ಗುರುಗಳ ಮಹಾನ ಕಾರ್ಯ

ಗುಶಬ್ದಸ್ತ್ವನ್ಧಕಾರಃ ಸ್ಯಾತ್ ರುಶಬ್ದಸ್ತನ್ನಿರೋಧಕಃ |

ಅನ್ಧಕಾರನಿರೋಧಿತ್ವಾತ್ ಗುರುರಿತ್ಯಭಿಧೀಯತೇ ||

ಅರ್ಥ : ‘ಗು’ ಈ ಶಬ್ದದ ಅರ್ಥ ಅಂಧಕಾರ, ಅಜ್ಞಾನ ಅಥವಾ ಮಾಯೆ ಎಂದಾಗಿದ್ದು ‘ರು’ ಈ ಶಬ್ದದ ಅರ್ಥ ಪ್ರಕಾಶ ಅಥವಾ ಜ್ಞಾನ ಎಂದಿದೆ. ಯಾರು ಶಿಷ್ಯನ ಜೀವನದ‘ಮಾಯಾ’ರೂಪಿ ಅಂಧಕಾರವನ್ನು ನಶಿಸಿ ‘ಜ್ಞಾನ’ರೂಪಿ ಪ್ರಕಾಶವನ್ನು ಹರಡುವರೋ, ಅವರೇ ಗುರು ಆಗಿದ್ದಾರೆ.

‘ಶಿಷ್ಯ’ ಎಂದರೆ ಯಾರು ?

ಕುಲಾರ್ಣವತಂತ್ರದಲ್ಲಿ ಶಿಷ್ಯನ ವ್ಯಾಖ್ಯೆಯನ್ನು ಕೆಳಗಿನಂತೆ ಹೇಳಲಾಗಿದೆ,

ಶರೀರಮರ್ಥಪ್ರಾಣಾಂಶ್ಚ ಸದ್‌ಗುರುಭ್ಯೋ ನಿವೇದ್ಯ ಯಃ |

ಗುರುಭ್ಯಃ ಶಿಕ್ಷತೇ ಯೋಗಂ ಶಿಷ್ಯ ಇತ್ಯಭಿಧೀಯತೇ ||

ಅರ್ಥ : ಯಾರು ತನು, ಧನ ಮತ್ತು ಪ್ರಾಣ (ಅಂದರೆ ಸರ್ವಸ್ವವನ್ನೂ) ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಅಂದರೆ ಗುರುಗಳು ಹೇಳಿದ ಸಾಧನೆಯನ್ನು ಮಾಡುತ್ತಾನೆಯೋ), ಅವನನ್ನು ‘ಶಿಷ್ಯ’ ಎಂದು ಕರೆಯುತ್ತಾರೆ.

ಸಮರ್ಪಿತ ಶಿಷ್ಯನ ಜೀವನ !

‘ನಮ್ಮ ಮೇಲೆ ಶ್ರೀಗುರುಗಳ ದೃಷ್ಟಿ ಬಿದ್ದರೆ, ಇನ್ನು ಏನು ಮಾಡುವುದು ಬಾಕಿ ಉಳಿಯುವುದಿಲ್ಲ. ಆದೇಶವಾದಂತೆ ನಡೆದುಕೊಳ್ಳುತ್ತಾ ಹೋಗುವುದು. ಹೃದಯದಲ್ಲಿರುವ ನಾರಾಯಣನ ಪ್ರೇರಣೆ, ಅದುವೇ ಆದೇಶ, ಅದುವೇ ಸದ್ವಿವೇಕ ! ಅದನ್ನು ಅಂತರ್ಜ್ಞಾನ ಎಂದು ಕರೆಯಿರಿ ಅಥವಾ ಸೂಕ್ಷ್ಮದೃಷ್ಟಿ ಎಂದು ಕರೆಯಿರಿ. ಅದುವೇ ಜ್ಞಾನ.’ – ಗುರುದೇವ ಡಾ. ಕಾಟೇಸ್ವಾಮಿ, (ಘನಗರ್ಜಿತ, ಆಗಸ್ಟ್, ೨೦೦೭)

ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ಶಿಷ್ಯ !

‘ಮಾಯೆಯ ವಿಷಯಗಳಲ್ಲಿ ರಮಿಸದವನು, ಅವಗುಣಗಳು ನಿಧಾನವಾಗಿ ದೂರವಾದವನು ಮತ್ತು ಯಾರಿಗೆ ಸದ್ಗುರುಗಳ ಭೇಟಿಯಾಗಿದೆಯೋ ಅವನೇ ಶಿಷ್ಯ ! ಶಿಷ್ಯನು ಅವರ ಉಪದೇಶಕ್ಕನುಸಾರ ಸಾಧ್ಯವಿದ್ದಷ್ಟು ಅನುಸರಿಸಲು ಪ್ರಯತ್ನಿಸು ತ್ತಾನೆ. ಸಂಸಾರದಿಂದ ಬಿಡುಗಡೆಯಾಗಿದ್ದಾನೆ, ಆದರೆ ಆಚೆಯ ದಂಡೆಯನ್ನು ಇನ್ನು ನೋಡಿಲ್ಲ, ಅವನ ಹೆಸರು ಶಿಷ್ಯ. ತನಗೇನು ಪ್ರಾಪ್ತಮಾಡಿಕೊಳ್ಳಬೇಕಿದೆಯೋ, ಆ ಆತ್ಮದರ್ಶನಕ್ಕಾಗಿ ಶಿಷ್ಯನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುತ್ತಾನೆ. ಅವನು ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ಯಾರಿಗೂ ತೊಂದರೆಯಾಗ ದಂತೆ ವರ್ತಿಸುತ್ತಾನೆ. ಅವನ ನಡೆ-ನುಡಿ ಸೌಮ್ಯವಾಗಿರುತ್ತವೆ ಮತ್ತು ನಿಧಾನವಾಗಿರುತ್ತದೆ, ಅವನ ಜೀವನಶೈಲಿ ಸ್ವಚ್ಛ ಮತ್ತು ಪರಿಶುದ್ಧವಾಗಿರುತ್ತದೆ.’ – ಪ.ಪೂ. ಕಾಣೆ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ, (೧೯೯೧)