ವಿಡಿಯೋ ನಕಲಿ ಎಂದು ಹಮಾಸ್ ದಾವೆ, ಆದರೂ ಸಹ ಫ್ರಾನ್ಸ್ ನಲ್ಲಿ ಭದ್ರತೆ ಹೆಚ್ಚಳ
ಪ್ಯಾರಿಸ್ (ಫ್ರಾನ್ಸ್) – ಒಲಂಪಿಕ್ ಮತ್ತು ಪ್ಯಾರಾ ಒಲಂಪಿಕ್ ಕ್ರೀಡೆಗಳು ಈ ಬಾರಿ ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ನಲ್ಲಿ ಜುಲೈ ೨೬ ರಿಂದ ಆಗಸ್ಟ್ ೧೧ ರ ಕಾಲಾವಧಿಯಲ್ಲಿ ನಡೆಯಲಿದೆ. ಈ ನಡುವೆ ಭಯೋದ್ಪಾದಕನೊಬ್ಬನ ಒಂದು ವಿಡಿಯೋ ಪ್ರಸಾರವಾಗಿದ್ದು, ಅವನು ತನ್ನನ್ನು ತಾನು ಹಮಾಸ್ ಸೈನಿಕ ಎಂದು ಹೇಳಿಕೊಂಡಿದ್ದು ಪ್ಯಾರಿಸ್ ಒಲಂಪಿಕ್ ನಲ್ಲಿ ರಕ್ತದ ನದಿಗಳು ಹರಿಯುವುದು ಎಂದು ಅರಬಿ ಭಾಷೆಯಲ್ಲಿ ಬೆದರಿಕೆ ನೀಡಿದ್ದಾನೆ. ಈ ವಿಡಿಯೋ ನಕಲಿ ಎಂದು ತಜ್ಞರು ಹೇಳುತ್ತಿದ್ದಾರೆ ಹಾಗೂ ಹಮಾಸ್ ನಾಯಕ ಇಜ್ಜತ್ ಅಲ್ ರಿಷೇಕ್ ಅವನು ಕೂಡ ಈ ವಿಡಿಯೋ ನಕಲಿ ಎಂದು ಹೇಳಿದ್ದಾನೆ. ಆದರೆ ಈ ವಿಡಿಯೋ ಪ್ರಸಾರವಾದ ನಂತರದಿಂದ ಫ್ರಾನ್ಸ್ ನಲ್ಲಿ ಒಲಂಪಿಕ್ಸ್ ಸ್ಪರ್ಧೆಯ ಸ್ಥಳದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಫ್ರಾನ್ಸ್ ಸರಕಾರವು ಕಾರ್ಯಕ್ರಮದ ಪ್ರತಿಯೊಂದು ದಿನ ೩೫ ಸಾವಿರ ಪೋಲಿಸ್ ಅಧಿಕಾರಿಗಳನ್ನು ನೇಮಕಗೊಳಿಸುವ ಯೋಜನೆ ರೂಪಿಸಿದೆ. ಉದ್ಘಾಟನಾ ಸಮಾರಂಭಕ್ಕಾಗಿ ೪೫ ಸಾವಿರ ಅಧಿಕಾರಿಗಳು ನೇಮಕಗೊಳಿಸಲಾಗುವುದು.
ಈ ವಿಡಿಯೋದಲ್ಲಿ ಭಯೋತ್ಪಾದಕನು, ಪ್ಯಾರಿಸ್ ನ ರಸ್ತೆಗಳು ರಕ್ತದಿಂದ ಕೆಂಪಾಗುವುದು. ಪ್ಯಾರಿಸ್ ಒಲಂಪಿಕ್ ನಲ್ಲಿ ರಕ್ತದ ನದಿಗಳು ಹರಿಯುವುದು. ನೀವು ಜ್ಯೂ ಜನರನ್ನು ಸ್ಪರ್ಧೆಗಾಗಿ ಕರೆದಿದ್ದೀರಾ. ಹಾಗಾಗಿ ನೀವೆಲ್ಲರೂ ಅದರ ಶಿಕ್ಷೆ ಅನುಭವಿಸುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ.
ಪ್ಯಾಲೆಸ್ಟೀನಿ ಭಯೋತ್ಪಾದಕರು ಈ ಹಿಂದೆ ಒಲಂಪಿಕ್ ಮೇಲೆ ದಾಳಿ ನಡೆಸಿದ್ದರು !
ಒಲಂಪಿಕ್ ಮೇಲೆ ಈ ಹಿಂದೆ ಕೂಡ ದಾಳಿಗಳು ನಡೆದಿವೆ. ಸೆಪ್ಟೆಂಬರ್ ೧೯೭೨ ರಲ್ಲಿ ಮ್ಯೂನಿಕ್ ನಲ್ಲಿ ಮತ್ತು ೧೯೯೬ ರಲ್ಲಿ ಅಟಲಾಂಟಾದಲ್ಲಿ ನಡೆದ ಒಲಂಪಿಕ್ಸ್ ಸ್ಪರ್ಧೆಯ ಸಮಯದಲ್ಲಿ ಪ್ಯಾಲೆಸ್ಟೀನಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಸ್ರೇಲಿನ ಅನೇಕ ಆಟಗಾರರು ಸಾವನ್ನಪ್ಪಿದ್ದರು.
ಸಂಪಾದಕೀಯ ನಿಲುವುಹಮಾಸ್ ನ ಈ ವಿಡಿಯೋ ನಕಲಿ ಆಗಿದ್ದರೂ ಸಹ ಪ್ಯಾಲೆಸ್ಟಿನ್ ಮತ್ತು ಹಮಾಸ್ ನ ಇತಿಹಾಸ ನೋಡಿದರೆ ಒಲಂಪಿಕ್ ಮೇಲೆ ದಾಳಿ ನಡೆಯುವ ಸಾಧ್ಯತೆಯನ್ನು ನಿರಾಕರಿಸಲಾಗದು ! |