ್ಕಿಂತಲೂ ಇನ್ನೂ ಅನೇಕ ಕರ್ಮಗಳನ್ನು ನಾವು ಪ್ರತಿದಿನ ಮಾಡುತ್ತಿರುತ್ತೇವೆ. ಇವೆಲ್ಲವನ್ನು ನಾವು ಸಹಜವಾಗಿ ಮಾಡಬಹುದು. ಈ ಸಹಜತೆಯು ನಮಗೆ ಸಿಕ್ಕಿರುವ ನಿರೋಗಿ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳಿಂದ ಇರುತ್ತದೆ. ಅದೆಲ್ಲವನ್ನು ದೇವರು ನಮಗೆ ಕೊಟ್ಟಿದ್ದಾನೆ.

– ಓರ್ವ ಸಾಧಕಿ, ಸನಾತನ ಆಶ್ರಮ, ರಾಮನಾಥಿ, ಗೋವಾ (೮.೭.೨೦೦೮)