US Lauds India Elections : ಭಾರತದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಸಿಸಿದ ಅಮೇರಿಕಾ !

ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್

ವಾಷಿಂಗ್ಟನ್(ಅಮೇರಿಕಾ) – ಅಮೇರಿಕಾವು ಮತ್ತೊಮ್ಮೆ ಭಾರತದ ಲೋಕಸಭಾ ಚುನಾವಣೆಯ ಪ್ರಶಂಸೆ ಮಾಡಿದೆ. ಅಲ್ಲಿನ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಮಾತನಾಡಿ, ಭಾರತದ ಚುನಾವಣೆಯ ವಿಷಯಕ್ಕೆ ಬಂದಾಗ, ನಾವು ಅಮೇರಿಕಾ ಸರ್ಕಾರದ ಪರವಾಗಿ ಸ್ಪಷ್ಟವಾಗಿ ಹೇಳುವುದೇನೆಂದರೆ, ಭಾರತದಲ್ಲಿಯ ಚುನಾವಣೆ ಅಂದರೆ ವಿಶ್ವದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಎಲ್ಲಕ್ಕಿಂತ ಶ್ರೇಷ್ಠ ಆಚರಣೆಯಾಗಿದೆ. ಇದೊಂದು ಅದ್ಭುತ ಸಾಧನೆಯಾಗಿತ್ತು ಎಂದವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಅಮೇರಿಕಾ ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಅನ್ಯ ದೇಶವನ್ನು ಹೊಗಳುತ್ತದೆ ಅಥವಾ ಟೀಕಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟು ಅಮೇರಿಕಾದ ಪ್ರತಿಯೊಂದು ನೀತಿಯನ್ನು ಎಚ್ಚರಿಕೆಯಿಂದ ಗಮನಿಸುವುದು ಅವಶ್ಯಕವಾಗಿದೆ !