‘ಆಧುನಿಕ ಭಾರತದಲ್ಲಿ ‘ಲವ್ ಜಿಹಾದ್’ ಅತ್ಯಂತ ದೊಡ್ಡ ಕಾಲ್ಪನಿಕವಂತೆ !’ – ಸ್ವರಾ ಭಾಸ್ಕರ, ನಟಿ

ಮುಂಬಯಿ – ಆಧುನಿಕ ಭಾರತದಲ್ಲಿ ಲವ್ ಜಿಹಾದ್ ಒಂದು ದೊಡ್ಡ ಕಾಲ್ಪನಿಕ ಗ್ರಹಿಕೆಯಾಗಿದೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಅಂತರ್-ಧರ್ಮೀಯ ವಿವಾಹಗಳು ನಡೆಯುತ್ತವೆ. ಭಾರತದಲ್ಲಿ ಮಾತ್ರ ಜನರು ಇತರರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸುತ್ತಾರೆ. ಒಬ್ಬ ಹಿಂದೂ ಹುಡುಗಿ ಮುಸಲ್ಮಾನ ಹುಡುಗನೊಂದಿಗೆ ಮದುವೆಯಾದರೆ ಅದನ್ನು `ಲವ್ ಜಿಹಾದ’ ಎಂದು ತಿಳಿಯಲಾಗುತ್ತದೆ. ಈ ವಿಷಯ ನನಗೂ ಅನ್ವಯಿಸುತ್ತದೆ. (ಸ್ವರಾ ಭಾಸ್ಕರ ಇವರ ವಿವಾಹ ಫಹಾದ ಅಹ್ಮದನೊಂದಿಗೆ ಆಗಿದೆ) ಆಧುನಿಕ ಭಾರತದಲ್ಲಿ `ಲವ್ ಜಿಹಾದ’ ಎಂಬುದು ಅತಿದೊಡ್ಡ ಕಾಲ್ಪನಿಕ ಗ್ರಹಿಕೆಯಾಗಿದೆ, ಇಂತಹ ಪುಕ್ಕಟೆ ಹೇಳಿಕೆಯನ್ನು ಎಡಪಂಥಿಯ ನಟಿ ಸ್ವರಾ ಭಾಸ್ಕರ ಅವರು ‘ಕನೆಕ್ಟ್ ಸಿನಿ’ ಈ ಯೂಟ್ಯೂಬ್ ಚಾನೆಲ್‌ ಗೆ ನೀಡಲಾಗಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಮಯದಲ್ಲಿ ಸ್ವರಾ ಭಾಸ್ಕರ ಮಾತನಾಡಿ, “ಕೆಲವು ನಗರಗಳಲ್ಲ `ವಾಲೆಂಟೈನ ಡೇ’ ದಿನದಂದು ಅಂತರ್-ಧರ್ಮೀಯ ಜೋಡಿಗಳ ಮೇಲೆ ಹಲ್ಲೆ ಮಾಡಲಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಮದುವೆಯೆನ್ನುವ ವಿಷಯ 2 ವ್ಯಕ್ತಿಯ ನಡುವೆ ಆಗುತ್ತದೆ.

ನಟಿ ಸೋನಾಕ್ಷಿ ಸಿನ್ಹಾ ಮತ್ತು ಅವಳ ಸ್ನೇಹಿತ ಜಹೀರ ಇವರಿಗೆ ಕೆಲವು ವರ್ಷಗಳ ನಂತರ ಮಕ್ಕಳಾಗುವರು, ಆಗ ಅವರ ಮಕ್ಕಳ ಹೆಸರಿನಿಂದ ಬೇರೆ ಚರ್ಚೆ ಪ್ರಾರಂಭವಾಗುವುದು. (ನಟಿ ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಸ್ನೇಹಿತ ಜಹೀರ ಇಕ್ಬಾಲ್ ಅಂತರ್ಧರ್ಮೀಯ ವಿವಾಹ ಮಾಡುವವರಿದ್ದಾರೆಂದು ಸುದ್ದಿ ವಿವಿಧ ಮಾಧ್ಯಮಗಳ ಮೂಲಕ ಪ್ರಸಾರವಾಗಿದೆ.) ನಟಿ ಕರೀನಾ ಕಪೂರ ಮತ್ತು ನಟ ಸೈಫ ಅಲಿ ಖಾನ ಇವರಿಗೆ ಮಕ್ಕಳಾದಾಗ ಇದೇ ರೀತಿಯಾಗಿತ್ತು. ಎರಡು ಸುಶಿಕ್ಷಿತ ವ್ಯಕ್ತಿಗಳು ವೈಯಕ್ತಿಕ ಆಯುಷ್ಯದಲ್ಲಿ ಏನು ಮಾಡುತ್ತಾರೆ? ಎನ್ನುವುದು ಇತರರೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ಸ್ತ್ರೀ-ಪುರುಷ ಮತ್ತು ಅವರ ಕುಟುಂಬದವರ ವೈಯಕ್ತಿಕ ವಿಷಯವಾಗಿದೆ. ಈ ರೀತಿ ಸಂಪೂರ್ಣವಾಗಿ ಸೋನಾಕ್ಷಿಯ ಆಯುಷ್ಯಕ್ಕೆ ಸಂಬಂಧಿಸಿದೆ. ಅವಳು ತನ್ನ ಜೊತೆಗಾರರನ್ನು ತಾನೇ ಸ್ವತಃ ಆಯ್ಕೆ ಮಾಡಿಕೊಂಡಿದ್ದಾಳೆ. ಅವರ ಮದುವೆಗೆ ಕುಟುಂಬದವರ ಅನುಮತಿಯಿದೆಯೋ ಇಲ್ಲವೋ ಅದು ಅವರ ವಿಷಯವಾಗಿದೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಭಾರತದಲ್ಲಿನ ಸಾವಿರಾರು ಹಿಂದೂ ಯುವತಿಯರ ಜೀವನ ‘ಲವ್ ಜಿಹಾದ್’ನಿಂದ ಹಾಳು ಮಾಡಿದ್ದಾರೆ. ಲವ್ ಜಿಹಾದಗೆ ಬಳಿಯಾಗಿರುವ ಒಬ್ಬಳೆ ಒಬ್ಬ ಹಿಂದೂ ಯುವತಿಯನ್ನು ಸ್ವರಾ ಭಾಸ್ಕರ ಭೇಟಿಯಾಗಿದ್ದರೆ, ಅವಳಿಗೆ ನಿಜ ತಿಳಿಯುತ್ತಿತ್ತು; ಆದರೆ ತಮಗೆ ಬೇಕಾದ ರೀತಿಯಲ್ಲಿ ನಿರ್ಲಕ್ಷಿಸಿ ಹಿಂದೂಗಳಲ್ಲಿ ಗೊಂದಲ ಮೂಡಿಸುವ ಕೆಲಸವನ್ನೇ ಸ್ವರಾ ಭಾಸ್ಕರ ಮಾಡುತ್ತಿದ್ದಾರೆ !