ಉತ್ತರಾಖಂಡ ಮತ್ತು ಉತ್ತರಪ್ರದೇಶಗಳಲ್ಲಿ ಮುಸಲ್ಮಾನರು ಅಂಗಡಿ-ಢಾಬಾಗಳಿಗೆ ಹಿಂದೂ ದೇವತೆಗಳ ಹೆಸರನ್ನಿಟ್ಟು ವ್ಯಾಪಾರ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಕಾವಡಾ ಯಾತ್ರೆಯಲ್ಲಿ ಮುಸಲ್ಮಾನರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನಿಟ್ಟರೆ ಅನೇಕ ವಿವಾದಗಳು ನಿರ್ಮಾಣವಾಗಬಹುದು ಮತ್ತು ಅನೇಕರ ಆಕ್ಷೇಪ ಕೂಡ ಇರಬಹುದು. ನಿಮಗೆ ಇಷ್ಟವಾದಂತಹ ಹೆಸರನ್ನು ಅಂಗಡಿಗೆ ಇಟ್ಟುಕೊಳ್ಳಿ, ಅದರ ಬಗ್ಗೆ ಆಕ್ಷೇಪವಿಲ್ಲ ; ಆದರೆ ಹಿಂದೂ ದೇವತೆಗಳ ಹೆಸರನ್ನು ಮಾತ್ರ ಉಪಯೋಗಿಸಬೇಡಿ ಎಂದು ಉತ್ತರಪ್ರದೇಶದ ಸಚಿವ ಕಪಿಲ ದೇವ ಅಗ್ರವಾಲ್ ಅವರು ಕೆಲವು ದಿನಗಳ ಹಿಂದಿನ ಒಂದು ಸಭೆಯಲ್ಲಿ ಕರೆ ನೀಡಿದರು. ಈ ಬಗ್ಗೆ ಝೀ ನ್ಯೂಸ್ ಹಿಂದಿ ಚಾನೆಲ್ ಉತ್ತರಾಖಂಡ ಮತ್ತು ಉತ್ತರಪ್ರದೇಶ ರಾಜ್ಯದಲ್ಲಿ ಒಂದು ಅಭಿಯಾನ ನಡೆಸಿ ಅಂತಹ ಅಂಗಡಿಗಳು ಮತ್ತು ಢಾಬಾಗಳ ಮಾಹಿತಿ ಬಹಿರಂಗಪಡಿಸಿದೆ. ಈ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರು ನೀಡಲಾಗಿದೆ ಆದರೆ ಅದರ ಮಾಲೀಕರು ಮಾತ್ರ ಮುಸಲ್ಮಾನರಾಗಿದ್ದಾರೆ.
Several cases of Mu$|!m$ disguising their shops and roadside restaurants by naming them after Hindu deities in #UttarPradesh and #Uttarakhand.
👉 Mu$|!m businessmen’s deceitful ‘Naam Jih#d’.
👉 Mu$|!m$ are very well aware that devout Hindus on #KanwarYatra or pilgrimage would… pic.twitter.com/8iYmSoZWa3
— Sanatan Prabhat (@SanatanPrabhat) July 9, 2024
೧. ಉತ್ತರಾಖಂಡದಲ್ಲಿ ವೈಷ್ಣೋದೇವಿ ಎಂಬ ಹೆಸರಿನ ಅನೇಕ ಅಂಗಡಿಗಳು ಮತ್ತು ಢಾಬಾಗಳು ಈ ಚಾನೆಲ್ ನ ಪತ್ರಕರ್ತರಿಗೆ ದೊರೆತವು; ಆದರೆ ಅವುಗಳಲ್ಲಿನ ಬಹಳಷ್ಟು ಅಂಗಡಿಗಳು ಮತ್ತು ಢಾಬಾಗಳ ಮಾಲೀಕರು ಮುಸಲ್ಮಾನರಾಗಿದ್ದಾರೆ.
೨. ಢಾಬಾದ ಹೆಸರಿನಿಂದ ಕಾವಡಾ ಯಾತ್ರಿಕರು ಅಲ್ಲಿ ಉಪಹಾರ ಅಥವಾ ಭೋಜನ ಮಾಡುವುದಕ್ಕಾಗಿ ಹೋಗುತ್ತಾರೆ. ಅಲ್ಲಿ ಕಾವಡಾ ಯಾತ್ರಿಗಳಿಗಾಗಿ ಬೇರೆ ವ್ಯವಸ್ಥೆ ಮಾಡಲಾಗುತ್ತದೆ, ಆದರೂ ಪದಾರ್ಥ ತಯಾರಿಸುವವರು ಮುಸಲ್ಮಾನರೇ ಇರುತ್ತಾರೆ; ಆದರೆ ಇದು ಕಾವಡಾ ಯಾತ್ರಿಕರಿಗೆ ತಿಳಿದಿರುವುದಿಲ್ಲ.
೩. ಜಿ ನ್ಯೂಸ್ ತಂಡ ಬಿಜನೌರಾದ ಡೆಹರಾಡೂನ್-ನೈನಿತಾಲ್ ಮಹಾಮಾರ್ಗಕ್ಕೆ ತಲುಪಿದಾಗ ಅಲ್ಲಿ ಅವರಿಗೆ ಇಂತಹ ೨೦ ಕ್ಕಿಂತಲೂ ಹೆಚ್ಚಿನ ಢಾಬಾಗಳು ದೊರೆತವು. ಈ ಢಾಭಾಗಳಿಗೆ ಹಿಂದೂ ದೇವತೆಗಳ ಹೆಸರನ್ನಿಡಲಾಗಿತ್ತು; ಆದರೆ ಆ ಅಂಗಡಿಗಳನ್ನು ಮುಸಲ್ಮಾನರು ನಡೆಸುತ್ತಿದ್ದರು. ಶ್ರೀ ಖಾಟು ಶ್ಯಾಮ ಢಾಬಾ, ನೀಲಕಂಠ ಫ್ಯಾಮಿಲಿ ರೆಸ್ಟೋರೆಂಟ್, ಹಿಮಾಲಯ ಢಾಬಾ, ಶಿವ ಢಾಬಾ, ಈ ಹೆಸರುಗಳಿಂದ ಢಾಬಾಗಳನ್ನು ನಡೆಸಲಾಗುತ್ತಿದೆ.
೪. ಉತ್ತರಪ್ರದೇಶದಲ್ಲಿನ ಸಹಾರಾನಪುರದಲ್ಲಿಯೂ ಕೂಡ ಇಂತಹ ಅನೇಕ ಹಿಂದುಗಳ ದೇವತೆಯ ಹೆಸರಿನಿಂದ ನಡೆಯುತ್ತಿರುವ ಅಂಗಡಿಗಳು ಕಂಡು ಬಂದಿವೆ. ಅಲ್ಲಿನ ಒಂದು ‘ಜನತಾ ವೈಷ್ಣವ್ ಢಾಬಾ’ ದ ಮಾಲೀಕ ಮುಸಲ್ಮಾನನಾಗಿದ್ದನು. ನ್ಯೂಸ್ ಚಾನೆಲ್ ನ ಪತ್ರಕರ್ತರು ಈ ಢಾಬಾದ ಮಾಲೀಕ ಮಹಮ್ಮದ್ ಅನಾಸ್ ಸಿದ್ಧಕಿ ಜೊತೆ ಚರ್ಚಿಸಿದಾಗ ಅವರು, ‘ಕಳೆದ ೧೫ ವರ್ಷಗಳಿಂದ ನನಗೆ ಈ ಹೆಸರಿನಿಂದ ಯಾವುದೇ ಅಡಚಣೆ ಬಂದಿಲ್ಲ’ ಎಂದು ಹೇಳಿದರು. ಈ ಢಾಬಾದಲ್ಲಿ ಕಾವಡಾ ಯಾತ್ರಿಕರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ.
೫. ಉತ್ತರಪ್ರದೇಶದಲ್ಲಿನ ಬರೇಲಿಯಲ್ಲಿನ ಮುಸಲ್ಮಾನ ವ್ಯಾಪಾರಿ ಹಿಂದೂ ದೇವತೆಯ ಹೆಸರಿನಿಂದ ಅಂಗಡಿಗಳು ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಹಿಂದೂಗಳು ಈ ಅಂಗಡಿಯಿಂದ ಸಿಹಿ ತಿನಿಸುಗಳನ್ನು ಖರೀದಿಸುತ್ತಾರೆಂದು ಅವರು ಅಂಗಡಿಯ ಹೆಸರನ್ನು ‘ಚೌದರಿ ಸ್ವೀಟ್ಸ್’ ಎಂದು ಇಟ್ಟಿದ್ದಾರೆ.
ಕೇವಲ ಚೌಧರಿ ಅಷ್ಟೇ ಅಲ್ಲ, ಬರೇಲಿಯಲ್ಲಿ ಹಿಂದೂ ಹೆಸರಿನಿಂದ ನಡೆಯುತ್ತಿರುವ ಅನೇಕ ಅಂಗಡಿಗಳಿವೆ. ಈ ಢಾಬಾಗಳು ಮತ್ತು ಅಂಗಡಿಗಳು ಹಲವು ವರ್ಷಗಳಿಂದ ಹಿಂದೂಗಳ ಹೆಸರಿನಲ್ಲಿ ನಡೆಯುತ್ತಿದ್ದು ಕೇವಲ ವ್ಯವಹಾರ ನಡೆಸುವುದೇ ಇದರ ಏಕೈಕ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಮುಸಲ್ಮಾನ ವ್ಯಾಪಾರಿಗಳು ಅವರ ಧರ್ಮದ ಹೆಸರನ್ನು ತಮ್ಮ ಅಂಗಡಿ- ಢಾಬಾಗಳಿಗೆ ಇಟ್ಟರೆ ಹಿಂದೂ ಗ್ರಾಹಕರು ಬರಲಾರರು ಎಂಬುದು ಸ್ಪಷ್ಟವಾಗಿರುವುದರಿಂದ ಹಿಂದೂಗಳಿಗೆ ಮೋಸ ಮಾಡುವುದಕ್ಕಾಗಿ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರುಗಳನ್ನು ಇಡಲಾಗುತ್ತಿದೆ. ಇದು ನಾಮ ಜಿಹಾದ್ ಆಗಿದೆ. ಇದನ್ನು ಕೂಡ ಹಿಂದೂಗಳು ಕಾನೂನು ರೀತಿಯಲ್ಲಿ ವಿರೋಧಿಸುವುದು ಆವಶ್ಯಕವಾಗಿದೆ. ಲವ್ ಜಿಹಾದ್ ನಲ್ಲಿ ಮುಸಲ್ಮಾನ ಯುವಕರು ಹಿಂದೂ ಹೆಸರು ಹೇಳಿ ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸುತ್ತಾರೆ. ಅದೇ ರೀತಿ ಈ ‘ನಾಮ ಜಿಹಾದ್’ ಆಗಿದೆ. ಈಗ ಇದರ ವಿರುದ್ಧವೂ ಕೂಡ ಸರಕಾರ ಕಾನೂನು ರೂಪಿಸುವ ಆವಶ್ಯಕತೆ ಇದೆ. ಒಂದೆಡೆ ಮತಾಂಧ ಮುಸಲ್ಮಾನರು ಹಿಂದೂ ದೇವತೆಗಳನ್ನು ಕೀಳಾಗಿ ನೋಡುತ್ತಾರೆ ಮತ್ತು ಇನ್ನೊಂದೆಡೆ ಅದೇ ಹೆಸರನ್ನು ಬಳಸಿ ತಮ್ಮ ಉದರ ನಿರ್ವಾಹ ನಡೆಸುತ್ತಾರೆ ! |