ಗೋವಾದಲ್ಲಿ ಜೂನ್ ೨೪ ರಿಂದ ೩೦ ಈ ಕಾಲಾವಧಿಯಲ್ಲಿ ‘ವೈಷ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ಆಯೋಜನೆ !
ಮಥುರಾ (ಉತ್ತರ ಪ್ರದೇಶ) – ಕೆಲವು ದಿನಗಳ ಹಿಂದೆ ಮಾತಾ ವೈಷ್ಣವದೇವಿ ದರ್ಶನಕ್ಕೆ ಹೋಗುವ ಭಕ್ತರ ಬಸ್ಸಿನ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದಲ್ಲಿನ ಭಯೋತ್ಪಾದನೆ ಈಗ ನಿಧಾನವಾಗಿ ಹಿಂದೂ ಬಹುಸಂಖ್ಯಾತ ಜಮ್ಮುವಿನ ಕಡೆಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಪಂಜಾಬದಲ್ಲಿನ ಖಲಿಸ್ತಾನಿ ಚಳವಳಿ ಸಹಿತ ದೇಶದ್ರೋಹಿ ಮತ್ತು ವಿದೇಶಿ ಶಕ್ತಿಗಳು ಭಾರತವನ್ನು ಅಸ್ಥಿರಗೊಳಿಸುವಲ್ಲಿ ಸಕ್ರಿಯವಾಗಿವೆ. ಭಾರತ ಸಹಿತ ಜಗತ್ತಿನಾದ್ಯಂತದ ಹಿಂದುಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ಇಂತಹ ಸಮಯದಲ್ಲಿ ಹಿಂದುಗಳು ಜಾತಿ ಸಂಘರ್ಷದಲ್ಲಿ ಸಿಲುಕಿಸಿ ಅವರಲ್ಲಿ ಬಿರುಕು ಮೂಡಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ; ಆದರೆ ಹಿಂದೂ ರಾಷ್ಟ್ರದ ಮಾರ್ಗದಲ್ಲಿ ಇಂತಹ ಎಷ್ಟೇ ಅಡೆತಡೆಗಳು ಬಂದರೂ ಅಥವಾ ಎಷ್ಟೇ ಷಡ್ಯಂತ್ರಗಳು ರಚಿಸಿದರೂ ಅವರು ಹಿಂದುಗಳ ಒಗ್ಗಟ್ಟಿನ ಪ್ರಯತ್ನಗಳಿಂದ ಈ ಷಡ್ಯಂತ್ರಗಳು ಸಫಲ ಆಗಲು ಸಾಧ್ಯವಿಲ್ಲ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರು ಸದ್ಗುರು ಡಾ. ಚಾರದತ್ತ ಪಿಂಗಳೆ ಇವರು ಸುದ್ಧಿಗೋಷ್ಠಿಯಲ್ಲಿ ಹೇಳಿದರು. ಮಥುರಾದ ಪಿ.ಡಿ. ಮಾರ್ಡನ್ ಪಬ್ಲಿಕ್ ಶಾಲೆಯ ಸಭಾಗೃಹದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭೆಯ ಜಿಲ್ಲಾಧ್ಯಕ್ಷ ಶ್ರೀಮತಿ ಛಾಯಾ ಗೌತಮ ಇವರು ಉಪಸ್ಥಿತರಿದ್ದರು.
ಹಿಂದೂ ರಾಷ್ಟ್ರಸ್ಥಾಪನೆಯ ಕೆಲಸಕ್ಕೆ ಗತಿ ನೀಡುವುದಕ್ಕಾಗಿ ಪ್ರತಿವರ್ಷದಂತೆ ಈ ವರ್ಷ ಕೂಡ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’, ಎಂದರೆ ‘ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ. ಈ ಮಹೋತ್ಸವ ಜೂನ್ ೨೪ ರಿಂದ ೩೦ ವರೆಗೆ ‘ಶ್ರೀ ರಾಮನಾಥ ದೇವಸ್ಥಾನ’, ಫೋಂಡಾ, ಗೋವಾದಲ್ಲಿ ನಡೆಯುವುದು, ಎಂದು ಅವರು ಮಾಹಿತಿ ಕೂಡ ನೀಡಿದರು.
ಸದ್ಗುರು ಡಾ. ಪಿಂಗಳೆ ಇವರು ಮಂಡಿಸಿರುವ ಅಂಶಗಳು !
೧. ಈ ಸಾರಿಯ ಚುನಾವಣೆಯಲ್ಲಿ ಪ್ರಸಾರ ಮಾಡಿರುವ ಕೆಲವು ಸಾರ್ವಜನಿಕ ವರದಿಯಿಂದ, ಭಾರತದ ಸ್ವಾತಂತ್ರ್ಯದ ನಂತರದ ೧೬ ವರ್ಷಗಳಲ್ಲಿ, ಎಂದರೆ ೧೯೫೦ ರಿಂದ ೨೦೧೫ ಈ ಸಮಯದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು ಶೇಕಡ ೮ ರಷ್ಟು ಕಡಿಮೆ ಆಗಿದ್ದರೇ ಅದರ ತುಲನೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ. ಇದೇ ಸಮಯದಲ್ಲಿ ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇಕಡ ೪೩.೧೫ ರಷ್ಟು ಹೆಚ್ಚಾಗಿದೆ. ಈ ಹೆಚ್ಚಳ ಅನೈಸರ್ಗಿಕವಾಗಿದ್ದು ಎಂದು ಹೇಳಬೇಕಾಗುತ್ತದೆ; ಕಾರಣ ಭಾರತದಲ್ಲಿ ನುಸುಳುಕೋರರು ಬಾಂಗ್ಲಾದೇಶದ ಜೊತೆಗೆ ರೋಹಿಂಗ್ಯ ನುಸುಳುಕೋರರ ಸಂಖ್ಯೆ ಹೆಚ್ಚಾಗಿದೆ. ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇವುಗಳಂತಹ ಭಾರತೀಯ ನಾಗರಿಕತ್ವದ ಗುರುತಿನ ಚೀಟಿಗಳು ಮಾಡಿಕೊಡುವವರ ವಿರುದ್ಧ ಕೂಡ ದೇಶದ್ರೋಹದ ದೂರು ದಾಖಲಿಸಬೇಕು.
೨. ಈ ಸಾರಿಯ ಚುನಾವಣೆಯಲ್ಲಿ ಕೂಡ ಬಾಂಗ್ಲಾದೇಶಿ ನುಸುಳುಕೋರರು ಮತದಾನ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಮುಂಬಯಿಯಲ್ಲಿ ಇಂತಹ ಕೆಲವು ನುಸುಳುಕೋರರಿಗೆ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳ ಆಧಾರದಲ್ಲಿ ಈ ನುಸುಳುಕೊರರು ಮತದಾನ ಮಾಡಿದರೆ ಭಾರತದ ಪ್ರಜಾಪ್ರಭುತ್ವದ ಮೇಲೆ ವಿಪತ್ತು ನಿರ್ಮಾಣವಾಗುವುದು.
೩. ೨೦೨೧ ರಲ್ಲಿ ಜನಗಣತಿ ಆಗದೆ ಇದ್ದರಿಂದ ತಕ್ಷಣ ಜನಗಣತಿ ನಡೆಸಿ ಕಳೆದ ೧೩ ವರ್ಷದಲ್ಲಿ ಭಾರತದ ಜನಸಂಖ್ಯೆಯಲ್ಲಿ ಏನು ಬದಲಾವಣೆ ಆಗಿದೆ? ಅದನ್ನು ಜನರ ಎದುರು ಮಂಡಿಸುವುದು ಆವಶ್ಯಕವಾಗಿದೆ. ಅದರ ಜೊತೆಗೆ ಸಂಪೂರ್ಣ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಮತ್ತು ರಾಷ್ಟ್ರೀಯ ನಾಗರೀಕತೆಯ ನೋಂದಣಿ ತಕ್ಷಣ ಜಾರಿಗೊಳಿಸಬೇಕು ಎಂದು ಹೇಳಿದರು.
ಹಿಂದೂಗಳು ಭಾರತಕ್ಕೆ ಹಿಂದೂ ರಾಷ್ಟ್ರ ಮಾಡಲು ಪ್ರತಿಜ್ಞೆ ಮಾಡಬೇಕು ! – ಶ್ರೀಮತಿ ಛಾಯಾ ಗೌತಮ
ಶ್ರೀಮತಿ ಛಾಯಾ ಗೌತಮ್ ಇವರು ಮಾತು ಮುಂದುವರಿಸಿ, ಸನಾತನ ಧರ್ಮ ಅಪಘಾನಿಸ್ತಾನ, ಪಾಕಿಸ್ತಾನ್, ಮ್ಯಾನ್ಮಾರ್ ಮತ್ತು ಇಂಡೋನೇಷಿಯಾ ಈ ದೇಶದ ವರೆಗೆ ಹರಡಿತ್ತು. ಭಾರತವು ೮೦೦ ವರ್ಷ ಮುಸಲ್ಮಾನರ ಗುಲಾಮಗಿರಿಯಲ್ಲಿ ಮತ್ತು ೧೫೦ ವರ್ಷ ಕ್ರೈಸ್ತರ ಕಿರುಕುಳ ಸಹಿಸಿದ್ದಾರೆ. ಅಖಂಡ ಭಾರತವು ಧರ್ಮದ ಹೆಸರಿನಲ್ಲಿ ಸ್ವಾತಂತ್ರ್ಯದ ಮೊದಲು ಮತ್ತು ನಂತರ ಕೂಡ ಎಷ್ಟೊಂದು ತುಂಡಗಳಾಗಿ ಹೋಗಿದೆ? ಇದನ್ನು ನಾವು ನೋಡಿದ್ದೇವೆ. ಇಂದು ರೋಹಿಂಗ್ಯಾಗಳು ದೆಹಲಿ, ಬಂಗಾಲ, ಅಸ್ಸಾಂ ಮತ್ತು ಮುಂಬಯಿಯಲ್ಲಿ ವಾಸಿಸಿ ಅವರ ಜನಸಂಖ್ಯೆ ಹೆಚ್ಚಾಗಿದೆ. ಇದು ಒಂದು ಷಡ್ಯಂತ್ರದ ದೊಡ್ಡ ಭಾಗವಾಗಿದೆ. ಭಾರತಮಾತೆಯ ಎಷ್ಟು ತುಂಡುಗಳಾಗುವುದು? ಮತ್ತು ಎಷ್ಟು ದಿನ ನಾವು ಅದನ್ನು ಸಹಿಸುತ್ತಿರಬೇಕು? ಹಿಂದುಗಳು ಈಗ ಜಾಗೃತವಾಗಲೇಬೇಕು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಅಧಿವೇಶನಕ್ಕೆ ಉಪಸ್ಥಿತ ಇರುವ ಗಣ್ಯರು !
ಈ ಅಧಿವೇಶನಕ್ಕೆ ನ್ಯಾಯವಾದಿ (ಪೂ.) ಹರಿ ಶಂಕರ್ ಜೈನ, ಅವರ ಪುತ್ರ ನ್ಯಾಯವಾದಿ ವಿಷ್ಣುಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ‘ಪವನಚಿಂತನ ಧಾರಾ’ ಆಶ್ರಮದ ಪೂ. ಪವನ ಸಿಂಹ ಗುರೂಜಿ, ಮಹಾರಾಷ್ಟ್ರದಲ್ಲಿನ ‘ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ’ದ ಕಾರ್ಯಕಾರಿ ಅಧ್ಯಕ್ಷ ಶ್ರೀ. ರಣಜಿತ ಸಾವರ್ಕರ್, ತೆಲಂಗಾಣದಲ್ಲಿನ ಧರ್ಮಾಭಿಮಾನಿ ಸಂಸದ ಟಿ ರಾಜ ಸಿಂಹ, ‘ಹಿಂದೂ ಈಕೋಸಿಸ್ಟಮ್’ ಸಂಘಟನೆಯ ಶ್ರೀ. ಕಪಿಲ ಮಿಶ್ರ, ಭಾರತದ ಮಾಜಿ ಆಯುಕ್ತ ಮತ್ತು ‘ಸೇವ್ ಕಲ್ಚರ್ ಸೇವ್ ಇಂಡಿಯಾ’ದ ಸಂಸ್ಥಾಪಕ ಶ್ರೀ. ಉದಯ ಮಾಹೂರಕರ ಸಹಿತ ಹಿರಿಯ ನ್ಯಾಯವಾದಿಗಳು, ವ್ಯಾಪಾರಿಗಳು, ವಿಚಾರವಂತರು, ಲೇಖಕರು, ಪತ್ರಕರ್ತರು, ಮಂದಿರದ ಟ್ರಸ್ಟಿಗಳು ಮತ್ತು ಅನೇಕ ಸಮವಿಚಾರಧಾರೆಯ ಸಾಮಾಜಿಕ, ರಾಷ್ಟ್ರೀಯ ಮತ್ತು ಸಾಮಾಜಿಕ ಸಂಸ್ಥೆಯ ಪ್ರತಿನಿಧಿಗಳು, ಹಾಗೂ ಆಧ್ಯಾತ್ಮಿಕ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತ ಇರುವವರು.
ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ !
ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರಕ್ಕೆ ಸಂಬಂಧಿತ ವಿವಿಧ ವಿಷಯಗಳ ತಜ್ಞರ ಜೊತೆಗಿನ ಸಂವಾದದ ಸಹಿತ ಗುಂಪು ಚರ್ಚೆ ನಡೆಯುವುದು. ‘ಸನಾತನ ಧರ್ಮದ ವೈಚಾರಿಕ ಸುರಕ್ಷೆ’, ‘ಧರ್ಮವಿರೋಧಿ ಮತ್ತು ರಾಷ್ಟ್ರ ವಿರೋಧಿ ಹೇಳಿಕೆಗಳಿಗೆ ಪ್ರತ್ಯುತ್ತರ’, ‘ಹಿಂದೂ ಸಮಾಜದ ರಕ್ಷಣೆಗಾಗಿ ಉಪಾಯಯೋಜನೆ’, ‘ಹಿಂದು ರಾಷ್ಟ್ರಕ್ಕಾಗಿ ಸಾಂವಿಧಾನಿಕ ಪ್ರಯತ್ನ’, ‘ದೇವಸ್ಥಾನ ಸಂಸ್ಕೃತಿಯ ರಕ್ಷಣೆಗಾಗಿ ಉಪಾಯಯೋಜನೆ’, ಜಾಗತೀಕರಣ ಮಟ್ಟದಲ್ಲಿ ಹಿಂದುತ್ವವಾದ’, ‘ಭಾರತದ ರಕ್ಷಣೆ’, ‘ದೇಶದ ಅರ್ಥವ್ಯವಸ್ಥೆಗೆ ಚಾಲನೆ ನೀಡುವುದಕ್ಕಾಗಿ ಹಲಾಲ್ ಅರ್ಥವ್ಯವಸ್ಥೆಯ ಮೇಲಿನ ಉಪಾಯಯೋಜನೆ’, ‘ಲ್ಯಾಂಡ್ ಜಿಹಾದ್’, ‘ಕಾಶಿ-ಮಥುರಾ ಮುಕ್ತಿ’ ಇಂತಹ ವಿವಿಧ ವಿಷಯಗಳು ಕುರಿತು ವಿಚಾರ ಮಂಥನ ನಡೆಯುವುದು.
ಈ ಅಧಿವೇಶನಕ್ಕಾಗಿ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜ ಇಂದೋರ್, ‘ಅಂತರಾಷ್ಟ್ರೀಯ ವೇದಾಂತ ಸೊಸೈಟಿ’ಯ ಸ್ವಾಮಿ ನಿರ್ಗುಣಾನಂದ ಗಿರಿ ಮಹಾರಾಜ್, ಛತ್ತೀಸ್ಗಡದಲ್ಲಿನ ಪಾಟೇಶ್ವರ ಧಾಮದ ಶ್ರೀರಾಮ ಬಾಲಕದಾಸಜಿ ಮಹಾತ್ಯಾಗಿ ಮಹಾರಾಜ, ಛತ್ತೀಸ್ಗಡದ ಶಾದಾಣೆ ದರ್ಬಾರದ ಡಾ. ಯುಧಿಷ್ಠಿರಲಾಲ್ ಮಹಾರಾಜ್ ಮುಂತಾದ ಸಂತರ ವಂದನಿಯ ಉಪಸ್ಥಿತಿ ಲಭಿಸುವುದು.
ಅಧಿವೇಶನದ ನೇರ ಪ್ರಸಾರ !
ಹಿಂದೂ ಜನಜಾಗೃತಿ ಸಮಿತಿಯ HinduJagruti.org ಈ ಜಾಲತಾಣದಿಂದ ಅಧಿವೇಶನದ ನೇರ ಪ್ರಸಾರ ಮಾಡಲಾಗುವುದು. ಹಾಗೂ ಸಮಿತಿಯ Hindujagruti ಈ ಯೂಟ್ಯೂಬ್ ಚಾನೆಲ್ ನಿಂದ ಮತ್ತು facebook.com/hjshindi1 ಈ ಫೇಸ್ಬುಕ್ ಖಾತೆಯಿಂದ ಕೂಡ ನೇರ ಪ್ರಸಾರ ನಡೆಯುವುದು. ಜಗತ್ತಿನಾದ್ಯಂತ ಇರುವ ಹಿಂದೂಗಳು ಈ ಅಧಿವೇಶನದ ಲಾಭ ಪಡೆಯಬೇಕೆಂದು ಸಮಿತಿಯ ವತಿಯಿಂದ ಕರೆ ನೀಡಿದ್ದಾರೆ.