ನಿರಂತರ ಗುರು ಭಕ್ತಿಯೇ ನಮ್ಮನ್ನು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ – ನ್ಯಾಯವಾದಿ ಕೃಷ್ಣಮೂರ್ತಿ, ಮಂಗಳೂರು
ನಮ್ಮಲ್ಲಿರುವ ಸ್ವಭಾವ ದೋಷಗಳನ್ನು ಕಡಿಮೆ ಮಾಡಿ, ಸಂಸಾರದ ಬಂಧನದಿಂದ ಹೊರ ತೆಗೆದು, ನಾಲಿಗೆಯಲ್ಲಿ ಹರಿ ನಾಮದ ಸಂಕೀರ್ತನೆಯನ್ನು ಹಾಡಿಸಿ, ತನು-ಮನ-ಧನದ ತ್ಯಾಗ ವನ್ನು ಮಾಡಿಸುವ ಭಗವಂತ ರೂಪಿ ಗುರುಗಳ ಚರಣಗಳಲ್ಲಿ ಕೃತಜ್ಞತೆಯನ್ನು ಸದಾ ಕಾಲವೂ ವ್ಯಕ್ತಪಡಿಸಬೇಕು. ನಿರಂತರ ಗುರುಭಕ್ತಿಯೇ ನಮ್ಮನ್ನು ಮೋಕ್ಷದೆಡೆಗೆ ಕೊಂಡೊಯ್ಯುತ್ತದೆ. ಇಷ್ಟು ಪ್ರಮಾಣದಲ್ಲಿ ಗುರುಗಳ ಮಹಿಮೆ ನಮ್ಮ ಜೀವನದಲ್ಲಿದೆ.
ಗುರುಗಳ ಮಾರ್ಗದರ್ಶನ ಅತ್ಯಾವಶ್ಯಕ ! – ಶ್ರೀ. ಸಂತೋಷ ಕೆಂಚಾಂಬ, ರಾಷ್ಟ್ರಧರ್ಮ ಸಂಘಟನೆ, ಬೆಂಗಳೂರು
ಭಾರತದಲ್ಲಿ ಗುರು ಶಿಷ್ಯ ಪರಂಪರೆ ಇರುವುದರಿಂದ ಹಿಂದೆ ಅನೇಕ ವಿಶ್ವ ವಿದ್ಯಾಲಯಗಳು ಇದ್ದವು ಹಾಗೂ ವಿದೇಶಗಳಿಂದ ಭಾರತಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು. ಅವರ ಸೆಳೆತಕ್ಕೆ ಗುರುಶಿಷ್ಯ ಪರಂಪರೆ ಕಾರಣವಾಗಿತ್ತು. ಆದರೆ ಇಂದು ಗುರುಗಳ ಮಾರ್ಗದರ್ಶನ ಇಲ್ಲದ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವೈಯಕ್ತಿಕ, ಸಾಮಾಜಿಕ, ದೇಶದ ಹಾಗೂ ವಿಶ್ವದ ಅಭಿವೃದ್ದಿಗಾಗಿ ಗುರುಗಳ ಮಾರ್ಗದರ್ಶನವು ಅತ್ಯಾವಶ್ಯಕವಾಗಿದೆ.