ಹಿಂದೂ ಸರಕಾರಗಳು ಮಾನಸಿಕತೆ ಬದಲಾಯಿಸಬೇಕು !

ಜೂನ್ ೨೪ ರಿಂದ ಕೇಂದ್ರದಲ್ಲಿನ ಹೊಸ ಸರಕಾರದ ಮೊದಲ ಸಂಸತ್ ಅಧಿವೇಶನ ಪ್ರಾರಂಭವಾಯಿತು. ಮೊದಲ ದಿನದಿಂದ ಎಲ್ಲ ಹೊಸತಾಗಿ ಆಯ್ಕೆಯಾಗಿರುವ ಸಂಸದರ ಪ್ರಮಾಣವಚನ ಆರಂಭವಾಗಿದೆ. ಅನಂತರ ಈ ಸಭಾಗೃಹದಲ್ಲಿ ವಿವಿಧ ಪ್ರಸ್ತಾವನೆಗಳನ್ನು ಮಂಡಿಸಲಾಗುವುದು. ಕೆಲವನ್ನು ಸ್ವೀಕರಿಸಲಾಗುವುದು, ಕೆಲವನ್ನು ತಳ್ಳಿ ಹಾಕಲಾಗುವುದು. ಕೆಲವೊಂದಕ್ಕೆ ಬದಲಾವಣೆಯನ್ನು ಸೂಚಿಸಲಾಗುವುದು. ಅದೇ ವೇಳೆಗೆ ವಾರ್ಷಿಕ ಆಯವ್ಯಯ ಪಟ್ಟಿಯನ್ನೂ ಮಂಡಿಸಲಾಗುವುದು. ಚುನಾವಣೆಯ ಮೊದಲು ಫೆಬ್ರವರಿ ತಿಂಗಳಲ್ಲಿ ಭಾಜಪ ಸರಕಾರ ಮಧ್ಯಂತರ ಆಯವ್ಯಯ ಪಟ್ಟಿ ಯನ್ನು ಮಂಡಿಸಿತ್ತು. ಈಗ ಪೂರ್ಣ ಆಯವ್ಯಯಪಟ್ಟಿಯನ್ನು ಮಂಡಿಸಲಾಗುವುದು. ಇದರ ಬಗ್ಗೆ ಚರ್ಚೆಯಾಗುವುದು ಹಾಗೂ ಅದನ್ನು ಸಮ್ಮತಿಸಲಾಗುವುದು. ಈ ವಾರ್ಷಿಕ ಆಯವ್ಯಯ ಪಟ್ಟಿಯಲ್ಲಿ ವಿವಿಧ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿ ಗಳನ್ನು ಕಾಯ್ದಿರಿಸಲಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಸಾಧಿಸಲು ನಿಧಿಯನ್ನು ಪೂರೈಸಲಾಗುವುದು, ಅದೇ ರೀತಿ ಈ ಹಿಂದಿನಂತೆಯೇ ಮದರಸಾಗಳಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಕಾಯ್ದಿರಿಸಲಾಗುವುದು, ಆದರೆ ಹಿಂದೂ ಧರ್ಮರಕ್ಷಣೆ ಗಾಗಿ, ಹಿಂದೂಗಳ ಧಾರ್ಮಿಕ ಉತ್ಥಾನಕ್ಕಾಗಿ ನಿಧಿ ಉಪಲಬ್ಧ ವಾಗುವುದಿಲ್ಲ. ಕಳೆದ ೭೫ ವರ್ಷಗಳಿಂದ ಹೀಗೆಯೇ ನಡೆಯುತ್ತದೆ ಹಾಗೂ ಮುಂದೆಯೂ ಹೀಗೆಯೇ ನಡೆಯಲಿಕ್ಕಿದೆ; ಏಕೆಂದರೆ ‘ಭಾರತ ಜಾತ್ಯತೀತ ದೇಶವಾಗಿದೆ ಹಾಗೂ ಧರ್ಮದ ಆಧಾರದಲ್ಲಿ ಯಾವುದೇ ಧರ್ಮಕ್ಕಾಗಿ ಇಂತಹ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ, ಎಂದು ನಿರಂತರ ಹೇಳಲಾಗುತ್ತದೆ. ಕಾಂಗ್ರೆಸ್‌ನಂತಹ ಢೋಂಗಿ ಜಾತ್ಯತೀತವಾದಿ ರಾಜಕೀಯ ಪಕ್ಷಗಳು ಇದನ್ನು ಒತ್ತಿ ಹೇಳುತ್ತಿವೆ; ಆದರೆ ಹಿಂದುತ್ವನಿಷ್ಠರೆಂದು ಹೇಳಲ್ಪಡುವ ರಾಜಕೀಯ ಪಕ್ಷಗಳೂ ಅವರನ್ನು ಅನುಸರಿಸುತ್ತಾ ಮುಂದೆ ಸಾಗುತ್ತಿವೆ. ಇದು ಅವರನ್ನು ಆರಿಸಿ ಕಳುಹಿಸುವ ಹಿಂದೂಗಳಿಗೆ ಕಷ್ಟಕರವಾಗುತ್ತಿದೆ ಹಾಗೂ ಮುಂದೆಯೂ ಅದೇ ಆಗಲಿಕ್ಕಿದೆ. ಈ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಗೌರವವಿಲ್ಲ. ಇದೇ ಢೋಂಗಿ ಧರ್ಮನಿರಪೇಕ್ಷತಾವಾದಿ ರಾಜಕೀಯ ಪಕ್ಷ ಅಧಿಕಾರದಲ್ಲಿರುವಾಗ ಅವರಿಗೆ ಒಂದು ಮುಷ್ಟಿ ಮತ ನೀಡುವ ಮುಸಲ್ಮಾನರಿಗಾಗಿ, ಅವರ ಧರ್ಮಶಿಕ್ಷಣಕ್ಕಾಗಿ, ಧಾರ್ಮಿಕ ಕಾರ್ಯಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕಾಯ್ದಿರಿಸುತ್ತವೆ ಹಾಗೂ ಅದನ್ನು ಇತರ ರಾಜಕೀಯ ಪಕ್ಷಗಳು, ಸಂಘಟನೆಗಳು ಯಾವತ್ತೂ ವಿರೋಧಿಸುವುದಿಲ್ಲ. ಹಿಂದೂ ಸಂಘಟನೆಗಳು ಮತ್ತು ಯಾವುದೇ ರಾಜಕೀಯ ಪಕ್ಷ ವಿರೋಧ ಮಾಡಿದರೂ ಅದರಿಂದ ಏನೂ ಪರಿಣಾಮವಾಗುವುದಿಲ್ಲ ಹಾಗೂ ಇದೇ ಹಿಂದೂ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಅದು ಕೂಡ ಹಿಂದಿನ ಢೋಂಗಿ ಧರ್ಮನಿರಪೇಕ್ಷತಾವಾದಿ ರಾಜಕೀಯ ಪಕ್ಷ ಮಾಡಿದ ನಿಯಮ ಗಳನ್ನು ರದ್ದು ಮಾಡುವುದಿಲ್ಲ, ಇದು ವಾಸ್ತವಿಕತೆಯಾಗಿದೆ.

ಹಿಂದೂಗಳಿಗೆ ಹೆಬ್ಬಟ್ಟು !

ಬಂಗಾಲದಲ್ಲಿ ಮಮತಾ ಬೆನರ್ಜಿಯ ತೃಣಮೂಲ ಕಾಂಗ್ರೆಸ್ಸಿನ ಸರಕಾರ ಕಳೆದ ೧೧ ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಈ ಸರಕಾರ ಮುಸಲ್ಮಾನರ ಮತಪೆಟ್ಟಿಗೆಯಿಂದಲೇ ಅಧಿಕಾರಕ್ಕೆ ಬರುತ್ತದೆ. ಇತ್ತೀಚೆಗಷ್ಟೆ ನಡೆದಿರುವ ಲೋಕಸಭಾ ಚುನಾವಣೆ ಯಲ್ಲಿಯೂ ತೃಣಮೂಲ ಕಾಂಗ್ರೆಸ್ಸಿಗೆ ಅತೀ ಹೆಚ್ಚು ಸ್ಥಾನ ಸಿಕ್ಕಿತು. ಫೆಬ್ರವರಿ ೨೦೨೪ ರಲ್ಲಿ ಅವರು ರಾಜ್ಯದ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿದ್ದರು. ಅವರು ಅಲ್ಪಸಂಖ್ಯಾತರು ಮತ್ತು ಮದರಸಾಗಳಿಗೆ ೫ ಸಾವಿರದ ೩೪೦ ಕೋಟಿ ರೂಪಾಯಿ ಗಳನ್ನು ಕಾಯ್ದಿರಿಸಿದ್ದಾರೆ. ಆದರೆ ಹಿಂದೂಗಳ ಗುರುಕುಲಗಳಿಗೆ, ಹಿಂದೂ ಧರ್ಮಕ್ಕಾಗಿ ಯಾವುದೇ ವ್ಯವಸ್ಥೆಯಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅದಕ್ಕೆ ಟೀಕೆಯಾಗುತ್ತಿರುವಾಗ ಹಿಂದೂಗಳಿಂದ ‘ಹಿಂದುತ್ವನಿಷ್ಠ ರಾಜಕೀಯ ಪಕ್ಷಗಳು ಹಿಂದೂಗಳ ಮತಗಳಿಂದ ಆರಿಸಿ ಬಂದರೂ ಹಿಂದೂಗಳಿಗಾಗಿ ಏನೂ ಮಾಡುವುದಿಲ್ಲ, ಅದರೆ ತುಲನೆಯಲ್ಲಿ ಮಮತಾ ಬೆನರ್ಜಿ ಮುಸಲ್ಮಾನರ ಕುರಿತು ಪ್ರಾಮಾಣಿಕರಾಗಿದ್ದಾರೆ, ಎಂದೇ ಹೇಳಲಾಗುತ್ತದೆ. ಈ ಭೇದಭಾವ ಹಿಂದೂಗಳಿಗೆ ಈಗ ಅರಿವಾಗುತ್ತಿದೆ. ಹಿಂದೂಗಳ ಕುರಿತು ಹಿಂದುತ್ವನಿಷ್ಠ ಪಕ್ಷಗಳ ವಿಷಯದಲ್ಲಿ ಅವಿಶ್ವಾಸ ನಿರ್ಮಾಣವಾಗಲು ಆರಂಭವಾಗಿದೆ, ಇದರ ಬಗ್ಗೆ ಈಗ ವಿಚಾರ ಮಾಡುವ ಅವಶ್ಯಕತೆಯಿದೆ. ಬಂಗಾಲದಲ್ಲಿ ಮಮತಾ ಬೆನರ್ಜಿಯ ಸರಕಾರದ ಅವಧಿಯಲ್ಲಿ ಎಷ್ಟು ಸಾಧ್ಯವಿದೆಯೊ, ಅಷ್ಟು ಓಲೈಕೆ ಮಾಡಲಾಗುತ್ತಿದೆ. ಇದರಲ್ಲಿ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ಮುಸಲ್ಮಾನರಿಗೆ ಎಲ್ಲ ರೀತಿಯ ಸಹಾಯ ನೀಡಲಾಗುತ್ತಿದೆ. ಇನ್ನೊಂದೆಡೆ ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಲು ಪ್ರಯತ್ನ ನಡೆದಿದೆ. ಇದನ್ನು ಬಂಗಾಲದ ಹೊರಗಿರುವ ಹಿಂದೂಗಳು ನೋಡುತ್ತಿದ್ದಾರೆ; ಆದರೆ ಇದು ಬಂಗಾಲದ ಹಿಂದೂಗಳಿಗೆ ಅರಿವಾಗುವುದಿಲ್ಲ, ಇದು ಹಿಂದೂಗಳ ದೌರ್ಭಾಗ್ಯವಾಗಿದೆ. ಮಮತಾ ಬೆನರ್ಜಿಯವರನ್ನು ತಡೆಯುವವರು ಯಾರೂ ಇಲ್ಲದ ಕಾರಣ ಅವರು ಹಿಂದೂಗಳನ್ನು ಕಾಲಿನ ಕಸದಂತೆ ನೋಡುತ್ತಾ ಮುಸಲ್ಮಾನರಿಗೆ ಸಹಾಯ ಮಾಡುತ್ತಿದ್ದಾರೆ. ‘ಮದರಸಾಗಳಲ್ಲಿನ ಮಕ್ಕಳ ಒಂದು ಕೈಯಲ್ಲಿ ಕುರಾನ್ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್, ಹೀಗೆ ಹಿಂದುತ್ವನಿಷ್ಠ ರಾಜಕೀಯ ಪಕ್ಷಗಳಿಂದ ಮಮತಾ ಇವರ ಬಗ್ಗೆ ಹೇಳಲಾಗುತ್ತದೆ. ಆದರೆ ಹಿಂದುತ್ವನಿಷ್ಠ ರಾಜಕೀಯ ಪಕ್ಷಗಳಿಂದಲೂ ಮದರಸಾಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿ ಸಮ್ಮತಿಸಲಾಯಿತು. ‘ಹಿಂದೂ ವಿದ್ಯಾರ್ಥಿಗಳ ಒಂದು ಕೈಯಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್, ಹೀಗೆ ಯಾವತ್ತೂ ಮಾಡಲ್ಪಡುವುದಿಲ್ಲ. ಕುರಾನ್‌ನಿಂದ ಏನು ಕಲಿಸಲಾಗುತ್ತಿದೆ? ಹಾಗೂ ಮುಂದೆ ದೇಶದಲ್ಲಿ ಮತ್ತು ಜಗತ್ತಿನಲ್ಲಿ ಏನು ಘಟಿಸುತ್ತದೆ ? ಎಂಬುದರ ಚರ್ಚೆ ಯಾರೂ ಮಾಡುವುದಿಲ್ಲ. ಇದು ಹಿಂದೂ ಗಳದ್ದಷ್ಟೆ ಅಲ್ಲ, ಜಗತ್ತಿನ ದೌರ್ಭಾಗ್ಯವಾಗಿದೆ. ಇನ್ನೊಂದು ದೌರ್ಭಾಗ್ಯವೆಂದರೆ ಹಿಂದೂಗಳು ಕೂಡ ಈ ವಿಷಯದಲ್ಲಿ ಸರಕಾರದ ಮೇಲೆ ಒತ್ತಡ ಹೇರಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಬೇಡಿಕೆಯನ್ನೂ ಮಾಡುವುದಿಲ್ಲ. ಹಾಗೆ ಒತ್ತಡವನ್ನೂ ಹೇರುವುದಿಲ್ಲ. ಹಿಂದೂಗಳ ನಾಶಕ್ಕಾಗಿ ಹಿಂದೂಗಳ ಹಣವನ್ನೆ ಉಪಯೋಗಿಸ ಲಾಗುತ್ತಿದೆ. ಇದು ಹಿಂದೂಗಳ ಗಮನಕ್ಕೆ ಬರುವುದಿಲ್ಲ; ಬಂದರೂ ಅದಕ್ಕೆ ವಿರೋಧ ಮಾಡಿದರೂ ಏನೂ ಆಗುವುದಿಲ್ಲ. ಹಿಂದೂಗಳು ಹಿಂದೂ ಎಂದು ಆರಿಸಿ ಕಳುಹಿಸಿದ ಹಾಗೂ ಹಿಂದೂಗಳಿಗಾಗಿ ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳುವವರೂ ಈ ವಿಷಯ ದಲ್ಲಿ ಕಣ್ಣುಮುಚ್ಚಿಕೊಳ್ಳುತ್ತಾರೆ.

ಹಿಂದೂಗಳನ್ನು ದಿಕ್ಕಿಲ್ಲದವರೆಂದು ಪರಿಗಣಿಸಬಾರದು !

ಕಳೆದ ಅನೇಕ ದಶಕಗಳಿಂದ ಹಿಂದೂಗಳನ್ನು ಜಾಗೃತ ಗೊಳಿಸುವ ಕಾರ್ಯವನ್ನು ನೂರಾರು ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು, ಸಂತರು ಮುಂತಾದವರು ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಸ್ವಾರ್ಥಕ್ಕಾಗಿ ಹಿಂದೂ ಗಳನ್ನು ಜಾಗೃತಗೊಳಿಸಿ ಮತ ಪಡೆದು ನಿಷ್ಕ್ರಿಯವಾಗುತ್ತವೆ. ಇದು ಕೂಡ ಅರಿವಾಗುವುದಿಲ್ಲ. ಈಗ ಹಿಂದೂಗಳು ಇದಕ್ಕಿಂತಲೂ ಮುಂದೆ ಹೋಗುವ ಅವಶ್ಯಕತೆಯಿದೆ. ‘ಜೋ ಹಿಂದೂ ಹಿತ್‌ಕೀ ಬಾತ್ ಕರೇಗಾ, ವಹೀ ದೇಶ ಪೆ ರಾಜ್ ಕರೇಗಾ, ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಅದಕ್ಕನುಸಾರ ಹಿಂದೂಹಿತದ ಬಗ್ಗೆ ಮಾತನಾಡುವವರನ್ನೂ ಹಿಂದೂಗಳು ಅಧಿಕಾರಕ್ಕೇರಿಸಿದರು; ಆದರೆ ಅವರು ಏನು ಮಾಡಬೇಕಿತ್ತೊ ಹಾಗೂ ಏನು ಸಾಧ್ಯವಿತ್ತೊ, ಅಂತಹ ಹಿಂದೂಹಿತವನ್ನು ಮಾಡಲಿಲ್ಲ. ಆದ್ದರಿಂದ ಹಿಂದೂಗಳು ಈಗ ಘೋಷಣೆಯನ್ನು ಬದಲಾಯಿಸಿ ‘ಜೋ ಹಿಂದೂ ಹಿತ್‌ಕಾ ಕಾಮ್ ಕರೇಗಾ, ವಹೀ ದೇಶ ಪೆ ರಾಜ್ ಕರೇಗಾ, ಎಂದು ಹೇಳಬೇಕಾಗಿದೆ ಹಾಗೂ ಆ ದೃಷ್ಟಿಯಿಂದ ಯಾರಾದರೂ ಪ್ರಯತ್ನಿಸುತ್ತಿದ್ದರೆ, ಅವರ ಹಿಂದೆ ದೃಢವಾಗಿ ನಿಲ್ಲಬೇಕು. ಈ ನಿಲುವಿಗನುಸಾರ ಹಿಂದೂಗಳು ಈ ಪಕ್ಷಗಳ ಕಡೆಗೆ ಹಾಗೂ ಮುಖಂಡರ ಕಡೆಗೆ ನೋಡಬೇಕು; ಈ ರೀತಿಯಲ್ಲಿ ಒತ್ತಡ ನಿರ್ಮಿಸಬೇಕು. ಇಲ್ಲದಿದ್ದರೆ ಹಿಂದೂಗಳ ಮತದಿಂದ ಆರಿಸಿ ಬರುವವರು ಹಿಂದೂಗಳನ್ನು ಕಡೆಗಣಿಸಿದ್ದಾರೆ ಹಾಗೂ ಮುಂದೆಯೂ ಹಾಗೆಯೆ ಮಾಡುವರು.

ಹಿಂದೂಗಳು ಚಿಂತನೆ ಮಾಡುವ ಅವಶ್ಯಕತೆಯಿದೆ !

ಒಂದೆಡೆ ಸಂಸತ್ತಿನಲ್ಲಿ ಹೊಸ ಸರಕಾರದ ಮಳೆಗಾಲದ ಅಧಿವೇಶನ ನಡೆಯುತ್ತಿರುವಾಗ ಇನ್ನೊಂದೆಡೆ ಗೋವಾ ರಾಜ್ಯ ದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವೂ ನಡೆಯುತ್ತಿದೆ. ಕಳೆದ ೧೨ ವರ್ಷಗಳಿಂದ ಈ ಅಧಿವೇಶನ ನಡೆಯುತ್ತಿದೆ. ಹಿಂದೂಗಳಲ್ಲಿ ಜಾಗೃತಿ ಮೂಡಿಸಿ ಹಿಂದೂ ರಾಷ್ಟ್ರಸ್ಥಾಪನೆ ಮಾಡಲು ಮಂಥನ ಮಾಡಲಾಗುತ್ತಿದೆ ಹಾಗೂ ಅದರಿಂದ ಹಿಂದೂ ಸಂಘಟನೆಗಳು, ಕಾರ್ಯಕರ್ತರು ಕಾರ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಮಂಥನದಲ್ಲಿ ಹಿಂದೂಗಳು ಈ ಮೇಲಿನ ದೃಷ್ಟಿಯಲ್ಲಿ ಎಲ್ಲಿ ಹಿಂದೆ ಬೀಳುತ್ತಾರೆ ಹಾಗೂ ಅವರು ನಿಜವಾಗಿಯೂ ಏನು ಮಾಡಬೇಕು ? ಎಂಬುದರ ವಿಚಾರ ಮಾಡಿ ಆ ದೃಷ್ಟಿಯಲ್ಲಿ ಪ್ರಯತ್ನವಾಗಬೇಕು. ಅದಕ್ಕಾಗಿ ತತ್ತ್ವನಿಷ್ಠೆಯಿಂದ ವಿಚಾರವನ್ನು ಮಂಡಿಸುವ ಅವಶ್ಯಕತೆಯಿದೆ. ವಸ್ತುನಿಷ್ಠ ಚಿಂತನೆಯಾಗಿ ಮುಂದಿನ ಮಾರ್ಗವನ್ನು ನಿರ್ಧರಿಸಬೇಕಾಗಿದೆ.