*ಭಾರತದ ಬಳಿ 172 ಮತ್ತು ಪಾಕಿಸ್ತಾನದ ಬಳಿ 170 ಪರಮಾಣು ಬಾಂಬ್
ಸ್ಟಾಕಹೋಮ್ (ಸ್ವೀಡನ್) – ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಬಾಂಬ್ ಸ್ಪರ್ಧೆಯಲ್ಲಿ, ಭಾರತವು ಕೊನೆಗೂ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಭಾರತದ ಪರಮಾಣು ಬಾಂಬ್ ಸಂಖ್ಯೆ ಈಗ ತನ್ನ ಶತ್ರು ದೇಶ ಪಾಕಿಸ್ತಾನಕ್ಕಿಂತ ಹೆಚ್ಚಾಗಿದೆ. ವಿಶ್ವದಾದ್ಯಂತದ ಪರಮಾಣು ಬಾಂಬ್‌ಗಳ ಬಗ್ಗೆ ನಿಗಾ ಇಡುವ `ಎಸ್.ಐ.ಪಿ.ಆರ್.ಐ.’ (ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಸಂಸ್ಥೆಯು ತನ್ನ ಇತ್ತೀಚಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಭಾರತವು 172 ಪರಮಾಣು ಬಾಂಬ್‌ಗಳನ್ನು ತಯಾರಿಸಿದ್ದು ಪಾಕಿಸ್ತಾನವು ಪ್ರಸ್ತುತ 170 ಪರಮಾಣು ಬಾಂಬ್‌ಗಳನ್ನು ಹೊಂದಿದೆ ಎಂದು ಹೇಳಿದೆ. ಭಾರತ ಕಳೆದ ಒಂದೇ ವರ್ಷದಲ್ಲಿ 8 ಹೊಸ ಪರಮಾಣು ಬಾಂಬ್ ಗಳನ್ನು ತಯಾರಿಸಿದೆ. ಆದರೆ ಪಾಕಿಸ್ತಾನ ಕಳೆದ ವರ್ಷ ಒಂದೇ ಒಂದು ಹೊಸ ಅಣು ಬಾಂಬ್ ತಯಾರಿಸಿಲ್ಲ. ಭಾರತದ ಅತಿ ದೊಡ್ಡ ಶತ್ರು ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಒಂದೇ ವರ್ಷದಲ್ಲಿ 410 ರಿಂದ 500 ಕ್ಕೆ ಏರಿದೆ. (ಅಣುಬಾಂಬ್ ತಯಾರಿಕೆಯಲ್ಲಿ ಭಾರತ ಮತ್ತು ಚೀನಾ ನಡುವೆ ಹೋಲಿಕೆ ಮಾಡಲಾಗದಂತಹ ಚಿತ್ರಣವಿದೆ. ಎಲ್ಲಿಯವರೆಗೆ ಭಾರತವು ಚೀನಾಕ್ಕಿಂತ ಹೆಚ್ಚು ಶಸ್ತ್ರ ಸಜ್ಜಿತವಾಗುವುದಿಲ್ಲವೋ ಅಲ್ಲಿಯವರೆಗೆ ಚೀನಾದ ಗೂಂಡಾಗಿರಿ ಮುಂದುವರಿಯುವುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು! – ಸಂಪಾದಕರು)
India has surpassed Pakistan in nuclear bomb production – China records worrying surge in stockpile
India has 172 nuclear bombs, while Pakistan has 170.
The number of nuclear bombs of India’s biggest enemy, China, has increased from 410 to 500 in one year.
It is evident that… pic.twitter.com/A5ojJhxgz7
— Sanatan Prabhat (@SanatanPrabhat) June 17, 2024
1. `ಎಸ್.ಐ.ಪಿ.ಆರ್.ಐ.’ ತನ್ನ ಇತ್ತೀಚಿನ ವರದಿಯಲ್ಲಿ, ಅಮೇರಿಕಾ, ರಶಿಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ ದೇಶಗಳು 2023 ರಲ್ಲಿ ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಗಮನಾರ್ಹವಾಗಿ ಆಧುನೀಕರಣಗೊಳಿಸಿವೆ ಎಂದು ಹೇಳಿದೆ.
2. 2024 ರಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳ ಒಟ್ಟು ಸಂಖ್ಯೆ ಈಗ 12 ಸಾವಿರ 121ಕ್ಕೆ ತಲುಪಿದೆ. ಇವುಗಳಲ್ಲಿ 9 ಸಾವಿರದ 585 ಅಣುಬಾಂಬ್ ಗಳನ್ನು ಸೇನಾ ಸಂಗ್ರಹದಲ್ಲಿಡಲಾಗಿದೆ.
೩. ವಿಶ್ವದ ವಿವಿಧ ಸ್ಥಳಗಳಲ್ಲಿ ಕ್ಷಿಪಣಿಗಳು ಮತ್ತು ಫೈಟರ್ ಜೆಟ್ ಗಳಲ್ಲಿ 3,904 ಪರಮಾಣು ಬಾಂಬುಗಳನ್ನು ಸಂಗ್ರಹಿಸಲಾಗಿದೆ. ಕ್ಷಿಪಣಿಗಳ ಒಳಗೆ 2,100 ಪರಮಾಣು ಬಾಂಬುಗಳನ್ನು “ಹೈ ಅಲರ್ಟ್” ನಲ್ಲಿ ಇರಿಸಲಾಗಿದೆ ಎಂದು ವರದಿಯು ಹೇಳುತ್ತದೆ.
ಚೀನಾ ಮೊದಲ ಬಾರಿಗೆ ತನ್ನ ಕ್ಷಿಪಣಿಗಳಲ್ಲಿ ಪರಮಾಣು ಬಾಂಬ್ ನಿಯೋಜಿಸಿದೆ!
ಅಮೇರಿಕಾ ಮತ್ತು ರಷ್ಯಾ ತಮ್ಮ ಹೆಚ್ಚಿನ ಪರಮಾಣು ಬಾಂಬುಗಳನ್ನು ‘ಹೈ ಅಲರ್ಟ್’ನಲ್ಲಿ ಇರಿಸಿವೆ; ಆದರೆ ಈಗ ಮೊದಲ ಬಾರಿಗೆ, ಚೀನಾ ತನ್ನ ಅಣುಬಾಂಬಗಳನ್ನು ‘ಹೈ ಅಲರ್ಟ್’ ನಲ್ಲಿ ಇರಿಸಿದೆ. ತೈವಾನ್ ವಿಷಯದಲ್ಲಿ ಚೀನಾ ಮತ್ತು ಅಮೇರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಈ ನಡೆಯನ್ನು ಅನುಸರಿಸಿದೆ. ಚೀನಾ ಒಂದೇ ವರ್ಷದಲ್ಲಿ 90 ಪರಮಾಣು ಬಾಂಬ್‌ಗಳನ್ನು ತಯಾರಿಸಿದೆ!
ಸಂಪಾದಕೀಯ ನಿಲುವುಭಾರತವು ಪಾಕಿಸ್ತಾನವನ್ನು ಹಿಂದಿಕ್ಕಿದರೂ, ಉಭಯ ದೇಶಗಳ ನಡುವಿನ ಅಣ್ವಸ್ತ್ರಗಳ ಸಂಖ್ಯೆಯಲ್ಲಿನ ವ್ಯತ್ಯಾಸವು ಅತ್ಯಲ್ಪವಾಗಿದೆ. ಭಾರತ ಎಲ್ಲ ಕ್ಷೇತ್ರಗಳಲ್ಲಿ ಪಾಕಿಸ್ತಾನಕ್ಕಿಂತ ಬಲಿಷ್ಠವಾಗಿದ್ದರೂ ಅಣುಬಾಂಬ್ ಗಳ ಸಂಖ್ಯೆ ಪಾಕಿಸ್ತಾನಕ್ಕಿಂತ ತುಸು ಹೆಚ್ಚೇ ಆಗಿರುವುದು ಈವರೆಗಿನ ಎಲ್ಲ ಆಡಳಿತಗಾರರಿಗೂ ನಾಚಿಕೆಗೇಡಿನ ಸಂಗತಿ ! ಭಾರತ ಈಗಲಾದರೂ ವೇಗವಾಗಿ ಯುದ್ಧಕ್ಕೆ ಸಿದ್ಧವಾಗುವುದು ಇಂದಿನ ಅಗತ್ಯ! |