Microsoft error : ಮೈಕ್ರೋಸಾಫ್ಟ್‌ನ ‘ವಿಂಡೋಸ್’ನಲ್ಲಿ ತಾಂತ್ರಿಕ ವೈಫಲ್ಯ: ವಿಶ್ವದಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನ ಸೇವೆ ಸ್ಥಗಿತ !

‘ಕ್ರೌಡ್‌ಸ್ಟ್ರೈಕ್’ ಕಂಪನಿಯ ಹೊಸ ‘ಅಪ್‌ಡೇಟ್’ ನಲ್ಲಿ ‘ಬಗ್'(ಕೊರತೆ) ಪತ್ತೆ !

ನವದೆಹಲಿ – ಜುಲೈ 19 ರಂದು ಮೈಕ್ರೋಸಾಫ್ಟ್‌ನ ಕಂಪ್ಯೂಟರ್ ಸಿಸ್ಟಮ್ ‘ವಿಂಡೋಸ್’ನಲ್ಲಿ ಹಠಾತ್ ತಾಂತ್ರಿಕ ದೋಷವು ಕಂಡುಬಂದಿದ್ದರಿಂದ ಜಗತ್ತಿನಾದ್ಯಂತ ಹಲವಾರು ಗಂಟೆಗಳ ಕಾಲ ವಿಮಾನಯಾನ ಸಂಸ್ಥೆಗಳು, ಮಾಧ್ಯಮಗಳು ಮತ್ತು ಬ್ಯಾಂಕ್‌ಗಳ ಕೆಲಸಗಳು ಸ್ಥಗಿತಗೊಂಡಿತು. ಕೆಲ ಗಂಟೆಗಳಾದರೂ ಸಮಸ್ಯೆ ಬಗೆಹರಿಯಲಿಲ್ಲ. ಇದರಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಸಮಸ್ಯೆಯಿಂದ ಬಳಲಿದರು. ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗಿತ್ತು. ಸಂಜೆ 5 ಗಂಟೆ ಸುಮಾರಿಗೆ, ಮೈಕ್ರೋಸಾಫ್ಟ್ ಅಧಿಕಾರಿಗಳು, ನಾವು ಸಮಸ್ಯೆಯನ್ನು ನಿವಾರಿಸಿದ್ದೇವೆ ಮತ್ತು ಯಾರಿಗಾದರೂ ಇನ್ನೂ ಸಮಸ್ಯೆಗಳು ಬರುತ್ತಿದ್ದರೆ, ಅವು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಎಂದು ಹೇಳಿದರು.
ಇದಕ್ಕೂ ಮೊದಲು, ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಈ ವಿಷಯದಲ್ಲಿ, ಮೈಕ್ರೋಸಾಫ್ಟ್ನ ‘ಕ್ಲೌಡ್ ಸೇವೆ’ ಸ್ಥಗಿತಗೊಂಡಿದ್ದರಿಂದ ವಿಶ್ವದಾದ್ಯಂತ ಅನೇಕ ಸೇವೆಗಳನ್ನು ನಿಲ್ಲಿಸಲಾಗಿದೆ. ನಮ್ಮ ಸಚಿವಾಲಯವು ಈ ಸಂಪೂರ್ಣ ವಿಷಯದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದರು.

ಭಾರತ ಸಹಿತ ಪ್ರಪಂಚದಾದ್ಯಂತ ಪೆಟ್ಟು !

1. ಭಾರತದ ದೆಹಲಿ, ಕೋಲಕಾತಾ, ಮುಂಬಯಿ, ಪುಣೆ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳ ಕೆಲಸಕ್ಕೆ ಭಾರಿ ಹೊಡೆತ ಬಿದ್ದಿದೆ. ಏರ್ ಇಂಡಿಯಾ, ಇಂಡಿಗೋ, ಅಕಾಸಾ ಏರ್‌ಲೈನ್ಸ್ ಮತ್ತು ಸ್ಪೈಸ್‌ಜೆಟ್ ಫ್ಲೈಟ್ ಬುಕಿಂಗ್ ಮತ್ತು ಚೆಕ್-ಇನ್ ಸೇವೆಗಳನ್ನು ಸ್ಥಗಿತಗೊಂಡಿದೆ.

ಕೆಲವು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನು ನೀಡಲು ಪ್ರಾರಂಭಿಸಿತ್ತು. ಕಂಪ್ಯೂಟರ್‌ಗಳನ್ನು ಪರಿಚಯಿಸುವ ಮೊದಲು ಮ್ಯಾನುಯಲ್ ಬೋರ್ಡಿಂಗ್ ಪಾಸ್ ಅನ್ನು ಬಳಸಲಾಗುತ್ತಿತ್ತು.

2. ವಿವಿಧ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸಿದರು.

3. ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ವಿವಿಧ ವಲಯಗಳಲ್ಲಿನ ವ್ಯವಹಾರಗಳು, ಬ್ಯಾಂಕ್‌ಗಳು, ದೂರಸಂಪರ್ಕ ಸಂಸ್ಥೆಗಳು, ದೂರದರ್ಶನ ಮತ್ತು ರೇಡಿಯೋ ಸೇವೆಗಳು ಸಹ ಸಮಸ್ಯೆಯಿಂದ ಪ್ರಭಾವಿತವಾಗಿತ್ತು.

ತಾಂತ್ರಿಕವಾಗಿ ನಿಖರವಾಗಿ ಏನಾಯಿತು ?

‘ಕ್ರೌಡ್‌ಸ್ಟ್ರೈಕ್’ ಎಂಬ ಸೈಬರ್ ಸೆಕ್ಯುರಿಟಿ ಪೂರೈಸುವ ಕಂಪನಿಯು ಮೈಕ್ರೋಸಾಫ್ಟ್‌ಗೆ ಭದ್ರತಾ ಪರಿಹಾರಗಳನ್ನು ಒದಗಿಸುತ್ತದೆ. ಅವರ ‘ಫಾಲ್ಕನ್ ಸೆನ್ಸರ್’ ಗೆ ಸಂಬಂಧಿಸಿದ ಪ್ರೋಗ್ರಾಂ ಅಪ್‌ಡೇಟ್‌ನಲ್ಲಿ ಒಂದು ದೋಷ (ಬಗ್) ಕಂಡುಬಂದಿದೆ. ಇದರಿಂದಾಗಿ ‘ಮೈಕ್ರೋಸಾಫ್ಟ್ ವಿಂಡೋಸ್’ ಸಿಸ್ಟಂ ಬಳಸುವ ಜಗತ್ತಿನ ಹಲವು ಸಂಸ್ಥೆಗಳು ನಾನಾ ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಈ ಸಮಸ್ಯೆಯಿಂದಾಗಿ ‘ಬ್ಲೂ ಸ್ಕ್ರೀನ್ ಆಫ್ ಡೆಥ್’ ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಇದರ ಅಡಿಯಲ್ಲಿ ಕಂಪ್ಯೂಟರ್ ‘ಕ್ರ್ಯಾಶ್’ ಸ್ಥಿತಿಯಲ್ಲಿದೆ ಎಂದು ತೋರಿಸುತ್ತದೆ. ಇದು ಕಂಪ್ಯೂಟರ್ ಸಿಸ್ಟಮ್ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಲು ಕಾರಣವಾಗಬಹುದು. ಅಲ್ಲದೆ ಅದರಲ್ಲಿರುವ ಎಲ್ಲಾ ವಿಷಯವನ್ನು (ಡೇಟಾ) ಅಳಿಸಬಹುದು. ಕಂಪ್ಯೂಟರ್ ಅನ್ನು ಆನ್ ಮಾಡಿದಾಗ, ನಿಮಗೆ ನೀಲಿ ಪರದೆ ಕಾಣುತ್ತದೆ ಮತ್ತು ನಿಮಗೆ ಕಂಪ್ಯೂಟರ್ ಹಾಳಾಗಿದೆ ಅನ್ನು ರೆಸ್ಟಾರ್ಟ್ ಮಾಡಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ, ಈ ಸಮಸ್ಯೆಯನ್ನು ‘ಬ್ಲೂ ಸ್ಕ್ರೀನ್ ಆಫ್ ಡೆಥ್’ ಎಂದು ಕರೆಯಲಾಗುತ್ತದೆ.