ಹಿಂದೂಧರ್ಮ ವಿರೋಧಿಗಳಿಂದಾಗುವ ಸುಳ್ಳು ಪ್ರಚಾರದ ವಿರುದ್ಧ ಆಕ್ರಮಣಕಾರಿ ಧೋರಣೆ ಅಗತ್ಯ ! – ಡಾ. ಭಾಸ್ಕರ್ ರಾಜು ವಿ., ಟ್ರಸ್ಟಿ, ಧರ್ಮಮಾರ್ಗಮ್ ಸೇವಾ ಟ್ರಸ್ಟ್, ತೆಲಂಗಾಣ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27)

ಡಾ. ಭಾಸ್ಕರ್ ರಾಜು ವಿ., ಟ್ರಸ್ಟಿ

ಇಡೀ ವಿಶ್ವದಲ್ಲಿ ಸನಾತನ ಧರ್ಮವೊಂದೇ ಸತ್ಯ, ಉಳಿದೆಲ್ಲವೂ ಸುಳ್ಳು. ಕ್ರೈಸ್ತ, ಇಸ್ಲಾಂ ಮತ್ತು ನಾಸ್ತಿಕರು ಅಂದರೆ ಕಮ್ಯುನಿಸ್ಟರು ಇವರಿಂದ ಸುಳ್ಳು ಪ್ರಚಾರ ಆಗುತ್ತಿದೆ. ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಎದುರಿಸುವಾಗ, ಸನಾತನಧರ್ಮದ ರಕ್ಷಣಾತ್ಮಕ ನಿಲುವು ತೆಗೆದುಕೊಳ್ಳುತ್ತಿದ್ದಾರೆ; ಆದರೆ ಈಗ ಈ ಸುಳ್ಳು ಪ್ರಚಾರವನ್ನು ಎದುರಿಸಲು ಆಕ್ರಮಣಕಾರಿ ನಿಲುವು ತಳೆಯಬೇಕಾದ ಸಮಯ ಬಂದಿದೆ ಎಂದು ತೆಲಂಗಾಣದ ಧರ್ಮಮಾರ್ಗಂ ಸೇವಾ ಟ್ರಸ್ಟ್ ನ ಟ್ರಸ್ಟಿ ಡಾ. ಭಾಸ್ಕರ್ ರಾಜು ವಿ. ಇಲ್ಲಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ವ್ಯಕ್ತಪಡಿಸಿದರು.

ಡಾ. ಭಾಸ್ಕರ್ ರಾಜು ವಿ. ತಮ್ಮ ಮಾತನ್ನು ಮುಂದುವರೆಸಿ, ಕ್ರೈಸ್ತ ಮತ್ತು ಇಸ್ಲಾಂ ಕಪಟಿಗಳಾಗಿದ್ದರೆ, ಕಮ್ಯುನಿಸ್ಟರು ದೇಶದ್ರೋಹಿಗಳಾಗಿದ್ದಾರೆ. ಈ ಜನರ ಸಿದ್ಧಾಂತಗಳನ್ನು ಒಪ್ಪಬಾರದು. ಅವರ ಸುಳ್ಳು ನರೆಟಿವ್ ಗಳನ್ನು ಅಲ್ಲಗಳೆಯುವ ‘ನರೆಟಿವ್’ಅನ್ನು ನಾವು ಸಿದ್ಧಪಡಿಸಬೇಕು. ಅದಕ್ಕಾಗಿ ಹಿಂದೂಗಳಾದ ನಾವು ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತವಾಗಿ ಈ ಆಕ್ರಮಣಕಾರಿ ನೀತಿಯನ್ನು ಜಾರಿಗೆ ತರಬೇಕು. ಹಾಗೆ ಮಾಡುವಾಗ ಕಪಟಿ, ಜಿಹಾದಿಗಳು, ಮತಾಂಧರು, ಮತಾಂತರ ಮಾಫಿಯಾ, ನಗರ ನಕ್ಸಲರು ಇತ್ಯಾದಿ ಪದಗಳನ್ನು ಆಗಾಗ್ಗೆ ಬಳಸಬೇಕು ಎಂದು ಹೇಳಿದರು.