ನ್ಯಾಯಾಲಯದ ಆದೇಶ ಲೆಕ್ಕಿಸದೆ ಪೊಲೀಸರು ಹಿಂದೂ ಪ್ರಿಯಕರನ ಜೊತೆಗೆ ವಾಸಿಸುತ್ತಿದ್ದ ಮುಸಲ್ಮಾನ ಯುವತಿಯನ್ನು ಆಕೆಯ ತಂದೆಯ ವಶಕ್ಕೆ ಒಪ್ಪಿಸಿದರು !

ಉಚ್ಚ ನ್ಯಾಯಾಲಯದಿಂದ ಪೊಲೀಸರಿಗೆ ಛೀಮಾರಿ

ಲಕ್ಷ್ಮಣಪುರಿ – ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿರುವ ಅಯೋಧ್ಯೆ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದೆ ವಿವಾಹವಾಗಿದ್ದ ಹಿಂದೂ ಪ್ರಿಯಕರ ಮತ್ತು ಮುಸಲ್ಮಾನ ಪ್ರೇಯಸಿ ಜೋಡಿಯ ಶಾಂತಿಯುತ ಜೀವನಕ್ಕೆ ಪೊಲೀಸರೇ ಅಡ್ಡಗಾಲು ಹಾಕಿದ್ದಾರೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ. ಪ್ರತ್ಯಕ್ಷವಾಗಿ ನ್ಯಾಯಾಲಯದ ಆದೇಶದ ವಿರುದ್ಧ ಪೊಲೀಸರು ಮುಸಲ್ಮಾನ ಪ್ರೇಯಸಿಯನ್ನು ಬಲವಂತವಾಗಿ ಆಕೆಯ ತಂದೆಯ ವಶಕ್ಕೆ ಒಪ್ಪಿಸಿದ್ದರು. ಇದರ ವಿರುದ್ಧ ಹಿಂದೂ ಪ್ರಿಯಕರನು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದನು. ಲಖನೌ ಖಂಡಪೀಠದ ನ್ಯಾಯಮೂರ್ತಿ ರಾಜೀವ್ ಸಿಂಹ ಅವರು ಪ್ರಿಯಕರನ ಅವಮಾನ ಅರ್ಜಿಯ ವಿಚಾರಣೆ ನಡೆಸುವಾಗ, ಪುರಾಕಲಂದರ್ ಪೊಲೀಸ್ ಠಾಣೆಯ ಅಧಿಕಾರಿ ರಮಾ ಶಂಕರ್ ಸರೋಜ್ ಅವರಿಗೆ ಖಡಕ್ ನೋಟಿಸ್ ನೀಡಿದೆ.

೧. ಹಿಂದೂ ಯುವಕನು ತನ್ನ ಅರ್ಜಿಯಲ್ಲಿ, ನನ್ನ ಮುಸಲ್ಮಾನ ಪ್ರೇಯಸಿಯ ತಂದೆಯು ನಮ್ಮ ಸಂಬಂಧವನ್ನು ವಿರೋಧಿಸುತ್ತಿದ್ದರು, ನಾವಿಬ್ಬರೂ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ರಕ್ಷಣೆಗಾಗಿ ಆಗ್ರಹಿಸಿದ್ದೆವು ಎಂದು ಹೇಳಿದ್ದಾನೆ.

೨. ೫ ಮಾರ್ಚ್ ೨೦೨೪ ರಂದು ನ್ಯಾಯಾಲಯವು ಈ ಅರ್ಜಿಯ ವಿಚಾರಣೆ ನಡೆಸಿ ಅಯೋಧ್ಯಾ ಪೊಲೀಸರಿಗೆ ಈ ಜೋಡಿಯ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಆದೇಶಿಸಿದ್ದತ್ತು. ಆದರೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪೊಲೀಸರೇ ಬಲವಂತವಾಗಿ ಆ ಪ್ರೇಯಸಿಯನ್ನು ಆಕೆಯ ತಂದೆಗೆ ಒಪ್ಪಿಸಿದ್ದಾರೆ.

೩. ನ್ಯಾಯಾಲಯವು ಪೊಲೀಸರಿಂದ ಮಾಹಿತಿ ಕೇಳಿರುವಾಗ, ಹುಡುಗಿಯ ತಂದೆಯು ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ನ್ಯಾಯಾಲಯದ ಆದೇಶವನ್ನು ಅವಮಾನಿಸಿರುವ ಪೊಲೀಸರಿಗೆ ನ್ಯಾಯಾಲಯವು ಕೇವಲ ಛೀಮಾರಿ ಹಾಕದೆ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಿಂದೂಗಳಿಗೆ ಅಪೇಕ್ಷಿತವಾಗಿದೆ !

ಲವ್ ಜಿಹಾದ್ ದ ಅನೇಕ ಪ್ರಕಾರಗಳಲ್ಲಿ ಹಿಂದೂ ಯುವತಿಯರ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ; ಆದರೆ ಪೊಲೀಸರು ಅದನ್ನು ನಿರ್ಲಕ್ಷಿಸುತ್ತಾರೆ. ಅದೇ ಪೊಲೀಸರು ಹಿಂದೂ ಪ್ರಿಯಕರ ಮುಸಲ್ಮಾನ ಪ್ರೇಯಸಿ ಇರುವಾಗ ನ್ಯಾಯಾಲಯದ ಆದೇಶವನ್ನೂ ಲೆಕ್ಕಿಸದೆ ಮುಸಲ್ಮಾನರಿಗೆ ಸಹಾಯ ಮಾಡುತ್ತಾರೆ ಎಂಬುದನ್ನು ಗಮನದಲ್ಲಿಡಿ