ಕಂಪ್ಯೂಟರ್ ಮಾಹಿತಿಯ ರಾಕ್ಷಸೀಕರಣವನ್ನು ತಡೆಗಟ್ಟಲು ಸಾಮಾಜಿಕ ಪ್ರಸಾರಮಾಧ್ಯಮಗಳಲ್ಲಿ ಧರ್ಮಪ್ರೇಮಿ ಭಾರತೀಯರ ಉಪಸ್ಥಿತಿ ಆವಶ್ಯಕ ! – ಪ್ರಾ. ಕೆ. ಗೋಪಿನಾಥ, ಋಷಿಹೂಡ ವಿಶ್ವವಿದ್ಯಾಲಯ, ಬೆಂಗಳೂರು

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (೨೭ ಜೂನ್) – ಹಿಂದೂ ರಾಷ್ಟ್ರಕ್ಕಾಗಿ ವೈಚಾರಿಕ ಆಂದೋಲನ

ಪ್ರಾ. ಕೆ. ಗೋಪಿನಾಥ

ರಾಮನಾಥಿ (ಗೋವಾ) – ಕೃತ್ರಿಮ ಬುದ್ಧಿಮತ್ತೆಯ (ಎಐ) ವ್ಯವಸ್ಥೆ ಅಂದಾಜು ಕಟ್ಟುವುದಕ್ಕೆ ಸಂಬಂಧಿಸಿದೆ. ಮಾಹಿತಿ (ಡೆಟಾ) ಸಂಗ್ರಹಿಸುವುದು, ಅವುಗಳ ಪರಸ್ಪರರೊಂದಿಗೆ ಸಂಬಂಧ ಜೋಡಿಸುವುದು ಮತ್ತು ಈ ಮಾಹಿತಿಯ ಆಧಾರದಲ್ಲಿ ಅಂದಾಜು ಹೇಳುವುದು, ಈ ರೀತಿಯ ಪ್ರಕ್ರಿಯೆ ಇರುತ್ತದೆ. ಕಾಲ್ಪನಿಕತೆ ಹೇಳುವ ಪದ್ಧತಿ ಬಹಳ ಹಿಂದಿನಿಂದ ನಮ್ಮ ಬಳಿಗಿದೆ. ಖಗೋಲಶಾಸ್ತ್ರದಲ್ಲಿ ಗ್ರಹಣದ ಬಗ್ಗೆ ಊಹಿಸಲಾಗುತ್ತದೆ. ವಿವಿಧ ಗ್ರಹಗಳ ಸ್ಥಿತಿಯ ಗಣನೆಯನ್ನು ಮಾಡಿ ಗ್ರಹಣದ ಬಗ್ಗೆ ಅಂದಾಜು ಹೇಳಲಾಗುತ್ತದೆ. ‘ಎಐ’ ಈ ವ್ಯವಸ್ಥೆ ಸಂಪೂರ್ಣವಾಗಿ ಅಂದಾಜಿನ ಮೇಲೆ ಆಧರಿಸಿದೆ. ತಾರ್ಕಿಕ ಮತ್ತು ಸಂಖ್ಯಾತ್ಮಕ ಮಾಹಿತಿಯ ಆಧಾರದಲ್ಲಿ ಈ ಅಂದಾಜನ್ನು ಹೇಳಲಾಗುತ್ತದೆ.

‘ಚಾಟ ಜಿಪಿಟಿ’ ಈ ಕೃತ್ರಿಮ ಬುದ್ಧಿಮತ್ತೆಯ ಮೇಲಾಧಾರಿತ ವ್ಯವಸ್ಥೆಯಲ್ಲಿಯೂ ಸಂಗ್ರಹಿಸಿಟ್ಟಿರುವ ಮಾಹಿತಿಯ ಆಧಾರದಲ್ಲಿ ಮುಂದಿನ ಅಂದಾಜನ್ನು ಹೇಳಲಾಗುತ್ತದೆ. ‘ಎಐ’ ಈ ಪ್ರಣಾಲಿ ಅನೇಕ ಪ್ರಕಾರದ ಮಾಹಿತಿಯ ಮೇಲಾಧಾರಿತ ಮತ್ತು ಉಚ್ಚ ಸ್ತರದ ಅಂದಾಜನ್ನು ಹೇಳುವುದಕ್ಕೆ ಸಂಬಂಧಿಸಿದೆ. ಅದಕ್ಕಾಗಿ ಅದಕ್ಕೆ ಬಹಳ ದೊಡ್ಡ ‘ಡೆಟಾ’ ಸಂಗ್ರಹಿಸುವ ಆವಶ್ಯಕತೆ ಇರುತ್ತದೆ. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಮಾಹಿತಿಯನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಜೋಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಧಾರ್ಮಿಕ ಭಾರತೀಯರ ಉಪಸ್ಥಿತಿ ಆವಶ್ಯಕವಾಗಿದೆ. ಹಾಗಾಗದಿದ್ದರೆ ‘ಎಐ’ ವ್ಯವಸ್ಥೆಗೆ ಯಾವ ಭೇದಭಾವದಿಂದ ಕೂಡಿದ ‘ಡೆಟಾ ಪೂರೈಸಲಾಗುತ್ತದೆಯೋ, ಅದರಲ್ಲಿ ಸುಧಾರಣೆಯಾಗುವುದಿಲ್ಲ ಮತ್ತು ಅದರಿಂದ ಈ ಮಾಹಿತಿಯ ದೊಡ್ಡ ಪ್ರಮಾಣದಲ್ಲಿ ರಾಕ್ಷಸೀಕರಣವಾಗುತ್ತದೆ.

ಪೋರ್ಚುಗೀಸರು ಮತ್ತು ಬ್ರಿಟಿಷ ಇತಿಹಾಸಕಾರರು ಸಮಕಾಲೀನ ತಂತ್ರಜ್ಞರ ಬಳಕೆ ಮಾಡಿ ತಪ್ಪು ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ಆ ಮೂಲಕ ಭಾರತ ದೇಶ ಮತ್ತು ಭಾರತೀಯರನ್ನು ಅಪಕೀರ್ತಿ ಮಾಡಿದರು. ಬ್ರಿಟಿಷರು ಈ ಮಾಹಿತಿಯ ಆಧಾರದಲ್ಲಿ ಭಾರತದಲ್ಲಿ ‘ಒಡೆಯಿರಿ(ವಿಭಜಿಸಿ) ಮತ್ತು ರಾಜ್ಯ ಆಳಿ’ ಈ ಧೋರಣೆಯ ಬಳಕೆ ಮಾಡಿದರು. ಆ ಸಮಯದಲ್ಲಿ ಭಾರತೀಯರ ಬಗ್ಗೆ ಸುಳ್ಳು ಕಥನಗಳನ್ನು ಸಿದ್ಧ ಮಾಡಲಾಯಿತು. ಭಾರತೀಯ ಸಮಾಜವು ಮೊದಲಿನಿಂದಲೂ ಆರ್ಥಿಕವಾಗಿ ಮತ್ತು ರಾಜಕೀಯ ದೃಷ್ಟಿಯಿಂದಲೂ ದುರ್ಬಲವಿದ್ದುದರಿಂದ ಭಾರತದಲ್ಲಿ ಬೌದ್ಧಿಕ ಸ್ತರದ ಎಲ್ಲ ಸ್ಥಳಗಳಲ್ಲಿ ಬಾಹ್ಯಶಕ್ತಿಗಳು ನಿಯಂತ್ರಣ ಪಡೆದಿವೆ. ಬಾಹ್ಯಶಕ್ತಿಗಳು ಭಾರತದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಮಾಹಿತಿಯನ್ನು ಒಟ್ಟುಗೂಡಿಸುತ್ತವೆ ಮತ್ತು ನಂತರ ಅವುಗಳನ್ನು ಕೌಶಲ್ಯದಿಂದ ಪ್ರಸ್ತುತಪಡಿಸುತ್ತವೆ.

‘ಎಐ’ ವ್ಯವಸ್ಥೆ ಯಾವುದೇ ಸಂಕಲ್ಪನೆಯನ್ನು ಮಂಡಿಸಲು ‘ವೆಕ್ಟರ್’ಅನ್ನು (ಗಣಿತದ ಶೈಲಿಯಲ್ಲಿ ಮಾಹಿತಿಯನ್ನು ಸಂರಕ್ಷಿಸುವುದು) ಬಳಸುತ್ತದೆ. ಹೆಚ್ಚೆಚ್ಚು ‘ಡೆಟಾ’ ಸಂಗ್ರಹಿಸಿ ‘ವೆಕ್ಟರ್’ನ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತದೆ. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ದುಬಾರಿ ಇದೆ. ‘ಎಐ’ ಈ ಸಧ್ಯದ ದೊಡ್ಡ ಕ್ರೀಡಾಳು ಆಗಿದೆ; ಏಕೆಂದರೆ ಅದು ಬಹಳ ದೊಡ್ಡ ಮಾಹಿತಿಯನ್ನು ಕೌಶಲ್ಯದಿಂದ ನಿಭಾಯಿಸುತ್ತದೆ. ಆದುದರಿಂದ ‘ಎಐ’ಗೆ ಯೋಗ್ಯ ಮಾಹಿತಿಯನ್ನು ಪೂರೈಸುವುದು ಆವಶ್ಯಕವಾಗಿದೆ.