Swiss Bank : ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿಯಲ್ಲಿ ಇಳಿಕೆ

ನವ ದೆಹಲಿ – ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಹಣದಲ್ಲಿ ಬೃಹತ್ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಕಂಡು ಬಂದಿದೆ. ಭಾರತೀಯರು ಮತ್ತು ಕಂಪನಿಗಳ ಸ್ಥಳೀಯ ಶಾಖೆ ಮತ್ತು ಇತರ ಹಣಕಾಸು ಸಂಸ್ಥೆಯ ಮಾಧ್ಯಮದಿಂದ ಸ್ವಿಸ್ ಬ್ಯಾಂಕಿನಲ್ಲಿ ಜಮಾ ಆಗಿರುವ ಹಣದಲ್ಲಿ ೨೦೨೩ ರಲ್ಲಿ ಶೇಕಡ ೭೦ ರಷ್ಟು ಇಳಿಕೆ ಆಗಿದೆ. ಈ ಸಂಖ್ಯೆ ೪ ವರ್ಷದಲ್ಲಿನ ಕನಿಷ್ಠ ಎಂದರೆ ೯ ಸಾವಿರದ ೭೭೧ ಕೋಟಿ ರೂಪಾಯಿಯಷ್ಟು ಆಗಿದೆ. ೨೦೨೧ ರಲ್ಲಿ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯ ಹಣ ೧೪ ವರ್ಷದಲ್ಲಿ ಗರಿಷ್ಠ ಮಟ್ಟದಲ್ಲಿಯಿತ್ತು. ಆ ಸಮಯದಲ್ಲಿ ೩ ಲಕ್ಷ ೫೮ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ಭಾರತೀಯರದ್ದಾಗಿತ್ತು.

ಸಂಪಾದಕೀಯ ನಿಲುವು

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಇಟ್ಟಿದ್ದರು, ಎಂದು ಅನೇಕ ವರ್ಷಗಳಿಂದ ಜನರಿಗೆ ಹೇಳಲಾಗುತ್ತಿದೆ ಹಾಗೂ ‘ಈ ಹಣ ಭಾರತಕ್ಕೆ ಹಿಂತಿರುಗಿ ತರುವೆವು’, ಹೀಗೆ ಆಶ್ವಾಸನೆಗಳು ಕೂಡ ಜನರಿಗೆ ನೀಡಲಾಗಿತ್ತು; ಆದರೆ ಇದರಲ್ಲಿನ ಒಂದು ರೂಪಾಯಿ ಕೂಡ ಭಾರತಕ್ಕೆ ಹಿಂತಿರುಗಿ ಬಂದಿಲ್ಲ ಇದು ವಾಸ್ತವವಾಗಿದೆ.