ಗುರುಪೂರ್ಣಿಮೆಯ ಅವಧಿಯಲ್ಲಿ ನಾವು ಎಷ್ಟು ತಳಮಳದಿಂದ ಸೇವೆ ಮಾಡುವೆವೊ, ಅಷ್ಟು ನಮಗೆ ಅದರಿಂದ ಹೆಚ್ಚು ಲಾಭವಾಗುತ್ತದೆ. ನಾವು ನಮ್ಮನ್ನು ಪೂರ್ಣ ಮೈಮರೆತು ಸೇವೆ ಮಾಡಿದರೆ, ಗುರುಗಳ ಚರಣಗಳ ಹತ್ತಿರ ಬೇಗನೆ ತಲುಪಬಹುದು. ವ್ಯವಹಾರದಲ್ಲಿ ಶಿಕ್ಷಣ ಪಡೆಯುವಾಗ ವಾರ್ಷಿಕ ಪರೀಕ್ಷೆ ಸಮೀಪಿಸಿದಾಗ ನಾವು ಉಳಿದ ಎಲ್ಲ ವಿಷಯಗಳನ್ನು ಪಕ್ಕಕ್ಕಿಟ್ಟು ೧-೨ ತಿಂಗಳು ಕೇವಲ ಅಧ್ಯಯನದ ಕಡೆಗೆ ಗಮನ ನೀಡುತ್ತೇವೆ. ಅದೇ ರೀತಿ ಪ್ರಯತ್ನ ಗುರುಪೂರ್ಣಿಮೆಯ ಸೇವೆ ಮಾಡುವಾಗ ಮಾಡಿದರೆ ನಾವು ಗುರುಪೂರ್ಣಿಮೆಯ ಪರೀಕ್ಷೆಯಲ್ಲಿ ಖಂಡಿತ ತೇರ್ಗಡೆಯಾಗಿ ನಾವು ಮಾಡಿದ ಸೇವೆಯ ಫಲ ಗುರುಗಳು ನಮಗೆ ಕೊಡುವರು.
ಜೀವನದಲ್ಲಿನ ಸರ್ವೋಚ್ಚ ಆನಂದದತ್ತ ಕೊಂಡೊಯ್ಯುವ, ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ ಅಂದರೆ ಗುರುಪೂರ್ಣಿಮೆ !
ಜಗತ್ತಿನಲ್ಲಿ ಎಲ್ಲಿಯೂ ಕಾಣದಂತಹ ವೈಶಿಷ್ಟ್ಯ ಎಂದರೆ ಭಾರತದ ಗುರುಪರಂಪರೆ ! ಗುರುತತ್ತ್ವವು ಎಲ್ಲೆಡೆ ಒಂದೇ ಇರುತ್ತದೆ. ಆ ದಿನ ಆದಿಗುರು ವ್ಯಾಸರ ಪೂಜೆ ಮಾಡುತ್ತಾರೆ. ಗುರುಚರಣಗಳಲ್ಲಿ ಲೀನವಾಗಿ ಹೆಚ್ಚೆಚ್ಚು ಕೃತಜ್ಞತೆ ವ್ಯಕ್ತಪಡಿಸುವ ಮತ್ತು ಶರಣಾಗತಭಾವದಿಂದ ಗುರುಗಳೊಂದಿಗೆ ಅನುಸಂಧಾನವನ್ನಿಡುವ ದಿನ ! ಈ ದಿನ ಪ್ರತಿಯೊಬ್ಬರು ಅಂತರ್ಮುಖರಾಗಿ ಮತ್ತು ಕೃತಜ್ಞತೆಯನ್ನು ವೃದ್ಧಿಗೊಳಿಸಿ ಗುರುತತ್ತ್ವದ ಲಾಭ ಪಡೆಯಬೇಕು !