೧. ‘ಜಿ.ಪಿ.ಎಸ್.’ನ ಸಹಾಯದಿಂದ ಅಜ್ಞಾತ ಸ್ಥಳಕ್ಕೆ ಸರಿಯಾಗಿ ತಲುಪಬಹುದು
‘ಇತ್ತೀಚೆಗಿನ ‘ಅಂತರ್ಜಾಲ’ (ಇಂಟರನೆಟ್) ಅಥವಾ ‘ಟೆಕ್ನಾಲಾಜಿ’ಯ ಯುಗದಲ್ಲಿ ‘ಜಿ.ಪಿ.ಎಸ್.’ (ಗ್ಲೊಬಲ್ ಪೊಝಿಶನಿಂಗ್ ಸಿಸ್ಟಿಮ್’, ಅಂದರೆ ಜಾಗತಿಕ ಸ್ಥಿತಿ ತಂತ್ರಾಂಶ) ಈ ಶಬ್ದ ಪ್ರತಿಯೊಬ್ಬರಿಗೂ ಗೊತ್ತಿದೆ. ನಮಗೆ ಯಾವುದಾದರೊಂದು ಅಪರಿಚಿತ ಪ್ರದೇಶಕ್ಕೆ ಅಥವಾ ಸ್ಥಳಕ್ಕೆ ಹೋಗಬೇಕಿದ್ದರೆ, ನಾವು ‘ಜಿ.ಪಿ.ಎಸ್.’ನ ಬಳಕೆ ಮಾಡಿ ಅಪರಿಚಿತ ಸ್ಥಳವನ್ನು ಸರಿಯಾಗಿ ತಲುಪುತ್ತೇವೆ. ಇದಕ್ಕಾಗಿ ನಮಗೆ ಹೋಗಬೇಕಾದ ಸ್ಥಳವನ್ನು ಹುಡುಕುವುದಿದ್ದರೆ, ೨ ವಿಷಯಗಳ ಆವಶ್ಯಕತೆ ಇರುತ್ತದೆ.
ಅ. ನಮ್ಮ ಸ್ಥಳ, ಅಂದರೆ ‘ಲೊಕೇಶನ್’
ಆ. ನನಗೆ ಎಲ್ಲಿ ಹೋಗಬೇಕಾಗಿದೆ ? ಆ ಸ್ಥಳ, ಅಂದರೆ ‘ಡೆಸ್ಟಿನೇಶನ್’
ಈ ಎರಡೂ ವಿಷಯಗಳು ಗೊತ್ತಿದ್ದರೆ ಮಾತ್ರ ‘ಜಿ.ಪಿ.ಎಸ್.’ ನಮಗೆ ಯೋಗ್ಯ ಮಾರ್ಗವನ್ನು ತೋರಿಸುತ್ತದೆ.
೨. ಸಾಧನೆಯಲ್ಲಿನ ‘ಜಿ.ಪಿ.ಎಸ್.’ನಿಂದ ಸಾಧನೆಯ ಧ್ಯೇಯದ ಸ್ಥಳಕ್ಕೆ ಸರಿಯಾಗಿ ತಲುಪಬಹುದು
ಸಾಧನೆಯಲ್ಲಿಯೂ ತೀರಾ ಹೀಗೆಯೇ ಇರುತ್ತದೆ, ಸಾಧನೆಯಲ್ಲಿ ‘ಜಿ.ಪಿ.ಎಸ್.’ ಅಂದರೆ ನಿರ್ದಿಷ್ಟವಾಗಿ ಏನು ? ಒಂದೆಂದರೆ ಮೊದಲು ನನಗೆ ಮುಂದಿನ ೨ ವಿಷಯಗಳ ಆವಶ್ಯಕತೆ ಇರುತ್ತದೆ.
ಅ. ‘ನನ್ನ ಸದ್ಯದ ‘ಲೊಕೇಶನ್’, ಅಂದರೆ ನನ್ನ ಸದ್ಯದ ಸಾಧನೆಯ ಸ್ಥಿತಿ ?’, ಇದು ನನಗೆ ಗೊತ್ತಿರಬೇಕು.
ಆ. ಎರಡನೇಯದೆಂದರೆ ‘ನನ್ನ ಸಾಧನೆಯಲ್ಲಿನ ಮುಂದಿನ ಧ್ಯೇಯ, ಅಂದರೆ ‘ಡೆಸ್ಟಿನೇಶನ್’ ಯಾವುದು ?’, ಇದೂ ನನಗೆ ಗೊತ್ತಿರಬೇಕು.
೩. ಗುರುಗಳೇ ಸಾಧನೆಯಲ್ಲಿನ ‘ಜಿ.ಪಿ.ಎಸ್.’ ಆಗಿದ್ದಾರೆ
ಒಂದು ಬಾರಿ ಓರ್ವ ಉಚ್ಚ ಶಿಕ್ಷಣ ಪಡೆದ ಹುಡುಗನು ಓರ್ವ ಮಹಾತ್ಮರಿಗೆ, “ಇಂದಿನ ವಿಜ್ಞಾನದ ಯುಗದಲ್ಲಿ ಗುರುಗಳ ಆವಶ್ಯಕತೆ ಏನಿದೆ ? ಎಂದು ಕೇಳಿದನು. ಆಗ ಆ ಮಹಾತ್ಮರು ಆ ಹುಡುಗನಿಗೆ, “ಯಾವುದಾದರೊಂದು ಅಪರಿಚಿತ ಸ್ಥಳಕ್ಕೆ ಹೋಗಬೇಕಿದ್ದರೆ, ನೀನು ‘ಜಿ.ಪಿ.ಎಸ್.’ ಬಳಸುತ್ತಿಯಲ್ಲ ? ನಿನಗೆ ಯಾವುದೇ ವಿಷಯದ ಮಾಹಿತಿ ಅಥವಾ ಜ್ಞಾನ ಬೇಕಿದ್ದರೆ, ಆಗ ನೀನು ‘ಗುಗಲ್’ನ ಸಹಾಯ ಪಡೆಯುತ್ತೀಯಲ್ಲ ? ಎಂದು ಕೇಳಿದರು. ಇಂದಿನ ಭೌತಿಕ ಮತ್ತು ವೈಜ್ಞಾನಿಕ ಜಗತ್ತಿನಲ್ಲಿ ‘ಅಂತರ್ಜಾಲ’ ಅಥವಾ ‘ಗುಗಲ್’ ಇವೇ ನಮ್ಮ ವ್ಯವಹಾರದಲ್ಲಿನ ಗುರು ಆಗಿವೆ. ತೀರಾ ಅದೇ ರೀತಿ ಸಾಧನೆಯಲ್ಲಿಯೂ ಇರುತ್ತದೆ. ಸಾಧನೆಯ ಬಗ್ಗೆ ಸಾಮಾನ್ಯ ವ್ಯಕ್ತಿಗೆ ಏನೂ ಗೊತ್ತಿರುವುದಿಲ್ಲ. ಅದಕ್ಕಾಗಿ ಅವರು ಅಜ್ಞಾನಿ ಆಗಿರುತ್ತಾರೆ; ಇಂತಹ ಅಪರಿಚಿತ ವಿಷಯದ ಮಾಹಿತಿ ಪಡೆಯಲು ಅವರಿಗೆ ಸಾಧನೆಯಲ್ಲಿನ ‘ಜಿ.ಪಿ.ಎಸ್.’ನ ಅಂದರೆ, ಮಾರ್ಗದರ್ಶಕರ ಆವಶ್ಯಕತೆ ಇರುತ್ತದೆ. ಇದಕ್ಕಾಗಿಯೇ ಪ್ರತಿಯೊಬ್ಬ ಸಾಧಕರಿಗೆ ಆಧ್ಯಾತ್ಮಿಕ ಗುರುಗಳ ಆವಶ್ಯಕತೆ ಇರುತ್ತದೆ. ಗುರುಗಳೇ ಸಾಧನೆಯಲ್ಲಿನ ಜಿ.ಪಿ.ಎಸ್.’ ಆಗಿದ್ದಾರೆ.
೪. ಸಾಧನೆಯ ಮುಂದಿನ ಧ್ಯೇಯವನ್ನು ಸಾಧ್ಯಗೊಳಿಸಲು ವರದಿ ಕೊಡುವುದು ಮತ್ತು ಮುಂದಿನ ಧ್ಯೇಯವನ್ನು ಕೇಳಿಕೊಳ್ಳಬೇಕು
ಸಾಧನೆ ಮಾಡುವಾಗ ಸೂಕ್ತ ಸಮಯದಲ್ಲಿ ಗುರುಗಳ ಲಾಭ ಪಡೆದುಕೊಳ್ಳಲು, ಅವರ ಯೋಗ್ಯ ಮಾರ್ಗದರ್ಶನ ಪ್ರಾಪ್ತಮಾಡಿ ಕೊಳ್ಳಲು ಮತ್ತು ಸಾಧನೆಯಲ್ಲಿನ ಮುಂದಿನ ಧ್ಯೇಯ ಅಥವಾ ಗುರಿಯನ್ನು ಸಾಧಿಸಲು ಪುನಃ ೨ ವಿಷಯಗಳನ್ನು ಮಾಡಬೇಕಾಗುತ್ತದೆ.
ಅ. ನಾವು ಮಾಡುತ್ತಿರುವ ಪ್ರಾಮಾಣಿಕತನದಿಂದ ಸಾಧನೆಯ ವರದಿಯನ್ನು ಕೊಡುವುದು, ಇದರಿಂದ ಸಾಧನೆಯಲ್ಲಿನ ನನ್ನ ಸದ್ಯದ ಸ್ಥಿತಿ ಎಲ್ಲಿದೆ ? (ಅಂದರೆ ಜಿ.ಪಿ.ಎಸ್.’ನಲ್ಲಿನ ನನ್ನ ಲೊಕೇಶನ್) ಎಂಬುದನ್ನು ನಮ್ಮ ಮಾರ್ಗದರ್ಶಕರಿಗೆ ಅಥವಾ ಗುರುಗಳಿಗೆ ಹೇಳಬೇಕು.
ಆ. ಮಾರ್ಗದರ್ಶಕರು ಅಥವಾ ಗುರುಗಳಿಂದ ‘ನನ್ನ ಮುಂದಿನ ಧ್ಯೇಯ ಏನಿರಬೇಕು ?’, (ಅಂದರೆ ಜಿ.ಪಿ.ಎಸ್.’ನಲ್ಲಿನ ‘ಡೆಸ್ಟಿನೇಶನ್’) ಇದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು.
೫. ವಿಶ್ವಾಸವನ್ನಿಟ್ಟು ಕೃತಿ ಮಾಡಿದರೆ ಇಚ್ಛಿತ ಸ್ಥಳಕ್ಕೆ ತಲುಪಬಹುದು
ವ್ಯವಹಾರದಲ್ಲಿನ ‘ಜಿ.ಪಿ.ಎಸ್.’ನ ಬಳಕೆ ಮಾಡಿಕೊಳ್ಳುವಾಗ ನಮ್ಮ ಸ್ಥಳ (‘ಲೊಕೇಶನ್’) ಮತ್ತು ಹೋಗುವ ಸ್ಥಳ (ಡೆಸ್ಟಿನೇಶನ್’) ಈ ಎರಡೂ ಸ್ಥಳಗಳು ತಿಳಿದಾಗ ಜಿ.ಪಿ.ಎಸ್.’ ನಮಗೆ ಮಾರ್ಗವನ್ನು ತೋರಿಸುತ್ತದೆ. ಕೇವಲ ಮಾರ್ಗವನ್ನು ತೋರಿಸಿದರೆ ಆಯಿತು, ಹಾಗಲ್ಲ, ಅದಕ್ಕಾಗಿ ನಮಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸಬೇಕಾಗುತ್ತದೆ. ಪ್ರಯಾಣವನ್ನು ಪ್ರಾರಂಭಿಸಿದಾಗ ದಾರಿಯಲ್ಲಿ ಯಾವುದಾದರೊಂದು ತಿರುವು ಬಂದರೆ. ಜಿ.ಪಿ.ಎಸ್.’ನ ಮಹಿಳೆಯ ಧ್ವನಿ ನಮಗೆ ‘ಟರ್ನ್ ಲೆಫ್ಟ್’ (ಎಡಗಡೆಗೆ ತಿರುಗಿ) ಅಥವಾ ‘ಟರ್ನ್ ರೈಟ್’ (ಬಲಕ್ಕೆ ತಿರುಗಿ), ಎಂದು ಹೇಳುತ್ತದೆ. ಅವಳ ಹೇಳಿಕೆಯ ಮೇಲೆ ನಾವು ಶೇ. ೧೦೦ ರಷ್ಟು ವಿಶ್ವಾಸವನ್ನಿಡುತ್ತೇವೆ ಮತ್ತು ಮುಂದೆ ಆ ರೀತಿ ತಿರುವುಗಳನ್ನು ತೆಗೆದುಕೊಳ್ಳುತ್ತಾ ಮುಂದೆ ಮುಂದೆ ಹೋಗುತ್ತೇವೆ, ಅಂದರೆ ನಾವು ಅವಳ ಮೇಲೆ ಶ್ರದ್ಧೆಯನ್ನು ಇಡುತ್ತೇವೆ ಮತ್ತು ಅವಳು ಹೇಳಿದ ರೀತಿಯಲ್ಲಿ ಆಜ್ಞಾಪಾಲನೆಯನ್ನೂ ಮಾಡುತ್ತೇವೆ. ಹೀಗೆ ಮಾಡುವುದರಿಂದ ನಮಗೆ ಗೊತ್ತಿಲ್ಲದ ಸ್ಥಳವನ್ನು ತಲುಪಲು ಸಾಧ್ಯವಾಗುತ್ತದೆ.
೬. ಸಾಧನೆಯ ವರದಿಯನ್ನು ನೀಡಿ ಗುರು ಅಥವಾ ಮಾರ್ಗದರ್ಶಕರ ಆಜ್ಞಾಪಾಲನೆಯನ್ನು ಮಾಡಿದರೆ ಸಾಧನೆಯ ಮುಂದಿನ ಹಂತವನ್ನು ತಲುಪಲು ಸಾಧ್ಯವಾಗುತ್ತದೆ
ಸಾಧನೆಯಲ್ಲಿಯೂ ಸಮಯ ಸಮಯಕ್ಕೆ ನಾವು ಮಾಡುತ್ತಿರುವ ಸಾಧನೆಯ ವರದಿಯನ್ನು ಕೊಡುವುದು ಮತ್ತು ಮಾರ್ಗದರ್ಶಕರು ಅಥವಾ ಗುರುಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಕೃತಿ ಮಾಡುವುದು, ಅಂದರೆ ಆಜ್ಞಾಪಾಲನೆ ಮಾಡುವುದು. ಹೀಗೆ ಮಾಡುತ್ತಾ ಹೋದರೆ ನಿಶ್ಚಿತವಾಗಿಯೂ ನಾವು ನಮ್ಮ ಸಾಧನೆಯಲ್ಲಿನ ಮುಂದುಮುಂದಿನ ಧ್ಯೇಯ, ಅಂದರೆ ‘ಡೆಸ್ಟಿನೇಶನ್’ ಪ್ರಾಪ್ತ ಮಾಡಿಕೊಳ್ಳಬಹುದು.’
– ಶ್ರೀ. ಪ್ರಕಾಶ ಕರಂದೀಕರ (ವಯಸ್ಸು ೬೫ ವರ್ಷಗಳು), ಢವಳಿ, ಗೋವಾ. (೨೫.೧೨.೨೦೨೨)