Statement from Bengal BJP Leader: ಸಬ್‌ಕಾ ಸಾಥ್ ಮತ್ತು ಸಬ್‌ಕಾ ವಿಕಾಸ್’ ಮತ್ತು ಅಲ್ಪಸಂಖ್ಯಾತರ ಮೋರ್ಚಾವನ್ನು ನಿಲ್ಲಿಸಿ ! – ಬಂಗಾಳದ ಭಾಜಪ ನಾಯಕ ಶುಭೇಂದು ಅಧಿಕಾರಿ

ಬಂಗಾಳದ ಭಾಜಪ ನಾಯಕ ಶುಭೇಂದು ಅಧಿಕಾರಿಯವರಿಂದ ಕಾರ್ಯಕರ್ತರಲ್ಲಿ ಮನವಿ !

ಕೋಲಕಾತಾ (ಬಂಗಾಳ) – ಬಂಗಾಳದ ಭಾಜಪ ನಾಯಕ ಮತ್ತು ವಿಧಾನಸಭೆಯ ವಿರೋಧಿ ಪಕ್ಷ ನಾಯಕ ಶುಭೇಂದು ಅಧಿಕಾರಿಯವರು ‘ಸಬಕಾ ಸಾಥ್ ಮತ್ತು ಸಬಕಾ ವಿಕಾಸ್’ ಇದರ ಆವಶ್ಯಕತೆ ನಮಗೆ ಇಲ್ಲ. ನಮಗೆ (ಹಿಂದೂಗಳಿಗೆ) ಸಾಥ್ ನೀಡುವವರಿಗೆ(ಬೆಂಬಲಿಸುವವರಿಗೆ?) ನಾವು ಸಾಥ್ ನೀಡೋಣ. ನಾವು ಚುನಾವಣೆಯನ್ನು ಗೆಲ್ಲೋಣ ಮತ್ತು ಹಿಂದೂಗಳನ್ನು ರಕ್ಷಿಸೋಣ’ ಎಂದು ಹೇಳಿದ್ದಾರೆ. ಅವರು ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅಧಿಕಾರಿಯವರು ಭಾಜಪದ `ಅಲ್ಪಸಂಖ್ಯಾತ ಮೋರ್ಚಾ’ ಶಾಖೆಯನ್ನೇ ಮುಚ್ಚುವಂತೆ ಒತ್ತಾಯಿಸಿದರು. ‘ಸಬಕಾ ಸಾಥ್ ಮತ್ತು ಸಬಕಾ ವಿಕಾಸ್’ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ.

ಶುಭೇಂದು ಅಧಿಕಾರಿಯವರು ರಾಜ್ಯದ ಉಪಚುನಾವಣೆಗೆ ಭಾಜಪ ಸೋಲಿಗೆ ಕಾರಣಗಳನ್ನು ತಿಳಿಸಿದರು. ಅವರು, `ಉಪಚುನಾವಣೆಯಲ್ಲಿ ಸಾವಿರಾರು ಹಿಂದೂಗಳಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ಲಕ್ಷಗಟ್ಟಲೆ ಹಿಂದೂಗಳಿಗೆ ಮತ ಹಾಕಲು ಅವಕಾಶ ನೀಡಲಿಲ್ಲ; ಯಾಕೆಂದರೆ ನಾವು ಹಿಂದೂ ಆಗಿದ್ದೇವೆ. ಇನ್ನು ಮುಂದೆ ಮತದಾನದ ಸಮಯದಲ್ಲಿ (ಹಿಂದೂಗಳು ಮತದಾನ ಮಾಡಬಾರದು; ಎಂದು) ಬೆಳಗ್ಗಿನಿಂದಲೇ ನಮ್ಮ ಮನೆಯ ಮುಂದೆ ಜಿಹಾದಿಗಳು ಕುಳಿತಿರುತ್ತಾರೆ. ಪೊಲೀಸರು ವೀಕ್ಷಕರಾಗಿರುತ್ತಾರೆ. ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲಿಂದ 10 ಕಿಲೋಮೀಟರ್ ದೂರದಲ್ಲಿರುವ ಘಟಕ್‌ಪುರ ಮತ್ತು ಭಂಗಾರ್‌ನಲ್ಲಿ ಹಿಂದೂಗಳಿಗೆ ಮತದಾನ ಮಾಡಲು ಬಿಡಲಿಲ್ಲ. ಬದುರಿಯಾ, ಹರೋವಾ ಮತ್ತು ಕ್ಯಾನಿಂಗ್ ವೆಸ್ಟ್ ನಲ್ಲಿ ತೃಣಮೂಲ ಕಾಂಗ್ರೆಸ್ ಒಂದುವರೆಲಕ್ಷ ಮತಗಳಿಂದ ಗೆದ್ದಿದೆ. ಅಲ್ಲಿ ಚುನಾವಣೆ ಗುರುತಿನ ಚೀಟಿಯ ಮೂಲಕ ಮತದಾನ ನಡೆದಿಲ್ಲ. ಸ್ಲಿಪ್ ಮೂಲಕ ಮತದಾನ ನಡೆದಿದೆ. ನಮಗೆ ಬಂಗಾಳದಲ್ಲಿ ಪ್ರಜಾಪ್ರಭುತ್ವ ಬೇಕು. ಧನೆಖಾಲಿ, ಕೇಶಪುರ, ಇಂದಾಸ, ಪತ್ರಸೈರ, ಶಿತಲಾಕುಚಿಯಲ್ಲಿ ಹಿಂದೂಗಳಿಗೆ ಮತದಾನ ಮಾಡಲು ಬಿಡಲಿಲ್ಲ. ಚುನಾವಣೆಯ ದಿನದಂದು ನನಗೆ ಗೂಂಡಾಗಳು ಮನೆಯಲ್ಲಿ ಬಂಧಿಸಿಟ್ಟರು. ಕೇಂದ್ರ ಭದ್ರತಾ ಸಿಬ್ಬಂದಿಗೆ ಚುನಾವಣೆ ಗುರುತು ಪತ್ರವನ್ನು ಪರಿಶೀಲಿಸುವ ಅಧಿಕಾರ ನೀಡಬೇಕು, ಇದು ನನ್ನ ಇಚ್ಛೆಯಾಗಿದೆ. ಬಂಗಾಳದಲ್ಲಿ ಸಂವಿಧಾನ ಸಂಪೂರ್ಣವಾಗಿ ನಷ್ಟಗೊಂಡಿದೆ. ನಮಗೆ ಸಂವಿಧಾನವನ್ನು ರಕ್ಷಿಸಬೇಕಾಗಿದೆ.’’ಎಂದು ಹೇಳಿದರು.

ಶುಭೇಂದು ಅಧಿಕಾರಿಯವರು ಮತದಾರರಿಗಾಗಿ ಜಾಲತಾಣ ಆರಂಭ !

ಶುಭೇಂದು ಅಧಿಕಾರಿಯವರು ಈ ಸಂದರ್ಭದಲ್ಲಿ ಒಂದು ಜಾಲತಾಣವನ್ನು (ಪೋರ್ಟಲ್) ಉದ್ಘಾಟಿಸಿದರು. ಅವರು ನಾನು ಭರವಸೆ ನೀಡಿದಂತೆ ಒಂದು ಪೋರ್ಟಲ್ಅನ್ನು ಪ್ರಾರಂಭಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಈ ಪೋರ್ಟಲ್ ನಲ್ಲಿ ಯಾವ ಮತದಾರರಿಗೆ ಮತದಾನ ಮಾಡಲು ಅವಕಾಶವಿಲ್ಲವೋ, ಅವರು ತಮ್ಮ ದೂರುಗಳನ್ನು ದಾಖಲಿಸಬಹುದು. ಅಂತಹವರ ಗೌಪ್ಯತೆಯ ಬಗ್ಗೆ ಸಂಪೂರ್ಣ ಜಾಗೃತೆ ವಹಿಸಲಾಗುವುದು ಎಂದು ಹೇಳಿದ್ದಾರೆ.

ನಾನು ಏನು ಮಾತನಾಡಿದ್ದೇನೆಯೋ, ಅದು ಬಂಗಾಳದ ವಸ್ತುಸ್ಥಿತಿಯಾಗಿದೆ ! – ಶುಭೇಂದು ಅಧಿಕಾರಿಯವರ ಸ್ಪಷ್ಟೀಕರಣ

ಪಂತಪ್ರಧಾನ ಮೋದಿಯವರ `ಸಬಕಾ ಸಾಥ, ಸಬಕಾ ವಿಕಾಸ’ ಈ ಘೋಷಣೆಯೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟ ಪಡಿಸಿದರು.

 

(ಸೌಜನ್ಯ: The Indian Express)

ಶುಭೇಂದು ಅಧಿಕಾರಿಯವರ ಹೇಳಿಕೆಯಿಂದ ರಾಜಕೀಯ ವಾತಾವರಣ ಕಾವೇರಿರುವ ಬೆನ್ನಲ್ಲಿ ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡುವಾಗ ಶುಭೇಂದು ಅಧಿಕಾರಿಯುವರು, ನನ್ನ ಹೇಳಿಕೆ ಪ್ರಧಾನಿ ಮೋದಿ, ಪಕ್ಷ ಮತ್ತು ಕೇಂದ್ರ ಸರಕಾರದ `ಸಬಕಾ ಸಾಥ, ಸಬಕಾ ವಿಕಾಸ’ ಈ ಘೋಷಣೆಯೊಂದಿಗೆ ಜೋಡಿಸಬಾರದು. ನಾವು ಏನು ಹೇಳಿದ್ದೇನೆಯೋ, ಅದು ಬಂಗಾಳದ ವಸ್ತುಸ್ಥಿತಿಯಾಗಿದೆ. ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಭಾಜಪಕ್ಕೆ ಮತ ಹಾಕಿಲ್ಲ. ಹಿಂದೂಗಳು ಎಚ್ಚೆತ್ತುಕೊಳ್ಳುವ ಆವಶ್ಯಕತೆಯಿದೆ; ಏಕೆಂದರೆ ಬಂಗಾಳ ಕೈತಪ್ಪಿ ಹೋಗುತ್ತಿದೆ. ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಹಲವು ಜಿಲ್ಲೆಗಳಲ್ಲಿ ಜನಸಂಖ್ಯೆಯ ಅಂಕಿಅಂಶಗಳು ಬದಲಾಗಿವೆ. ಹಲವೆಡೆ ಹಿಂದೂಗಳು ಅಲ್ಪಸಂಖ್ಯಾತರು ಹಾಗೂ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ನಾನು ನನ್ನ ಪ್ರದೇಶಕ್ಕೆ ಹೋದಾಗ ಹಿಂದೂ ಅಥವಾ ಮುಸ್ಲಿಂ ಆಗಿರಲಿ ಎಲ್ಲರಿಗೂ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸುತ್ತೇನೆ. ಆದರೂ ‘ಭಾಜಪ ಹಿಂದೂಗಳ ಪರವಾಗಿದೆ’ ಎಂದು ಹೇಳಲಾಗುತ್ತದೆ. ನಾವು ಎಲ್ಲರಿಗಾಗಿ ಕೆಲಸ ಮಾಡುತ್ತೇವೆ, ನಮ್ಮ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಎಲ್ಲರಿಗಾಗಿ ಜಾರಿಗೊಳಿಸಲಾಗಿದೆ. ಅದು ಎಲ್ಲರಿಗಾಗಿ ಇದೆ. ನಾನು ಮಂಡಿಸಿರುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಯಾವುದು ಸತ್ಯವಿದೆಯೋ, ಅದನ್ನು ನಾನು ಹೇಳಿದ್ದೇನೆ.