ಭಿತ್ತಿಚಿತ್ರಗಳ ಮೇಲೆ ಹಸಿರು ಬಣ್ಣದ ಗೋಮಾತೆಯ ಮೇಲೆ ಮಸೀದಿ ತೋರಿಸಿ ಬಕರೀದ್ ಶುಭಾಶಯ ನೀಡಿದರು !

ತೆಲಂಗಾಣ: ಕಾಂಗ್ರೆಸ್ ಶಾಸಕ ಕುಂಭಂ ಅನಿಲ್ ಕುಮಾರ್ ರೆಡ್ಡಿಯವರಿಂದ ಕ್ಷಮಾಯಾಚನೆ!

ಭಾಗ್ಯನಗರ (ತೆಲಂಗಾಣ) – ಬಕರೀದ್ ನಿಮಿತ್ತ ಶುಭಾಶಯಗಳನ್ನು ನೀಡಲು ಗೋಮಾತೆಯ ಚಿತ್ರವಿರುವ ಭಿತ್ತಿಚಿತ್ರವನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ ಶಾಸಕ ಕುಂಭಂ ಅನಿಲ್ ಕುಮಾರ್ ರೆಡ್ಡಿಯವರು ಕ್ಷಮಾಯಾಚನೆ ಮಾಡಿದ್ದಾರೆ. ಈ ಭಿತ್ತಿಚಿತ್ರದ ಬಗ್ಗೆ ರೆಡ್ಡಿಯವರನ್ನು ಜನರು ಟೀಕಿಸಿದ್ದರಿಂದ ಅವರು ಈ ಕ್ಷಮಾಯಾಚನೆ ಮಾಡಿದ್ದಾರೆ.

ಈ ಭಿತ್ತಿಚಿತ್ರದಲ್ಲಿ ಹಸಿರು ಬಣ್ಣದಲ್ಲಿ ಗೋಮಾತೆಯ ಮೈಮೇಲೆ ಮಶೀದಿ ಚಿತ್ರಿಸಲಾಗಿತ್ತು. ಈ ಚಿತ್ರದ ಮೇಲಿನ ಭಾಗದಲ್ಲಿ ತೇಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾಡ್ರಾ ಮುಂತಾದವರ ಭಾವಚಿತ್ರಗಳಿದ್ದವು.

ಕಾಂಗ್ರೆಸನಿಂದ ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ! – ಶಾಸಕ ಟಿ.ರಾಜಾ ಸಿಂಗ್

‘ಗೋಹತ್ಯೆ ನಿಷೇಧ ಕಾನೂನು ಇರುವುದು ಗೊತ್ತಿದ್ದರೂ ಕೂಡ ಕಾಂಗ್ರೆಸ್ ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ’ ಎಂದು ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಕೇವಲ ಕ್ಷಮಾಯಾಚನೆ ಮಾಡಿದರು ಎಂದು ಇಂತವರನ್ನು ಬಿಡಬಾರದು, ಬದಲಾಗಿ ಅವರ ವಿರುದ್ಧ ದೂರು ದಾಖಲಿಸಿ ಜೈಲಿಗೆ ತಳ್ಳಬೇಕು. ಹಾಗೆಯೇ ಇಂತಹವರ ವಿರುದ್ಧ ನ್ಯಾಯಾಲಯದಲ್ಲಿ ತುರ್ತು ವಿಚಾರಣೆ ನಡೆಸಿ ಕಠಿಣ ಶಿಕ್ಷೆ ನೀಡಬೇಕು.

ರೆಡ್ಡಿಯವರು ಮುಸಲ್ಮಾನರ ಶ್ರದ್ಧಾಸ್ಥಾನಗಳಿಗೆ ಈ ರೀತಿ ಅಪಮಾನ ಮಾಡಿದ್ದರೆ, ಇಷ್ಟೊತ್ತಿಗೆ ಅವರ ವಿರುದ್ಧ `ಸರ್ ತನ್ ಸೆ ಜುದಾ’ (ಶಿರಚ್ಛೇದದ) ಫತ್ವಾ ಹೊರಡಿಸಲಾಗುತ್ತಿತ್ತು. ಹಿಂದೂಗಳು ಸಹಿಷ್ಣುಗಳು ಮತ್ತು ನಿದ್ರಸ್ಥರಾಗಿರುವುದರಿಂದ ಅವರು ತಮ್ಮ ಸ್ವಧರ್ಮ ಭಾವನೆಯ ಅಪಮಾನದ ವಿಷಯದಲ್ಲಿ ನಿಷ್ಕ್ರಿಯರಾಗಿರುತ್ತಾರೆ.