ಗುಜರಾತ ಗಲಭೆ ಮತ್ತು ಬಾಬ್ರಿ ಮಸೀದಿ ಕೆಡವುದು, ಈ ಘಟನೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿಲ್ಲ! – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’

  • ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ಯ 12 ನೇ ರಾಜ್ಯಶಾಸ್ತ್ರದ ಪುಸ್ತಕದಲ್ಲಿ ಬಾಬರನ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ !

  • ಪಠ್ಯಕ್ರಮದ ‘ಕೇಸರಿಕರಣ’ ಆಗುತ್ತಿದೆಯೆನ್ನುವ ಆರೋಪದ ನಿರಾಕರಣೆ

ನವ ದೆಹಲಿ – ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ. ಅಯೋಧ್ಯೆ ಪ್ರಕರಣಕ್ಕೆ 2 ಪುಟಗಳನ್ನು ನೀಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮೇಲೆ ಪಠ್ಯಕ್ರಮದಲ್ಲಿ ಹೆಚ್ಚು ಗಮನಹರಿಸಿದೆ. ಶಾಲೆಯ ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಗಳನ್ನು ಬೆಂಬಲಿಸುವಾಗ `ಗುಜರಾತ ಗಲಭೆ ಮತ್ತು ಬಾಬ್ರಿ ಕೆಡವಿರುವುದು, ಈ ಘಟನೆ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸುವ ಆವಶ್ಯಕತೆಯಿಲ್ಲ’, ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿಲುವು ತೆಗೆದುಕೊಂಡಿದೆ. ಪಠ್ಯಕ್ರಮವನ್ನು ‘ಕೇಸರಿಕರಣ’ ಮಾಡಲಾಗುತ್ತಿದೆ ಎಂಬ ಆರೋಪವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ನಿರ್ದೇಶಕರಾದ ದಿನೇಶ ಪ್ರಸಾದ ಸಕಲಾನಿಯವರು `ಪ್ರೆಸ ಟ್ರಸ್ಟ ಆಫ್ ಇಂಡಿಯಾ’ ಈ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಖಂಡಿಸಿದ್ದಾರೆ.

ದಿನೇಶ್ ಸಕಲಾನಿ ಮಾತು ಮುಂದುವರೆಸಿ,

1. ವಿದ್ಯಾರ್ಥಿಗಳು ಆಕ್ರಮಣಕಾರಿಯಾಗಬೇಕು ಮತ್ತು ಸಮಾಜದಲ್ಲಿ ದ್ವೇಷ ನಿರ್ಮಾಣವಾಗಬೇಕು ಎನ್ನುವ ಶಿಕ್ಷಣವನ್ನು ನಾವು ನೀಡಬೇಕೆ ? ವಿದ್ಯಾರ್ಥಿಗಳಿಗೆ ಗಲಭೆಯ ವಿಷಯವನ್ನು ಕಲಿಸುವ ಆವಶ್ಯಕತೆಯಿದೆಯೇ ? ಅವರು ದೊಡ್ಡವರಾದ ಬಳಿಕ ವಿಷಯದ ಮಾಹಿತಿಯನ್ನು ಪಡೆಯುತ್ತಾರೆ; ಆದರೆ ಪಠ್ಯಪುಸ್ತಕದಿಂದ ಏಕೆ ಕಲಿಸುವುದು? 1984 ರ ಸಿಖ್ ವಿರೋಧ ಗಲಭೆಯ ವಿಷಯದಲ್ಲಿ ಅಭ್ಯಾಸಕ್ರಮ ಪಠ್ಯಪುಸ್ತಕದಿಂದ ತೆಗೆದಾಗ ಇಷ್ಟು ಕೂಗಾಟವಾಗಿರಲಿಲ್ಲ.

2. ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ತೀರ್ಪು ನೀಡಿದ್ದರೂ ಅದು ಪಠ್ಯಕ್ರಮದಲ್ಲಿ ಏಕೆ ಸೇರಿಸಬಾರದು ? ಅದರಲ್ಲಿ ಏನು ಸಮಸ್ಯೆ ಇದೆ ? ಯಾವುದೇ ವಿಷಯ ಕಾಲಬಾಹಿರವಾಗಿದ್ದರೆ ಅದನ್ನು ಬದಲಾಯಿಸಬೇಕು. ಇದರಲ್ಲಿ ಎಲ್ಲಿಯೂ `ಇದು ಪಠ್ಯಕ್ರಮದ `ಕೇಸರೀಕರಣ’ ಆಗಿದೆ’ ಎಂದು ನನಗೆ ಅನಿಸುತ್ತಿಲ್ಲ. ಮಕ್ಕಳಿಗೆ ಸತ್ಯ ಸಂಗತಿ ತಿಳಿಯಬೇಕು; ಎಂದು ನಾವು ಇತಿಹಾಸವನ್ನು ಕಲಿಸುತ್ತೇವೆ, ಯುದ್ಧಭೂಮಿಯನ್ನು ಸಿದ್ಧಪಡಿಸುವುದಕ್ಕಾಗಿ ಅಲ್ಲ ಎಂದು ಹೇಳಿದರು.

3. ನಾವು ಸಕಾರಾತ್ಮಕ ನಾಗರಿಕರನ್ನು ಮಾಡಲು ಬಯಸುತ್ತೇವೆ ಮತ್ತು ಇದು ಈ ಪಠ್ಯಪುಸ್ತಕಗಳ ಗುರಿಯಾಗಿದೆ. ನಮ್ಮ ಶಿಕ್ಷಣದ ಉದ್ದೇಶ ಹಿಂಸಾತ್ಮಕ ಮತ್ತು ಕೆಟ್ಟ ನಾಗರಿಕರನ್ನು ಹುಟ್ಟುಹಾಕುವುದಲ್ಲ. ದ್ವೇಷ ಮತ್ತು ಹಿಂಸೆ ವಿಷಯಗಳನ್ನು ಕಲಿಸುವುದಿಲ್ಲ.

ಪುಸ್ತಕದಲ್ಲಿ ಮಾಡಲಾಗಿರುವ ಬದಲಾವಣೆಗಳು

ಅ. ’16 ನೇ ಶತಮಾನದಲ್ಲಿ, ಮೊಘಲ್ ಬಾದಶಾಹ ಬಾಬರನ ಸೇನಾಧಿಕಾರಿ ಮೀರ ಬಾಂಕಿಯು ಬಾಬ್ರಿ ನಿರ್ಮಿಸದನು’ ಎಂದು 12ನೇ ತರಗತಿಯ ಪುಸ್ತಕದಲ್ಲಿ ಸಂದರ್ಭವಿತ್ತು. ಈ ಸಂದರ್ಭವನ್ನು ಬದಲಾಯಿಸಿ ಈಗ 1528 ರಲ್ಲಿ ಶ್ರೀರಾಮನ ಜನ್ಮಸ್ಥಾನದಲ್ಲಿ 3 ಗುಮ್ಮಟವಿರುವ ಆಕೃತಿಯನ್ನು ನಿರ್ಮಿಸಲಾಗಿತ್ತು; ಆದರೆ ಈ ಆಕೃತಿಯ ಒಳಗೆ ಮತ್ತು ಹೊರಗೆ ಹಿಂದೂ ದೇವತೆಗಳ ಆಕೃತಿಗಳು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಆ. ಹಿಂದಿನ ಪುಸ್ತಕದಲ್ಲಿ ಫೈಜಾಬಾದ್ (ಈಗಿನ ಅಯೋಧ್ಯೆ) ಜಿಲ್ಲಾ ನ್ಯಾಯಾಲಯವು ಫೆಬ್ರುವರಿ 1986ರಲ್ಲಿ ಬಾಬ್ರಿಯ ಬೀಗಗಳನ್ನು ತೆರೆಯಲು ಅನುಮತಿ ನೀಡಿದ ನಂತರ, ಎರಡೂ ಕಡೆಯಿಂದ (ಹಿಂದೂ ಮತ್ತು ಮುಸ್ಲಿಂ) ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಹಾಗೆಯೇ ಜಾತಿ ಹಿಂಸಾಚಾರ, ರಥಯಾತ್ರೆ, 1992 ರಲ್ಲಿ ಬಾಬ್ರಿ ಪತನ ಮತ್ತು ನಂತರದ 1993 ರ ಜನವರಿಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿತ್ತು.

ಹೊಸ ಪುಸ್ತಕದಲ್ಲಿ ಈ ಸಂದರ್ಭವನ್ನು ಕೈಬಿಡಲಾಗಿದೆ. ಅಯೋಧ್ಯೆ ವಾದದ ಉಲ್ಲೇಖವನ್ನು ಒಂದು ಭಾಗದಲ್ಲಿ ಉಲ್ಲೇಖಿಸಲಾಗಿದೆ. ‘1986 ರಲ್ಲಿ ಫೈಜಾಬಾದ ಜಿಲ್ಲಾ ನ್ಯಾಯಾಲಯವು 3 ಗುಮ್ಮಟವಿರುವ ಕಟ್ಟಡದ ಬೀಗವನ್ನು ತೆರೆಯುವ ಆದೇಶ ನೀಡಲಾಯಿತು. ಇದರಿಂದ ಜನರಿಗೆ ಆ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ಅವಕಾಶ ಸಿಕ್ಕಿತು. ಈ 3 ಗುಮ್ಮಟವಿರುವ ವಾಸ್ತು ಶ್ರೀರಾಮನ ಜನ್ಮಸ್ಥಾನದಲ್ಲಿ ಕಟ್ಟಲಾಗಿದೆಯೆಂದು ತಿಳಿಯಲಾಗುತ್ತದೆ. ಶ್ರೀರಾಮಮಂದಿರದ ಶಿಲಾನ್ಯಾಸವಾಯಿತು; ಆದರೆ ಮುಂದೆ ಶ್ರೀರಾಮಮಂದಿರ ಕಟ್ಟಲು ನಿರ್ಬಂಧವಿತ್ತು. ಹಿಂದೂ ಸಮುದಾಯಕ್ಕೆ ಈ ವಿಷಯದಲ್ಲಿ ಚಿಂತೆಯೆನಿಸುತ್ತಿತ್ತು. ಆದರೆ ಮುಸಲ್ಮಾನ ಸಮುದಾಯ ಈ ವಾಸ್ತುವಿನ ಮೇಲೆ ನಿಯಂತ್ರಣ ಪಡೆಯಲು ಕೋರುತ್ತಿತ್ತು. ಸ್ಥಳದ ಹಕ್ಕಿನ ಬಗ್ಗೆ ಎರಡೂ ಸಮುದಾಯದ ನಡುವೆ ವೈಷಮ್ಯ ಹೆಚ್ಚಾದ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. 1992 ರಲ್ಲಿ ಸದರಿ ವಾಸ್ತುವಿನ ಪತನವಾದ ಬಳಿಕ ಅನೇಕ ಸಮೀಕ್ಷಕರು ಇದು ಭಾರತೀಯ ಪ್ರಜಾಪ್ರಭುತ್ವದ ತತ್ವಗಳಿಗೆ ಅಪಾಯವಾಗಿದೆಯೆಂದು ವಿವೇಚನೆ ಮಾಡಿದ್ದರು’ ಎಂದು ಉಲ್ಲೇಖಿಸಿದ್ದಾರೆ.

ಬ. ಹೊಸ ಪುಸ್ತಕದಲ್ಲಿ ಅಯೋಧ್ಯೆ ವಿವಾದದ ಮೇಲಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲೇಖ ಮಾಡಲಾಗಿದೆ. ನವೆಂಬರ 9, 2019 ರಂದು ಸರ್ವೋಚ್ಚ ನ್ಯಾಯಾಲಯದ ವಿಭಾಗೀಯಪೀಠವು ಈ ಭೂಮಿ ಹಿಂದೂ ಪಕ್ಷದವರದ್ದಾಗಿದೆಯೆಂದು ತೀರ್ಪು ನೀಡಿತು.

ಹಳೆಯ ಪುಸ್ತಕದಲ್ಲಿ ಡಿಸೆಂಬರ 7, 1992 ರಂದು ಮುದ್ರಿತಗೊಂಡಿದ್ದ ಸುದ್ದಿಯ ಪ್ರತಿಗಳನ್ನು ನೀಡಲಾಗಿತ್ತು. ಈ ಸುದ್ದಿಯ ಶೀರ್ಷಿಕೆಯು ‘ಬಾಬ್ರಿ ಮಸಿದಿಯ ಪತನ’, `ಕೇಂದ್ರದಿಂದ ಕಲ್ಯಾಣ ಸರಕಾರ ವಜಾ’ ಹಾಗೆಯೇ ಡಿಸೆಂಬರ 13, 1992 ರ ಒಂದು ಮುಖ್ಯಾಂಶದಲ್ಲಿ `ಭಾಜಪ ನಾಯಕ ಅಟಲ ಬಿಹಾರಿ ವಾಜಪೇಯಿ ಹೇಳಿದ್ದರು, ಅಯೋಧ್ಯೆಯಲ್ಲಿ ಭಾಜಪ ಲೆಕ್ಕಾಚಾರ ತಪ್ಪಾಗಿದೆ’, ಹೊಸ ಪುಸ್ತಕದಲ್ಲಿ ಈ ಮುಖ್ಯಾಂಶಗಳನ್ನು ಕೈಬಿಡಲಾಗಿದೆ.