ಚೀನಾಗೆ ಮೋದಿ ಹೆದರುವುದಿಲ್ಲ, ನಾವೂ ಕೂಡ ಹೆದರುವುದಿಲ್ಲ ! – ಚೀನಾಗೆ ತೈವಾನ್ ಪ್ರತ್ಯುತ್ತರ

ಪ್ರಧಾನಿಯಾದ ನರೇಂದ್ರ ಮೋದಿ, ತೈವಾನ್ ಅಧ್ಯಕ್ಷ ಲೈ ಚಿಂಗ್ ತೆಹ್

ತೈಪೈ (ತೈವಾನ್) – ತೈವಾನ್ ಅಧ್ಯಕ್ಷ ಲೈ ಚಿಂಗ್ ತೆಹ್ ಅವರು ಭಾರತದ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿಯಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಇದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ತೈವಾನ್‌ನ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್-ಕ್ವಾಂಗ್ ಪ್ರತಿಕ್ರಿಯಿಸಿ, “ಮೋದಿ ಅಥವಾ ನಾವು ಚೀನಾಕ್ಕೆ ಹೆದರುವುದಿಲ್ಲ” ಎಂದು ಹೇಳಿದ್ದಾರೆ. ಭಾರತ ಮತ್ತು ತೈವಾನ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಚೀನಾದ ಟೀಕೆಗಳ ಬಗ್ಗೆ ತೈವಾನ್‌ನ ಉಪ ವಿದೇಶಾಂಗ ಸಚಿವರನ್ನು ಪ್ರಶ್ನಿಸಲಾಗಿತ್ತು. ಈ ಬಗ್ಗೆ ಅವರು, ಬೆದರಿಕೆಗಳಿಂದ ಸ್ನೇಹ ಮುರಿಯುವುದಿಲ್ಲ. ತೈವಾನ್ ಭಾರತದೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಲಾಭದಾಯಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಆಧರಿಸಿವೆ ಎಂದು ಹೇಳಿದರು.