ಶ್ರೀರಾಮಸೇನೆಯ ಕರ್ನಾಟಕ ಪ್ರದೇಶಾಧ್ಯಕ್ಷ ಗಂಗಾಧರ ಕುಲಕರ್ಣಿಯವರ ಆರೋಪ!
ಹುಬ್ಬಳ್ಳಿ – ಶ್ರೀರಾಮ ಸೇನೆಯು ‘ಲವ್ ಜಿಹಾದ್’ ವಿರುದ್ಧ ಹೋರಾಡುತ್ತಿದೆ ಎಂದು ಅದನ್ನು ಸಹಿಸಲಾಗದ ಜಿಹಾದಿಗಳು ಫೇಸ್ ಬುಕ್ ಮೇಲೆ ಒತ್ತಡ ಹೇರಿದ ಕಾರಣ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ರಾಷ್ಟ್ರೀಯ ಗೌರವ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ನನ್ನ ಖಾತೆ ಹಾಗೂ ಎಲ್ಲಾ ರಾಜ್ಯ ಅಧಿಕಾರಿಗಳ ಫೇಸ್‌ಬುಕ್ ಖಾತೆಗಳನ್ನು ಜುಲೈ 3 ರಿಂದ ಸ್ಥಗಿತಗೊಳಿಸಲಾಗಿದೆ ಎಂದು ಶ್ರೀರಾಮ ಸೇನೆಯ ಕರ್ನಾಟಕ ಪ್ರದೇಶಾಧ್ಯಕ್ಷರಾದ ಶ್ರೀ. ಗಂಗಾಧರ ಕುಲಕರ್ಣಿ ಆರೋಪಿಸಿದ್ದಾರೆ. ‘ಕರ್ನಾಟಕ ಸರ್ಕಾರವು ಕೂಡಲೇ ಕ್ರಮ ಕೈಗೊಂಡು ಸ್ಥಗಿತಗೊಂಡ ಖಾತೆಗಳನ್ನು ಪುನಃ ಕಾರ್ಯಗತಗೊಳಿಸಲು ಅವಕಾಶ ನೀಡಬೇಕು, ಇಲ್ಲದಿದ್ದರೆ ಕಾನೂನು ಹೋರಾಟವನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ’ಎಂದು ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ. ಶ್ರೀ ರಾಮ ಸೇನೆಯ 4 ವಿಭಾಗಗಳ ಮುಖ್ಯಸ್ಥರು, 18 ಜಿಲ್ಲಾ ಮುಖ್ಯಸ್ಥರು ಮತ್ತು ಪ್ರಮುಖ ಕಾರ್ಯಕರ್ತರ ಫೇಸ್‌ಬುಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
Succumbing to the pressures from Love J!h@d supporters, @Facebook closed the user accounts of Shri Ram Sena officials.
– Karnataka State Shri Ram Sena President, Gangadhar Kulkarni’s allegation.It is not surprising, as Facebook has been suppressing free speech by banning the… pic.twitter.com/pHikdzWclM
— Sanatan Prabhat (@SanatanPrabhat) July 6, 2024
ಶ್ರೀ. ಕುಲಕರ್ಣಿ ಮುಂದೆ ಮಾತನಾಡಿ, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧದ ಕೃತ್ಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದ್ದು, ಶ್ರೀ ರಾಮ ಸೇನೆಯ ವಿರುದ್ಧ ಅಘೋಷಿತ ರಾಜಕೀಯ ಬಂಧನವನ್ನು ಹೇರಲಾಗಿರುವುದು ಕಂಡು ಬರುತ್ತಿದೆ ಎಂದವರು ಹೇಳಿದರು.
ಹಿಂದೂ ಮುಖಂಡರು, ಸಂಘಟನೆಗಳ ಖಾತೆಗಳನ್ನು ನಿಷೇಧಿಸುವ ಮೂಲಕ ಜಿಹಾದಿಗಳ ಮತ್ತು ಭಯೋತ್ಪಾದಕರ ಖಾತೆಗಳನ್ನು ಮುಂದುವರೆಸುವುದು ಫೇಸ್‌ಬುಕ್ ನ ಇತಿಹಾಸವಾಗಿದೆ. ಹೀಗಾಗಿ ಇಂತಹ ಘಟನೆ ನಡೆದರೂ ಅಚ್ಚರಿಯೇನಿಲ್ಲ. ಫೇಸ್ ಬುಕ್ ಗೆ ಪ್ರತ್ಯುತ್ತರ ನೀಡಲು ಭಾರತೀಯರು ಇಂತಹ ಇನ್ನೊಂದು ಸಾಮಾಜಿಕ ಮಾಧ್ಯಮಗಳನ್ನು ಪ್ರಾರಂಭಿಸಬೇಕು ! |