ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಮರಣೆ, ಸ್ತವನ, ನಮನ ಹಾಗೂ ‘ಭಜನೆ ಗಳೆ ಸಾಧಕರ ಉದ್ಧಾರದ ಏಕೈಕ ಮಾರ್ಗ
‘ಶ್ರೀಮತ್ಪರಬ್ರಹ್ಮ ಗುರುಂ ಸ್ಮರಾಮಿ ಶ್ರೀಮತ್ಪರಬ್ರಹ್ಮ ಗುರುಂ ವದಾಮಿ |
ಶ್ರೀಮತ್ಪರಬ್ರಹ್ಮ ಗುರುಂ ನಮಾಮಿ ಶ್ರೀಮತ್ಪರಬ್ರಹ್ಮ ಗುರುಂ ಭಜಾಮಿ ||
– ಗುರುಗೀತೆ, ಶ್ಲೋಕ ೮೮
ಅರ್ಥ : ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಸ್ಮರಿಸುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳ ಸ್ತವನ ಮಾಡುತ್ತೇನೆ. ನಾನು ಶ್ರೀಮತ್ ಪರಬ್ರಹ್ಮ ಗುರುಗಳಿಗೆ ನಮಿಸುತ್ತೇನೆ ಹಾಗೂ ನಾನು ಶ್ರೀಮತ್ ಪರಬ್ರಹ್ಮ ಗುರುಗಳನ್ನು ಭಜಿಸುತ್ತೇನೆ.
ಭಾವಾರ್ಥ : ಸನಾತನದ ಸಾಧಕರ ಜೀವನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವತರಿಸಿದರು ಹಾಗೂ ಅವರೇ ಸಾಧಕರ ಸರ್ವಸ್ವವಾದರು; ಆದ್ದರಿಂದ ಸಾಧಕರೇ, ಶ್ರೀಮತ್ ಪರಬ್ರಹ್ಮ ಸ್ವರೂಪಿ ಗುರುದೇವರನ್ನೇ ಅಖಂಡವಾಗಿ ಸ್ಮರಣೆ ಮಾಡೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರ ದೈವೀ ಅವತಾರ ಕಾರ್ಯವನ್ನು ಹಾಗೂ ಅವರ ವಿವಿಧ ಗುಣಗಳನ್ನು ಅಖಂಡ ಸ್ತವನ ಮಾಡೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರ ದೈವೀ ಅವತಾರಿ ಸ್ವರೂಪಕ್ಕೆ ಪ್ರತಿ ಕ್ಷಣ ನಮಿಸೋಣ ! ಶ್ರೀಮತ್ ಪರಬ್ರಹ್ಮಸ್ವರೂಪಿ ಗುರುದೇವರು ಕಲಿಸಿದ ಸಾಧನೆ ಮಾಡಿ ಆ ಸಾಧನೆಯ ಪ್ರಯತ್ನದ ಮೂಲಕ ಅವರನ್ನು ಭಜಿಸೋಣ, ಅಂದರೆ ಆರಾಧನೆ ಮಾಡೋಣ, ಇದೇ ನಮ್ಮ
ಉದ್ಧಾರದ ಅಮೂಲ್ಯವಾದ ಏಕೈಕ ಮಾರ್ಗವಾಗಿದೆ.
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೧.೫.೨೦೨೩)