ಕಾಶಿ ವಿಶ್ವನಾಥ ಪರಿಸರದಲ್ಲಿನ ಅಂಗಡಿಗಳ ಮೇಲೆ ಮಾಲೀಕರ ಹೆಸರು ಬರೆಯಲು ಆರಂಭ !

ವಾರಣಾಸಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಕವಾಡ್ ಯಾತ್ರಾಮಾರ್ಗಗಳ ನಂತರ, ಈಗ ಇಲ್ಲಿನ ಕಾಶಿ ವಿಶ್ವನಾಥ ಧಾಮದ ಸುತ್ತಮುತ್ತಲಿನ ಅಂಗಡಿಕಾರರು ಅಂಗಡಿಗಳ ಬೋರ್ಡ್‌ಗಳಲ್ಲಿ ತಮ್ಮ ಹೆಸರನ್ನು ಬರೆಯಲಾರಂಭಿಸಿದ್ದಾರೆ. ಇಲ್ಲಿ 500 ಅಂಗಡಿಗಳಿದ್ದು ಅವುಗಳಲ್ಲಿ 75 ಮುಸ್ಲಿಮರಿಗೆ ಸೇರಿವೆ.

ಜುಲೈ 22 ರಿಂದ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಈ ದಿನದಿಂದಲೇ ಕಾವಡ್ ಯಾತ್ರೆಯೂ ಆರಂಭವಾಗಲಿದೆ. ಕಾವಾಡ್ ಯಾತ್ರಿಕರು ಗಂಗಾ ನದಿಯಿಂದ ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಜಲಾಭಿಷೆಕಕ್ಕಾಗಿ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ 1 ಕೋಟಿ ಕಾವಾಡ ಯಾತ್ರಿಕರು ಇಲ್ಲಿಗೆ ಆಗಮಿಸುವ ಅಂದಾಜಿದೆ. ಇದಕ್ಕೂ ಮುನ್ನ ಪೊಲೀಸರು ಅಂಗಡಿಕಾರರಿಗೆ ಬೋರ್ಡ್ ಮೇಲೆ ಹೆಸರು ಬರೆಯುವಂತೆ ಸೂಚಿಸಿದ್ದರು. ಅವರು ಏನು ಮಾರಾಟ ಮಾಡುತ್ತಾರೆ, ಎಷ್ಟು ಜನರು ಕೆಲಸ ಮಾಡುತ್ತಾರೆ, ಅವರ ಹೆಸರೇನು ಎಂದು ಬರೆಯಲು ಹೇಳಲಾಗಿದೆ. ‘ಜನರನ್ನು ದಾರಿ ತಪ್ಪಿಸುವ ಮೂಲಕ ಅಂಗಡಿಕಾರರು ದೇವಸ್ಥಾನದ ಹೊರಗೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವಂತಿಲ್ಲ. ಬಾಡಿಗೆದಾರರು ಅಂಗಡಿ ಮಾಲೀಕರ ಹೆಸರು ಬರೆದು ಅಂಗಡಿ ನಡೆಸುವಂತಿಲ್ಲ. ಅವರು ತಮ್ಮ ನಿಜವಾದ ಹೆಸರು ಮತ್ತು ವಿಳಾಸವನ್ನು ಹೊರಗೆ ಬರೆಯಬೇಕಾಗುತ್ತದೆ’, ಎಂದು ಆಡಳಿತ ತಿಳಿಸಿದೆ.

40 ಅಂಗಡಿಗಳನ್ನು ಅನ್ಯ ಧರ್ಮದವರು ನಡೆಸುತ್ತಿರುವುದು ಬಹಿರಂಗವಾಗಿದೆ

ಕಾಶಿ ವಿಶ್ವನಾಥ ಪರಿಸರದಲ್ಲಿ 500ಕ್ಕೂ ಹೆಚ್ಚು ಹೂವಿನ ಹಾರ, ಪೂಜೆ ಸಾಮಗ್ರಿ ಅಂಗಡಿಗಳಿವೆ. ಕಾಶಿ ವಿಶ್ವನಾಥ ಧಾಮದ ಮುಂಭಾಗದಲ್ಲಿ 40 ಅಂಗಡಿಗಳಿವೆ. ಅವರೆಲ್ಲರ ಮೇಲೆ ಈಗ ನಡೆಸುವವರ ಹೆಸರನ್ನು ಬರೆಯದೇ ಇರುವುದು ಕಂಡುಬಂದಿದೆ. ಅವರ ಹೆಸರನ್ನು ಬರೆಯಲು ಸಹ ಹೇಳಲಾಗುತ್ತದೆ. ಹಿಂದೂಗಳಲ್ಲದೆ ಇತರೆ ಧರ್ಮದ ವ್ಯಾಪಾರಿಗಳು ಅಂಗಡಿಗಳ ಮೇಲೆ ಹಿಂದೂ ದೇವರುಗಳ ಹೆಸರನ್ನು ಬರೆದು ವ್ಯಾಪಾರ ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆ ಎಲ್ಲ ಅಂಗಡಿಕಾರರಿಗೆ ತಮ್ಮ ಹೆಸರು ಬರೆಯಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ.

ಹಿಂದೂ ಸಮಾಜವು ಇನ್ನು ಮುಂದೆ ಹೆಸರು, ತಿಲಕ ಮತ್ತು ಮಣಿಕಟ್ಟಿನ ಮೇಲಿನ ಕೆಂಪು ದಾರದಿಂದ ಮೂರ್ಖರಾಗುವುದಿಲ್ಲ ! – ರಾಷ್ಟ್ರೀಯ ಹಿಂದೂ ದಳ

ವಾರಣಾಸಿಯ ಅಂಗಡಿಗಳಲ್ಲಿ ಕೇಸರಿ ಧ್ವಜ ಮತ್ತು ನಾಮಫಲಕದೊಂದಿಗೆ ಆಧಾರ್ ಕಾರ್ಡ್ ಇಟ್ಟುಕೊಳ್ಳುವಂತೆ ರಾಷ್ಟ್ರೀಯ ಹಿಂದೂ ದಳದ ಕಾರ್ಯಕರ್ತರು ಅಂಗಡಿ ಮಾಲೀಕರಿಗೆ ಮನವಿ ಮಾಡಿದರು. ಗೋದೌಲಿಯಾದಿಂದ ಕಾಶಿ ವಿಶ್ವನಾಥ ಧಾಮದವರೆಗಿನ ರಸ್ತೆಯಲ್ಲಿ ಹಣ್ಣುಗಳು, ಹೂವುಗಳು, ಕೈಗಾಡಿಗಳು ಮತ್ತು ಸ್ಟಾಲ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ನಾಮಫಲಕಗಳೊಂದಿಗೆ ಆಧಾರ್ ಕಾರ್ಡ್‌ಗಳನ್ನು ಇರಿಸಲು ತಿಳಿಸಲಾಗಿದೆ. ಆಧಾರ್ ಕಾರ್ಡ್ ಇದ್ದರೆ ಏನು ತೊಂದರೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅಂಗಡಿಯವನು ತನ್ನ ಗುರುತನ್ನು ಮರೆಮಾಡಲು ಮತ್ತು ವ್ಯಾಪಾರ ಮಾಡಲು ಏಕೆ ಬಯಸುತ್ತಾರೆ ? ಭಕ್ತರ ಅನುಕೂಲಕ್ಕಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿಜವಾದ ಗುರುತು ಅಗತ್ಯವಾಗಿದೆ. ಹಿಂದೂ ಸಮಾಜವು ಇನ್ನು ಮುಂದೆ ಅಂಗಡಿಯ ಹೆಸರು, ತಿಲಕ ಮತ್ತು ಮಣಿಕಟ್ಟಿನ ಕೆಂಪು ದಾರನಿಂದ ಮೂರ್ಖರಾಗುವುದಿಲ್ಲ. ಈಗ ನೀವು ನಿಮ್ಮ ನೈಜ ಗುರುತನ್ನು ತೋರಿಸಲೇಬೇಕಾಗಿದೆ.

ಕೆಲವು ಅಂಗಡಿಯವರು ಆಹಾರದಲ್ಲಿ ಉಗುಳುವ ವಿಡಿಯೋಗಳು ಪ್ರಸಾರವಾಗಿವೆ ! – ಉತ್ತರ ಪ್ರದೇಶ ಸಚಿವ ರವೀಂದ್ರ ಜೈಸ್ವಾಲ್

ಅಂಗಡಿಕಾರರನ್ನು ಗುರುತಿಸಲು ಪೊಲೀಸ್ ಪಡೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಉತ್ತರ ಪ್ರದೇಶ ಸರಕಾರದ ಸಚಿವ ರವೀಂದ್ರ ಜೈಸ್ವಾಲ್ ಹೇಳಿದ್ದಾರೆ. ಇದನ್ನು ವಿರೋಧಿಸಿ ‘ನಾಟಕ’ ಮಾಡಲಾಗುತ್ತದೆ, ನಾನು ಕೇಳಲು ಬಯಸುತ್ತೇನೆ, ಅಂಗಡಿಯ ಮೇಲೆ ಹೆಸರು ಬರೆಯುವುದರಲ್ಲಿ ತಪ್ಪೇನಿದೆ? ಮಾಂಸಾಹಾರ ಮತ್ತು ಸಸ್ಯಹಾರಿ ಎರಡರಲ್ಲೂ ಪ್ರತಿಯೊಬ್ಬರೂ ತಮ್ಮ ಇಚ್ಛೆಯ ಅನುಗುಣವಾಗಿ ಆಹಾರವನ್ನು ಸೇವಿಸುತ್ತಾರೆ. ಶ್ರಾವಣದಲ್ಲಿ ಹಿಂದೂ ಸಮುದಾಯದ ಜನರು ಧಾರ್ಮಿಕ ನಂಬಿಕೆಯೊಂದಿಗೆ ಹಾರ ಮತ್ತು ಪ್ರಸಾದವನ್ನು ಖರೀದಿಸಲು ಇಷ್ಟಪಡುತ್ತಾರೆ. ಕೆಲವರು ಮಾಂಸಾಹಾರ ಸೇವಿಸಿ ಸಸ್ಯಾಹಾರವನ್ನೂ ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವರು ಕೈತೊಳೆಯದೆ ಸಾಮಾನುಗಳನ್ನು ಮಾರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವಸ್ತುಗಳನ್ನು ಖರೀದಿಸುವ ಜನರ ಶ್ರದ್ಧೆಯ ಮೇಲೆ ಆಘಾತವಾಗುತ್ತದೆ. ಕೆಲವರು ಮೊದಲು ತಿಂಡಿಗೆ ಉಗುಳಿ ನಂತರ ಮಾರಾಟ ಮಾಡುವ ವಿಡಿಯೋಗಳು ಕೂಡ ಕಂಡು ಬಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಾವು ಯಾವ ಅಂಗಡಿಯಲ್ಲಿ ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಹೊಂದಿರುತ್ತಾರೆ. ಅದರಲ್ಲಿ ತಪ್ಪೇನಿಲ್ಲ.

ಸಂಪಾದಕೀಯ ನಿಲುವು

ಇಡೀ ದೇಶಕ್ಕಾಗಿ ಈಗ ಈ ನಿಟ್ಟಿನಲ್ಲಿ ಕಾನೂನನ್ನು ರಚಿಸುವುದು ಅವಶ್ಯಕವಾಗಿದೆ. ಅಲ್ಲದೆ ಹಿಂದೂ ದೇವಾಲಯಗಳ ಸ್ಥಳಗಳಲ್ಲಿ ಹಿಂದೂ ಅಂಗಡಿಕಾರರಿಗೆ ಮಾತ್ರ ಅಂಗಡಿಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲು ಪ್ರಯತ್ನಿಸಬೇಕು !