ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’: ಮೂರನೇ ದಿನ !
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ, ಉತ್ತರ ಪ್ರದೇಶದ ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಕ್ತಿಗಾಗಿ ಕಾನೂನುಬದ್ಧವಾಗಿ ಹೋರಾಡಿದ ನ್ಯಾಯವಾದಿ ಮತ್ತು ಅರ್ಜಿದಾರರನ್ನು ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಅವರು ಗ್ರಂಥ ಉಡುಗೊರೆ ನೀಡಿ ಅವರ ಸತ್ಕಾರ ಮಾಡಿದರು.
ಶ್ರೀರಾಮ ಮಂದಿರದ ನಂತರ, ಉತ್ತರ ಪ್ರದೇಶದ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯವು ಹಿಂದೂಗಳಿಗೆ ಅತ್ಯಂತ ದೊಡ್ಡ ಶ್ರದ್ಧಾಸ್ಥಾನವಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನ ಮುಕ್ತಿಗಾಗಿ ಕಳೆದ 40 ವರ್ಷಗಳ ಕಾಲ ಹೋರಾಟ ನಡೆಸಿದ ಶ್ರೀ. ಸೋಹನ ಲಾಲ್ ಆರ್ಯ, ಕಾನೂನುಬದ್ಧವಾಗಿ ಹೋರಾಡುವ ನ್ಯಾಯವಾದಿ ಸುಭಾಷ್ ನಂದನ್ ಚತುರ್ವೇದಿ, ನ್ಯಾಯವಾದಿ ಮದನ ಮೋಹನ ಯಾದವ, ನ್ಯಾಯವಾದಿ ದೀಪಕ ಕುಮಾರ ಸಿಂಗ ಸಹಿತ ಮಾತಾ ಶೃಂಗಾರಗೌರಿಯ ಪೂಜೆಯ ಹಕ್ಕಿಗಾಗಿ ಅರ್ಜಿ ಹಾಕಿದ ಸೌ. ಸೀತಾ ಸಾಹು ಮತ್ತು ಅವರಿಗೆ ಬೆಂಬಲಿಸಿದ ಅವರ ಪತಿ ಶ್ರೀ. ಬಾಲ ಗೋಪಾಲ ಸಾಹು, ಅರ್ಜಿದಾರರಾದ ಸೌ. ಮಂಜು ವ್ಯಾಸ ಇವರೆಲ್ಲರನ್ನು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ನೆರೆದಿದ್ದ ಧರ್ಮಾಭಿಮಾನಿಗಳು ‘ಬಾಬಾ ವಿಶ್ವನಾಥಕಿ ಜೈ’, ‘ನಮ: ಪಾವರ್ತಿಪತೆ ಹರ ಹರ ಮಹಾದೇವ್’ ಎಂದು ಘೋಷಣೆ ಕೂಗಿದರು.