ಮುಂದಿನ ಯುಗ ಭಾರತದ್ದು, ಜಗತ್ತು ಅದರಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ ! – ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಎನ್.ಕೆ. ಸಿಂಹ

2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ !

ನವ ದೆಹಲಿ – ಮುಂದಿನ ಯುಗ ಭಾರತದ್ದಾಗಿದ್ದು, ಜಗತ್ತು ಈ ಯುಗದಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ. 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಪಡೆಯುತ್ತದೆ ಎಂದು ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್’ ನಿಂದ ಪ್ರತಿಷ್ಠಿತ ಗೌರವ ವಿದ್ಯಾರ್ಥಿವೇತನವನ್ನು ಪಡೆದ ನಂತರ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಎನ್. ಕೆ. ಸಿಂಗ್ ಅವರು ತಮ್ಮ ಭಾಷಣದಲ್ಲಿ ಮಹತ್ವಪೂರ್ಣ ಹೇಳಿಕೆಯನ್ನು ನೀಡಿದರು.

‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ಪ್ರಕಾರ, ಸಿಂಹ ಅವರೊಂದಿಗೆ ನಮ್ಮ ದೀರ್ಘಾವಧಿಯ ಮತ್ತು ವಚನ ಬದ್ಧತೆಯ ಬಾಂಧವ್ಯ ಹಾಗೂ ನಮ್ಮ ಭಾರತ ಸಲಹಾ ಮಂಡಳಿಯ ಸಹ-ಅಧ್ಯಕ್ಷ ಈ ಸಂಬಂಧದೊಂದಿಗೆ ಸಿಂಹ ಇವರು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಬಲಪಡಿಸಿದೆ. ಅವರ ಈ ಮಹತ್ವಪೂರ್ಣ ಪ್ರಯತ್ನಗಳಿಗೆ ಇದು ಸಂದ ಗೌರವವಾಗಿದೆ.

ಪ್ರಶಸ್ತಿ ಸ್ವೀಕರಿಸುವಾಗ 83 ವರ್ಷದ ಅರ್ಥಶಾಸ್ತ್ರಜ್ಞ ಸಿಂಗ ಇವರು ಮಾತನಾಡಿ,

1. ದೇಶದ ಭವ್ಯ ಇತಿಹಾಸ ಮತ್ತು ಅದರ ಸ್ವಾತಂತ್ರ್ಯದ 100 ನೇ ವಾರ್ಷಿಕೋತ್ಸವದಂದು ಉನ್ನತ-ಬೆಳವಣಿಗೆಯ ಅರ್ಥವ್ಯವಸ್ಥೆಯೆಂದು ದೇಶದ ಪ್ರಯತ್ನ ಖಂಡಿತ ಸಾಧ್ಯವಾಗುತ್ತದೆ.

2. ಪ್ರಧಾನಿ ಮೋದಿಯವರ ಮೂರನೇ ಕಾರ್ಯಕಾಲವಾಗಿದ್ದು, ಅವರು ಮತ್ತು ಮಂತ್ರಿ ಮಂಡಳಿಯ ಎಲ್ಲಾ ಸದಸ್ಯರು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ. ಮುಂದಿನ ಎರಡು ದಶಕಗಳ ಕಾಲ ಭಾರತ ಈ ವೇಗವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತ ಕೇವಲ ಆರ್ಥಿಕ ಮಹಾಶಕ್ತಿಯಾದರೆ ಸಾಲುವುದಿಲ್ಲ. ಕಾರಣ ಕಳೆದ 100 ವರ್ಷಗಳಲ್ಲಿ ಇಂಗ್ಲೆಂಡ, ರಷ್ಯಾ ಮತ್ತು ಅಮೇರಿಕಾಗಳ ಧರ್ಮರಹಿತ ಭೌತಿಕ ಅಭಿವೃದ್ಧಿಯಿಂದ ಆ ದೇಶಗಳನ್ನು ಜರ್ಝರಿತಗೊಳಿಸಿವೆ. ಭಾರತವು ಹಿಂದೂ ಧರ್ಮದ ಆಧಾರದೊಂದಿಗೆ ಭೌತಿಕ ಅಭಿವೃದ್ಧಿಯನ್ನು ಹೊಂದಿದರೆ ಮಾತ್ರ ಅದರ ಸ್ಥಿತಿ ನೂರಾರು ವರ್ಷಗಳ ವರೆಗಾದರೂ ಜಗತ್ತಿನ ಮೇಲೆ ಆಡಳಿತ ನಡೆಸಲು ಅರ್ಹತೆ ಹೊಂದುತ್ತದೆಯೆಂದು ಗಮನಿಸಬೇಕು !