ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ದೊರೆತಿರುವ ‘ಭಾರತ ಗೌರವ ಪುರಸ್ಕಾರ’ ಮನುಕುಲದ ಕಲ್ಯಾಣಕ್ಕಾಗಿ ಅವರ ವಿಶಿಷ್ಟ ಕಾರ್ಯಕ್ಕಾಗಿ ಸಂದ ಗೌರವ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನ (ಜೂನ್ 25)  : ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಮಾಡಿದ ಪ್ರಯತ್ನಗಳು

ರಾಮನಾಥಿ – ಸನಾತನ ಸಂಸ್ಥೆಯು ರಜತಮಹೋತ್ಸವ ವರ್ಷವನ್ನು ಆಚರಿಸುತ್ತಿದೆ. ಸನಾತನ ಸಂಸ್ಥೆ ಧರ್ಮಕಾರ್ಯವನ್ನು ಪ್ರಚಾರ ಮಾಡುವ ಸಂಸ್ಥೆಯಾಗಿದೆ. ಸನಾತನ ಸಂಸ್ಥೆಯು ಜಿಜ್ಞಾಸುಗಳಿಗೆ ಸಾಧನೆಯನ್ನು ಕಲಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಸನಾತನ ಸಂಸ್ಥೆಯನ್ನು 22 ಮಾರ್ಚ್ 1999 ರಂದು ಸ್ಥಾಪಿಸಿದರು. ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಸನಾತನ ಸಂಸ್ಥೆಯು ದೇಶದಾದ್ಯಂತ ಹಳ್ಳಿಗಳಲ್ಲಿ ಸಾಧನಾಸತ್ಸಂಗವನ್ನು ಪ್ರಾರಂಭಿಸಿ ಸಾಧನೆಯ ಮಹತ್ವವನ್ನು ಜನರಿಗೆ ತಿಳಿಸಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯು ವಿವಿಧ ವಿಷಯಗಳ ಕುರಿತು ಗ್ರಂಥಗಳನ್ನು ಪ್ರಕಾಶಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು 1998 ರಲ್ಲಿ, ‘ಈಶ್ವರೀ ರಾಜ್ಯ ಸ್ಥಾಪನೆ’ ಗ್ರಂಥವನ್ನು ಪ್ರಕಾಶಿಸಿ ‘ಹಿಂದೂ ರಾಷ್ಟ್ರ’ ಕಲ್ಪನೆಯನ್ನು ಮುಂದಿಟ್ಟರು. ಸನಾತನ ಸಂಸ್ಥೆಯ ದಿವ್ಯ ಕಾರ್ಯದ ಕೀರ್ತಿ ಈಗ ದೇಶ ವಿದೇಶಗಳಿಗೂ ಹಬ್ಬಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಜಾಗತಿಕ ಕಾರ್ಯದಲ್ಲಿ ಸನಾತನ ಸಂಸ್ಥೆಯ ಅನನ್ಯ ಕೊಡುಗೆಗಾಗಿ ಜೂನ್5, 2024 ರಂದು ಡಾ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರಿಗೆ ಫ್ರಾನ್ಸ್‌ನ ಸೆನೆಟ್‌ನಲ್ಲಿ ‘ಭಾರತ ಗೌರವ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮನುಕುಲದ ಕಲ್ಯಾಣಕ್ಕಾಗಿ ಅವರು ಮಾಡಿದ ಅನನ್ಯ ಕಾರ್ಯಕ್ಕೆ ಇದು ಗೌರವವಾಗಿದೆ ಎಂದು ಹೇಳಿದರು.