ದೇವಸ್ಥಾನಗಳ ಸರಕಾರಿಕರಣ ತಡೆಗಟ್ಟಲು ಟ್ರಸ್ಟಿಗಳು ನಿಯಮಗಳನ್ನು ಪಾಲಿಸಬೇಕು ! – ಮಾಜಿ ಮುಖ್ಯ ಜಿಲ್ಲಾನ್ಯಾಯಾಧೀಶ ನ್ಯಾಯವಾದಿ ದಿಲಿಪ ದೇಶಮುಖ, ಪುಣೆ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ

ದೇವಾಲಯಗಳ ಸಂಸ್ಕೃತಿಯ ಪುನರುಜ್ಜೀವನ

ಮಾಜಿ ಮುಖ್ಯ ಜಿಲ್ಲಾನ್ಯಾಯಾಧೀಶ ನ್ಯಾಯವಾದಿ ದಿಲಿಪ ದೇಶಮುಖ

ವಿದ್ಯಾಧಿರಾಜ ಸಭಾಂಗಣ – ದೇವಾಲಯಗಳ ಟ್ರಸ್ಟಿಗಳು ದೇವಸ್ಥಾನಗಳ ನಿರ್ವಹಣೆಯನ್ನು ಉತ್ತಮವಾಗಿ ಕಾಪಾಡಿ, ದೇವಾಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಿ, ಟ್ರಸ್ಟಿಗಳ ನಡುವಿನ ಆಂತರಿಕ ವಿವಾದಗಳನ್ನು ತಪ್ಪಿಸಿ, ಸರ್ಕಾರವು ಯಾವುದೇ ದೇವಾಲಯಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವಕಾಶ ಸಿಗದಂತೆ ಹಾಗೂ ಅವರ ದೇವಾಲಯವನ್ನು ಸರಕಾರದ ವಶದಿಂದ ತಪ್ಪಿಸಬಹುದು. ಎಂದು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನದಂದು ಹೇಳಿದರು. ಅವರು ದೇವಸ್ಥಾನದ ನಿರ್ವಹಣೆಯ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿಸುವ ಪ್ರಯತ್ನಗಳು’ ಕುರಿತು ಮಾತನಾಡುತ್ತಿದ್ದರು.

ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !

ಭಾರತದಲ್ಲಿ ಆದರ್ಶ ನಿರ್ವಹಣೆಯಾಗಿರುವ ದೇವಾಲಯಗಳಿಗೆ ಉತ್ತಮ ಉದಾಹರಣೆಯೆಂದರೆ ಮಹಾರಾಷ್ಟ್ರದ ಶೆಗಾಂವ್ ದೇವಾಲಯ ಹೆಸರು ತೆಗೆದುಕೊಳ್ಳಬಹುದು. ಅಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥೆ ಶ್ಲಾಘನೀಯವಾಗಿದೆ. ಕೆಲವು ಕೆಲಸಗಾರರು ಮತ್ತು ಹೆಚ್ಚಿನವರು ಸೇವಕರು ಇದ್ದಾರೆ. ಸೇವೆಗಳಿಗಾಗಿ 2 ವರ್ಷಗಳ ಕಾಯುವ ಪಟ್ಟಿ ಇದೆ. ಟ್ರಸ್ಟಿಗಳು ಈ ದೇವಾಲಯದ 10% ಅನ್ನು ಅನುಸರಿಸಿದರೂ, ಅವರ ದೇವಾಲಯಗಳ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. – ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ ದೇಶಮುಖ, ಪುಣೆ