Heavy Rainfall : ಉತ್ತರ ಪ್ರದೇಶದ 800 ಹಳ್ಳಿಗಳಲ್ಲಿ ಪ್ರವಾಹ !

ಮುಂದಿನ 5 ದಿನಗಳ ಕಾಲ ದೇಶದ 23 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಸಾಧ್ಯತೆ !

ನವ ದೆಹಲಿ – ಮುಂದಿನ 5 ದಿನಗಳಲ್ಲಿ ದೇಶದ 23 ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಪ್ರದೇಶದಲ್ಲಿ ಪ್ರವಾಹದಿಂದಾಗಿ 800 ಗ್ರಾಮಗಳು ಜಲಾವೃತವಾಗಿವೆ. ದೇಶಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದಿಂದ ಬಂದ್ ಆಗಿದ್ದ ಬದರಿನಾಥ ಹೆದ್ದಾರಿಯನ್ನು 83 ಗಂಟೆಗಳ ನಂತರ ಮತ್ತೆ ತೆರೆಯಲಾಗಿದೆ. ಚಾರ್ ಧಾಮ್ ಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದರು.

ದೇಶದಾದ್ಯಂತ ಹಾಹಾ:ಕಾರ !

1. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು 21 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯಾದ್ಯಂತ ಜುಲೈ ತಿಂಗಳಲ್ಲಿ ಕೇವಲ ಸಿಡಿಲು ಬಡಿದು ಇದುವರೆಗೆ 70 ಜನರು ಸಾವನ್ನಪ್ಪಿದ್ದಾರೆ.

2. ಅಸ್ಸಾಂನಲ್ಲಿ ಪ್ರವಾಹ ಪೀಡಿತ ಪರಿಸ್ಥಿತಿಯಿಂದ 12 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಇದುವರೆಗೆ ಪ್ರವಾಹ ಮತ್ತು ಸಿಡಿಲು ಬಡಿದು 106 ಜನರು ಪ್ರಾಣ ಕಳೆದುಕೊಂಡಿದ್ದಾರೆ.

3. ಹಿಮಾಚಲ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದೆ.

4. ಬರುವ ಐದು ದಿನಗಳಲ್ಲಿ ದೇಶದ 23 ರಾಜ್ಯಗಳ ಬೇರೆ ಬೇರೆ ಸ್ಥಳಗಳಲ್ಲಿ ಭಾರೀ ಮಳೆಯಿಂದ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ‘ರೆಡ್, ಆರೆಂಜ್ ಮತ್ತು ಯಲ್ಲೋ ಅಲರ್ಟ್’ (ವಿವಿಧ ಮಟ್ಟದ ಅಪಾಯದ ಎಚ್ಚರಿಕೆ) ಸೂಚನೆ ನೀಡಿದೆ.

5. ಸಿಕ್ಕಿಂ, ಬಂಗಾಳ, ಗುಜರಾತ್, ಮುಂಬಯಿ, ಕೊಂಕಣ ಮತ್ತು ಗೋವಾದ ಅನೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ಇದಲ್ಲದೆ, ಅಸ್ಸಾಂ, ಜಾರ್ಖಂಡ್, ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ಒಡಿಶಾ, ವಿದರ್ಭ, ಮಧ್ಯ ಮಹಾರಾಷ್ಟ್ರ, ಆಂಧ್ರಪ್ರದೇಶದ ಕರಾವಳಿ, ಕರ್ನಾಟಕದ ಕರಾವಳಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಧಾರಾಕಾರ ಮಳೆಯಾಗಿದೆ.

6. ರಾಜಸ್ಥಾನದ ನಾಗೌರ ಜಿಲ್ಲೆಯ ಪರ್ಬತ್ಸರ್ ನಲ್ಲಿ ಅತ್ಯಧಿಕ 89 ಮಿ.ಮೀ ಮಳೆ ದಾಖಲಾಗಿದ್ದರೆ, ರಾಜ್ಯದ ಧೌಲಪುರ್ ಜಿಲ್ಲೆಯಲ್ಲಿರುವ ಸೆಪೌ ನಲ್ಲಿ 65 ಮಿ.ಮೀ ಮಳೆ ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ 10 ರಸ್ತೆಗಳನ್ನು ಬಂದ್ ಆಗಿದೆ.