ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

ಸಾಧಕರು ಸ್ವಭಾವದೋಷಗಳ ಕೋಷ್ಟಕವನ್ನು ಬರೆಯುತ್ತಾರೆ. ಅವರು ಸ್ವಭಾವದೋಷ ಹೋಗಬೇಕೆಂದು ಸ್ವಯಂಸೂಚನೆಯನ್ನು ನೀಡುತ್ತಾರೆ. ಸಾಧಕರು ಇಷ್ಟೇ ಮಾಡುತ್ತಿದ್ದರೆ, ಅದು ಯೋಗ್ಯವಾಗಿರುತ್ತಿತ್ತು; ಆದರೆ ಅನೇಕ ಸಾಧಕರು ಆ ಸ್ವಭಾವ ದೋಷಗಳನ್ನು ದಿನವಿಡೀ ನೆನಪಿಸಿಕೊಂಡು ದುಃಖಿಯಾಗುತ್ತಾರೆ. ಕೆಲವು ಸಾಧಕರು ಇತರರ ಗುಣಗಳೊಂದಿಗೆ ಅಥವಾ ಪ್ರಗತಿಯೊಂದಿಗೆ ತುಲನೆ ಮಾಡಿ `ನಾವು ಅವರಿಗಿಂತ ಹಿಂದೆ ಇದ್ದೇವೆ’ ಎಂಬುದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ. ಆದರೆ ಅವರಿಗೆ ಅರಿವಾಗದ ವಿಷಯವೆಂದರೆ, `ಪ್ರತಿ ತಿಂಗಳು ೧೦ ಸಾವಿರ, ೫೦ ಸಾವಿರ ಅಥವಾ ೧ ಲಕ್ಷ ರೂಪಾಯಿಗಳಿಸುವವರು ತಮಗಿಂತ ಹೆಚ್ಚು ಗಳಿಸುವವರೊಂದಿಗೆ ತುಲನೆ ಮಾಡಿದರೆ ಅವರು ದುಃಖಿಯಾಗುವುದು ಸಹಜ. ಅದರ ಬದಲು ೧೦ ಸಾವಿರ ರೂಪಾಯಿ ಗಳಿಸುವವನು `ನಾನು ನೌಕರಿ ಇಲ್ಲದವರಿಗಿಂತ ಹೆಚ್ಚು ಸುಖಿಯಾಗಿದ್ದೇನೆ’, ೧ ಲಕ್ಷ ರೂಪಾಯಿ ಗಳಿಸುವವನು `ನಾನು ೫೦ ಸಾವಿರ ಗಳಿಸುವವನಿಗಿಂತ ಹೆಚ್ಚು ಸುಖಿಯಾಗಿದ್ದೇನೆ’, ಎಂದು ವಿಚಾರ ಮಾಡಿದರೆ, ಅವರು ದುಃಖಿತರಾಗದೇ ಆನಂದಿಯಾಗಿರುವರು.

ಸಾಧಕರಿಗೆ ಅರಿವಾಗದ ವಿಚಾರವೆಂದರೆ, ದೇವರು ತನಗೆ ಮನುಷ್ಯಜನ್ಮ ನೀಡಿದ್ದಾರೆ, ಅವರಲ್ಲಿ ಸಾಧನೆಯ ಆಸಕ್ತಿಯನ್ನು ಮೂಡಿಸಿದ್ದಾರೆ, ತಮಗೆ ಸಾಧನೆಯಲ್ಲಿ ಮಾರ್ಗದರ್ಶನ ಸಿಗುತ್ತಿದೆ ಹಾಗೂ ಸಾಧನೆಯಲ್ಲಿ ತಮ್ಮ ಪ್ರಗತಿಯೂ ಆಗುತ್ತಿದೆ. ಇದನ್ನು ನೆನಪಿಸಿಕೊಂಡರೆ `ಪೃಥ್ವಿಯ ಮೇಲಿನ ಬಹುಸಂಖ್ಯಾತ ಮಾನವರ ತುಲನೆಯಲ್ಲಿ ನಾವು ಎಷ್ಟು ಭಾಗ್ಯವಂತರಾಗಿದ್ದೇವೆ’, ಎಂಬುದನ್ನು ಗಮನಿಸಿದರೆ ಅವರ ಮನಸ್ಸಿನಲ್ಲಿ ದೇವರ ಬಗ್ಗೆ ಸತತ ಕೃತಜ್ಞತಾಭಾವ ಮೂಡುವುದು. ಸ್ವಯಂಸೂಚನೆಯ ಸತ್ರಗಳ ಸಮಯದಲ್ಲಿ ದೋಷಗಳು ನೆನಪಾಗುವುದು ಹಾಗೂ ಅವುಗಳನ್ನು ದೂರಗೊಳಿಸಲು ಸ್ವಯಂಸೂಚನೆ ನೀಡಬೇಕು. ಬಾಕಿ ಸಮಯ ನಿರಂತರ ಭಾವಪೂರ್ಣ ಜಪ ಮಾಡಬೇಕು ಅಥವಾ ಕೃತಜ್ಞತಾಭಾವದಲ್ಲಿರಬೇಕು. `ಭಾವವಿದ್ದಲ್ಲಿ ದೇವರು’ ಇರುವುದರಿಂದ ಆಗ ಮನಸ್ಸಿಗೆ ಆನಂದವೂ ಸಿಗುತ್ತದೆ. ನನ್ನ ಉದಾಹರಣೆಯಿಂದ ಕೃತಜ್ಞತಾಭಾವದಿಂದ `ಸೇವೆ ಹೇಗೆ ಮಾಡಬಹುದು ಹಾಗೂ ಮನಸ್ಸಿಗೆ ಹೇಗೆ ಆನಂದ ಸಿಗುತ್ತದೆ’, ಎಂಬುದು ಅರಿವಾಗಬಹುದು. ಹಿಂದೆ ನಾನು ಸತ್ಸಂಗ, ಅಭ್ಯಾಸವರ್ಗ, ಸಭೆ ಇತ್ಯಾದಿಗಳಿಗಾಗಿ ಹೋಗುತ್ತಿದ್ದೆ. ಈಗ ಹೊರಗೆ ಹೋಗಲು ಆಗದಿದ್ದರೂ ಇದು ವರೆಗೆ ದೇವರು ಮಾಡಿಸಿಕೊಂಡ ವಿವಿಧ ಕಾರ್ಯಗಳನ್ನು ನೆನಪಿಸಿಕೊಂಡರೂ ನನಗೆ ಕೃತಜ್ಞತಾಭಾವದಿಂದ ಆನಂದದಲ್ಲಿರಬಹುದು.

– (ಪರಾತ್ಪರ ಗುರು) ಡಾ. ಆಠವಲೆ

ಕೃತಜ್ಞತಾಭಾವ

ಅ. `ಸಾಧನೆಯನ್ನು ಮಾಡುತ್ತಿರುವುದರಿಂದ ನಾವು ಇದೇ ಜನ್ಮದಲ್ಲಿ ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡುಗಡೆಯಾಗುತ್ತೇವೆ, ಎಂಬ ಬಗ್ಗೆ ಮನಸ್ಸಿನಲ್ಲಿ ಕೃತಜ್ಞತೆ ಇರಬೇಕು.

ಆ. ಪ್ರತಿಯೊಬ್ಬ ಸಾಧಕನಲ್ಲಿ ಗುಣಗಳಿರುತ್ತವೆ. ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಮಾಡಿ ಆ ಗುಣಗಳನ್ನು ಕಲಿಯುವುದು

ಇ. ದೋಷಗಳನ್ನು ಹೇಳುವವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಮಾಡುವುದು

ಉ. ದೇವರಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು; ಏಕೆಂದರೆ ಅವನು ನಮಗೆ `ಸಾಧನೆ ಮಾಡಿರಿ’, ಎಂದು ಹೇಳಿದ್ದಾನೆ ಮತ್ತು ಉಳಿದ ಎಲ್ಲ ಸೌಲಭ್ಯಗಳನ್ನು ಅವನೇ ಮಾಡಿದ್ದಾನೆ,

ಉದಾ. ಊಟ, ಬಟ್ಟೆ, ವಾಸ ಮಾಡಲು ಎಲ್ಲ ಸೌಲಭ್ಯಗಳು, ಎಲ್ಲ ಸಹಾಯ, ತೊಂದರೆಗಳನ್ನು ಕಡಿಮೆ ಮಾಡಲು ಎಲ್ಲ ಸ್ತರದಲ್ಲಿ ಉಪಾಯಗಳು, ಅನೇಕ ಅನುಭೂತಿಗಳು, ಹೆಜ್ಜೆಹೆಜ್ಜೆಗೆ ಮಾರ್ಗದರ್ಶನ, ಸಂತರ ಸಹವಾಸ ಮತ್ತು ಅವರನ್ನು ಪ್ರತ್ಯಕ್ಷ ಅನುಭವಿಸುವುದು ಇತ್ಯಾದಿ.’

ಕು. ಭಾವಿನಿ ಕಪಾಡಿಯಾ, ರಾಮನಾಥಿ, ಗೋವಾ.