Disinformation Lab Report On Khalistani India : ಭಾರತವನ್ನು ಅಸ್ಥಿರಗೊಳಿಸಲು ಪಾಶ್ಚಿಮಾತ್ಯ ದೇಶಗಳಿಂದ ಖಲಿಸ್ತಾನಿಗಳ ಬಳಕೆ ! – ‘ಡಿಸ್‌ಇನ್‌ರ್ಫಾಮೇಶನ್ ಲ್ಯಾಬ್’ನ ವರದಿ

  • ‘ಅಂತರರಾಷ್ಟ್ರೀಯ ದಬ್ಬಾಳಿಕೆ’ ಮತ್ತು ಖಲಿಸ್ತಾನಿ ಕಾರ್ಯಕರ್ತರು’ ಈ ಪದಗಳ ಬಳಕೆ!

  • ಕೆನಡಾ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿ ಯೋಜಿತ ಘಟನೆಗಳು !

ಲಂಡನ್ (ಬ್ರಿಟನ್) – ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಜಾಗತಿಕ ಪಿತೂರಿಯನ್ನು ಬಹಿರಂಗ ಪಡಿಸುವ ಸಂಘಟನೆಯಾದ ‘ಡಿಸ್‌ಇನ್‌ಫರ್ಮೇಷನ್ ಲ್ಯಾಬ್’ ಖಲಿಸ್ತಾನಿಗಳನ್ನು ಬಳಸಿಕೊಂಡು ಅಂತಹ ಒಂದು ಪಿತೂರಿಯನ್ನು ಬಹಿರಂಗಪಡಿಸಿದೆ. ಅದು ತನ್ನ ‘X’ ಖಾತೆಯಿಂದ ಮಾಹಿತಿ ನೀಡುತ್ತಾ, ಸಂಸ್ಥೆಯು ಕಳೆದ ವರ್ಷ ಜೂನ್ ತಿಂಗಳಲ್ಲಿ ನಡೆದ ವಿವಿಧ ದೇಶಗಳಲ್ಲಿ 5 ಪ್ರತ್ಯೇಕ ಘಟನೆಗಳ ಮೇಲೆ ಪ್ರಕಾಶ ಚೆಲ್ಲಿದೆ.

ಸಂಸ್ಥೆ ಹೇಳಿದೆ,

1. ಮೊದಲ ಬೆಳವಣಿಗೆ: ಜೂನ್ 13, 2023 ರಂದು, ಲಂಡನ್‌ನಲ್ಲಿರುವ ‘ಸೆಂಟರ್ ಫಾರ್ ಇನ್ಫರ್ಮೇಷನ್ ರೆಸಿಲಿಯನ್ಸ್’ (CIR) ಈ ಭಾರತ ದ್ವೇಷಿ ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿತು. ಅದರಲ್ಲಿ ಅದು ಭಾರತವು ಕಥೆ ಕಟ್ಟಿ ಈ ಮೂಲಕ ಖಲಿಸ್ತಾನಿ ‘ಕಾರ್ಯಕರ್ತರನ್ನು’ ನಕಾರಾತ್ಮಕವಾಗಿ ಚಿತ್ರಿಸಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರವು ಬೆರಳೆಣಿಕೆಯಷ್ಟು ಅನಾಮಧೇಯ ವ್ಯಕ್ತಿಗಳನ್ನು ಇದಕ್ಕಾಗಿ ಬಳಸಿಕೊಂಡಿತು. ಈ ಆರೋಪವನ್ನು ಮಾಡುವಾಗ ಈ ಸಂಸ್ಥೆಯು ಖಲಿಸ್ತಾನಿ ಚಳುವಳಿಯನ್ನು ಶ್ಲಾಘಿಸುತ್ತಾ ತಥಾಕಥಿತ ಭಾರತ ಪುರಸೃತ ‘ಅಂತರರಾಷ್ಟ್ರೀಯ ದಬ್ಬಾಳಿಕೆ’ ಮತ್ತು ‘ಖಾಲಿಸ್ತಾನಿ ಕಾರ್ಯಕರ್ತರು’ ಎಂಬ ಪದಗಳನ್ನು ಬಳಸಿದೆ.

2. ಮತ್ತೊಂದು ಬೆಳವಣಿಗೆ: ಜೂನ್ 14, 2023 ರಂದು, ಅಮೇರಿಕಾವು ಜೆಕ್ ರಿಪಬ್ಲಿಕ್ ನಲ್ಲಿ ಬಂಧಿತರಾಗಿರುವ ಭಾರತೀಯ ಆಡಳಿತ ಅಧಿಕಾರಿ ನಿಖಿಲ್ ಗುಪ್ತಾ ಅವರ ಹಸ್ತಾಂತರವನ್ನು ತೋರಿಸಿದೆ. ಅವರ ಮೇಲೆ ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಗುರಪಥವಂತ ಸಿಂಗ್ ಪನ್ನೂನ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಜೂನ್ 14 ರಂದು ಗುಪ್ತಾ ಅವರನ್ನು ಹಸ್ತಾಂತರಿಸಲಾಯಿತು, ಆದರೆ ಘಟನೆಯ ಸುದ್ದಿ ಜೂನ್ 17-18 ರಂದು ಪ್ರಸಾರವಾಯಿತು.

3. ಮೂರನೇ ಬೆಳವಣಿಗೆ: ಜೂನ್ 17, 2023 ರಂದು, ಪತ್ರಕರ್ತ ಅವ್ನಿ ಡಯಾಸ್ ಅವರ ವರದಿಯನ್ನು ಆಧರಿಸಿದ ಸುದ್ದಿ ಸಂಸ್ಥೆ ‘ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್’ (ಎಬಿಸಿ) ‘ಭಾರತ ಸರ್ಕಾರವು ಖಲಿಸ್ತಾನಿ ವಿರುದ್ಧ ಸಂಚು ರೂಪಿಸುತ್ತಿದೆ’ ಎಂದು ಹೇಳುವ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿತು. ಅದರಲ್ಲಿ ‘ಖಾಲಿಸ್ತಾನಿ ಕಾರ್ಯಕರ್ತರು’ ಮತ್ತು ‘ಅಂತರರಾಷ್ಟ್ರೀಯ ದಬ್ಬಾಳಿಕೆ’ ಎಂಬ ಪದಗಳನ್ನೂ ಬಳಸಲಾಗಿದೆ. ಸ್ವಾರಸ್ಯವೆಂದರೆ ಅವ್ನಿ ಡಯಾಸ್ ಅವರು ‘ಭಾರತವು ಅವರಿಗೆ ವೀಸಾ ನಿರಾಕರಿಸಿದೆ’ ಎಂದು ಹೇಳಿದ್ದರು. ಈ ಆರೋಪ ಸುಳ್ಳು ಎಂಬುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

4. ನಾಲ್ಕನೇ ಬೆಳವಣಿಗೆ : ಜೂನ್ 17, 2023 ರಂದು, ಅಮೇರಿಕಾದ ಸಂಸದ ಜೆಫ್ ಮೆಕ್‌ಕ್ಲೇ ಮತ್ತು ಇತರ ಡೆಮೋಕ್ರಾಟ್ಸ (ಹೊಲನ್, ಸ್ಯಾಂಡರ್ಸ್, ಕೈನ, ವೈಡೆನ್) ಇವರು ಭಾರತದ ‘ಅಂತರರಾಷ್ಟ್ರೀಯ ದಬ್ಬಾಳಿಕೆಯ’ ನಿಯಮಗಳನ್ನು ಬಳಸಿಕೊಂಡು ಅಮೇರಿಕಾದ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.

5. ಐದನೇ ಬೆಳವಣಿಗೆ: 19 ಜೂನ್ 2023 ರಂದು, ಭಾರತದ ಆಪಾದಿತ ‘ಅಂತರರಾಷ್ಟ್ರೀಯ ದಬ್ಬಾಳಿಕೆ’ ಪಿತೂರಿಯಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ಗಾಗಿ ಕೆನಡಾ ಸಂಸತ್ತು ಒಂದು ಕ್ಷಣ ಮೌನವನ್ನು ಆಚರಿಸಿತು.

‘ಡಿಸ್‌ಇನ್ಫಾರ್ಮೆಶನ್ ಲ್ಯಾಬ್’ ಸಂಸ್ಥೆ ಪ್ರಸ್ತುತಪಡಿಸಿದ ನಿಷ್ಕರ್ಷಗಳು !

1. ಈ ಎಲ್ಲಾ ಘಟನೆಗಳು ಒಂದಕ್ಕೊಂದು ಸಂಪೂರ್ಣವಾಗಿ ಪ್ರತ್ಯೇಕವಾಗಿದ್ದರೂ ಅದೇ ಅವಧಿಯಲ್ಲಿ ನಡೆದವು. ಇದರಿಂದ ದೊಡ್ಡ ಭಾರತದ್ವೇಷಿ ಪ್ರಭಾವವನ್ನು ಸೃಷ್ಟಿಸಲು ಪ್ರಯತ್ನಿಸಲಾಯಿತು.

2. ಹೆಚ್ಚಿನ ಖಲಿಸ್ತಾನಿಗಳು ‘ಕಾಲ್ಪನಿಕ’ ಬೆದರಿಕೆಗಳಿಂದ ಭಯಭೀತರಾಗಿದ್ದಾರೆಂದು ತೋರಿಸಲಾಗಿದೆ. ಹಾಗಾಗಿ ಈ ಖಲಿಸ್ತಾನಿಗಳು ತಮ್ಮ ಆಸ್ತಿಯನ್ನು ರಕ್ಷಿಸುತ್ತಾರೆ ಮತ್ತು ಭಾರತವನ್ನು ಆರೋಪಿಗಳ ಪಂಜರದಲ್ಲಿ ತೋರಿಸಲು ಪ್ರಯತ್ನಿಸುತ್ತಾರೆ.

3. ಈ ಮೂಲಕ ಸಮನ್ವಯ ಸಾಧಿಸಿ ಮತ್ತು ಸುದ್ದಿ ಮತ್ತು ನಕಲಿ ವಿಷಯವನ್ನು ನೆಡುವ ಮೂಲಕ ಭಾರತದಲ್ಲಿ ಸಂಘರ್ಷವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ಮತ್ತು ‘ಅಂತರರಾಷ್ಟ್ರೀಯ ದಬ್ಬಾಳಿಕೆ’ಯ ನಿರೂಪಣೆಯನ್ನು ಕಾರ್ಯಗತಗೊಳಿಸಲು ಭಾರತದ ಕೆಲವು ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಕೈಜೋಡಿಸುತ್ತಾರೆ.

4. ಈ ಪಿತೂರಿಯ ಕಡೆಗೆ ನಾವು ಕೇವಲ ವೀಕ್ಷಕನ; ಆದರೆ ಈ ಸಂಘಟನೆ ಕೊನೆಗೂ ‘ನೈತಿಕ ಅಧಃಪತನ’ದ ಅನ್ಯಾಯವನ್ನು ಬಯಲಿಗೆಳೆಯಲೇಬೇಕು ಎಂದು ಹೇಳಿದೆ.