ವಿಚ್ಛೇದಿತ ಮಹಿಳೆಯರಿಗೆ ಜೀವನಾಂಶ ನೀಡುವುದು ಷರಿಯಾ ಕಾನೂನಿಗೆ ವಿರುದ್ಧವಾಗಿದೆ ಎಂದು ಬೋರ್ಡ್ ನ ಅಭಿಪ್ರಾಯ
ನವ ದೆಹಲಿ – ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ಯು ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನೀಡುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ತಪ್ಪೆಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನ ಕುರಿತು ಚರ್ಚಿಸಲು ಬೋರ್ಡ್ ನ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ‘ವಿಚ್ಛೇದಿತ ಮಹಿಳೆಯರಿಗೆ ಜೀವನಾಂಶ ನೀಡುವುದು ಶರಿಯತ್ ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಹಿಂಪಡೆಯುವಂತೆ ಹೇಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪರಿಶೀಲಿಸಲಾಗುವುದು’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
‘ನ್ಯಾಯಾಲಯದ ತೀರ್ಪಿನಿಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ನಿರ್ಮಾಣವಾಗಬಹುದಂತೆ ! – ಮುಸ್ಲಿಂ ಬೋರ್ಡ್
ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಪ್ರವಾದಿ ಮಹಮ್ಮದ ಪೈಗಂಬರ ಅವರು ‘ವಿಚ್ಛೇದನವು ಅತ್ಯಂತ ಹೇಯವಾದ ವಿಷಯವಾಗಿದೆ’ ಎಂದು ಹೇಳಿದ್ದರು. ಆದ್ದರಿಂದ, ವೈವಾಹಿಕ ಸಂಬಂಧವನ್ನು ಕಾಪಾಡಿಕೊಳ್ಳಲು ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಕುರಾನ್‌ನಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಒಂದು ವೇಳೆ ವೈವಾಹಿಕ ಜೀವನ ನಿರ್ವಹಣೆ ಕಷ್ಟವಾದರೆ ವಿಚ್ಛೇದನವನ್ನು ಒಂದು ‘ಮಾನವೀಯ ಪರಿಹಾರ’ವಾಗಿ ನೋಡಬಹುದು. ಬೋರ್ಡ್ ಕೈಕೊಂಡಿರುವ ಠರಾವಿನಲ್ಲಿ, ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ, ತಮ್ಮ ನೋವಿನ ಸಂಬಂಧಗಳಿಂದ ಯಶಸ್ವಿಯಾಗಿ ಹೊರಬಂದ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಅನಿಸುತ್ತದೆ.
🏛⚖️’SC’s decision to grant alimony to divorced Mu$|!m woman, is against Sharia and wrong.’ – AIMPLB.
‘The Supreme Court’s decision will further add to woman’s problems’ – All India Muslim Personal Law Board (AIMPLB)
• Divorced Mu$|!m women face agony as they do not get… pic.twitter.com/Chww0A1xDl
— Sanatan Prabhat (@SanatanPrabhat) July 15, 2024
ಸಂಪಾದಕೀಯ ನಿಲುವು
|
ಸರ್ವೋಚ್ಚ ನ್ಯಾಯಾಲಯದ ಆದೇಶವೇನು ?
ಸರ್ವೋಚ್ಚ ನ್ಯಾಯಾಲಯವು ಜುಲೈ 10 ರಂದು ‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯುವ ಅಧಿಕಾರವಿದೆ. ಅದಕ್ಕಾಗಿ ಅವಳು ಅರ್ಜಿಯನ್ನು ಸಲ್ಲಿಸಬಹುದು’ ಎಂದು ಆದೇಶ ನೀಡಿತ್ತು. ನ್ಯಾಯಮೂರ್ತಿ ಬಿ.ಬಿ. ನಾಗರತ್ನ ಮತ್ತು ನ್ಯಾಯಮೂರ್ತಿ ಆಗಸ್ಟಿನ ಜಾರ್ಜ್ ಮಸಿಹ್ ನೇತೃತ್ವದ ವಿಭಾಗೀಯ ಪೀಠವು ಮಹಮ್ಮದ ಅಬ್ದುಲ ಸಮದ ಹೆಸರಿನ ಮುಸಲ್ಮಾನನ ಅರ್ಜಿಯನ್ನು ವಜಾಗೊಳಿಸುತ್ತಾ ಈ ತೀರ್ಪು ನೀಡಿದೆ. `ಈ ನಿರ್ಣಯ ಎಲ್ಲ ಧರ್ಮದ ಮಹಿಳೆಯರಿಗೆ ಅನ್ವಯಿಸುತ್ತದೆ’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.