‘ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ತಮ್ಮ ೭೩ ನೇ ವರ್ಷಗಳ ವರೆಗೆ ಎಂದಿಗೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ೨೦೧೫ ರಿಂದ ಸನಾತನಕ್ಕೆ ಮಾರ್ಗದರ್ಶನ ಮಾಡುವ ವಿವಿಧ ಮಹರ್ಷಿಗಳ ಆಜ್ಞಾಪಾಲನೆ ಎಂದು ಸಾಧಕರು ಗುರುದೇವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
೧. ೨೦೨೩ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ಸಮಾರಂಭವನ್ನು ನೋಡುವಾಗ ಮೊದಲಿನಿಂದ ಸಕ್ರಿಯರಾಗಿರುವ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವ ಸಮಾರಂಭದ ನೆನಪಾಗುವುದು
೧೧.೫.೨೦೨೩ ರಂದು ಆಗಿರುವ ಗುರುದೇವರ ಜನ್ಮೋತ್ಸವ ಸಮಾರಂಭವು ಇದುವರೆಗೆ ಆಚರಿಸಿದ ಜನ್ಮೋತ್ಸವ ಸಮಾರಂಭ ಗಳಲ್ಲಿನ ಅತ್ಯಂತ ದೊಡ್ಡ ಜನ್ಮೋತ್ಸವ ಸಮಾರಂಭವಾಗಿತ್ತು. ಅದನ್ನು ‘ಬ್ರಹ್ಮೋತ್ಸವ’ದ ಸ್ವರೂಪದಲ್ಲಿ ಆಚರಿಸಲಾಯಿತು. ಅದನ್ನು ನೋಡುವಾಗ ಸನಾತನ ಸಂಸ್ಥೆಯ ಮೊದಲಿನಿಂದ ಸೇವೆಯಲ್ಲಿರುವ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಇವರ ಅಮೃತ ಮಹೋತ್ಸವದ ಬಗ್ಗೆ ನೆನಪಾಗದಿದ್ದರೆ ಆಶ್ಚರ್ಯ ಎನ್ನಬಹುದು ! ೧೯೯೫ ರಲ್ಲಿ ಆಚರಿಸಿದ ಪ.ಪೂ. ಬಾಬಾರವರ ಅಮೃತಮಹೋತ್ಸವದ ಆಯೋಜನೆಯನ್ನು ಸಾಕ್ಷಾತ್ ಗುರುದೇವರೇ ಮಾಡಿದ್ದರು. ನಮ್ಮಂತಹ ಸಾಧಕರು ಆ ಅಮೃತ ಮಹೋತ್ಸವವನ್ನು ನೋಡಲಿಲ್ಲ; ಆದರೆ ಆ ಬಗ್ಗೆ ಓದಿದ್ದೇವೆ, ಅವರಿಗೂ ಬ್ರಹ್ಮೋತ್ಸವ ವನ್ನು ನೋಡಿ ಅಂದಿನ ಅಮೃತಮಹೋತ್ಸವ ಸಮಾರಂಭದ ಭವ್ಯ-ದಿವ್ಯತೆಯ ಬಗ್ಗೆ ಕಲ್ಪನೆ ಬಂದಿತು.
೨. ಪರಾತ್ಪರ ಗುರು ಡಾ. ಆಠವಲೆಯವರು ಯಾವುದೇ ಆಧುನಿಕ ಉಪಕರಣಗಳು ಇಲ್ಲದಿದ್ದರೂ ಆಚರಿಸಿದ ಪ.ಪೂ. ಭಕ್ತರಾಜ ಮಹಾರಾಜರ ಭವ್ಯ-ದಿವ್ಯ ಅಮೃತಮಹೋತ್ಸವ !
೨ ಅ. ಪ.ಪೂ. ಭಕ್ತರಾಜ ಮಹಾರಾಜರ ಅಮೃತಮಹೋತ್ಸವದ ಸಮಯದಲ್ಲಿ ಮಾಡಿದ ದೊಡ್ಡ ಪ್ರಮಾಣದ ವ್ಯವಸ್ಥೆಗಳ ಆಯೋಜನೆ ! : ೧೯೯೫ ರಲ್ಲಿ ಪ.ಪೂ. ಬಾಬಾರವರ ಅಮೃತ ಮಹೋತ್ಸವವನ್ನು ಆಚರಿಸುವುದಿತ್ತು. ೧೯೯೪ ರ ಗುರುಪೂರ್ಣಿಮೆ ಯಿಂದಲೇ ಗುರುದೇವರು ಅಮೃತ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಅಪಾರ ಕೌಶಲ್ಯದಿಂದ ಅದನ್ನು ಆಯೋಜಿಸಿದ್ದರು. ಅವರು ‘೧೦ ಸಾವಿರ ಭಕ್ತರಿಗಾಗಿ ಕಾರ್ಯಕ್ರಮದ ಮುಖ್ಯ ಮಂಟಪದ ಆಯೋಜನೆ’, ‘ಹೊರಗಿನಿಂದ ಬರುವ ೩ ಸಾವಿರ ಭಕ್ತರ ನಿವಾಸದ ವ್ಯವಸ್ಥೆ’, ‘ಸಂತರ ನಿವಾಸದ ವ್ಯವಸ್ಥೆ’, ‘೨ ಸಾವಿರ ಭಕ್ತರಿಗೆ ಒಂದೇ ಸಮಯದಲ್ಲಿ ಮಹಾಪ್ರಸಾದವನ್ನು ಸೇವಿಸಬಹುದು’, ಇಷ್ಟೊಂದು ದೊಡ್ಡ ‘ಭೋಜನ ಮಂಟಪದ ವ್ಯವಸ್ಥೆ’, ‘ಪ.ಪೂ. ಬಾಬಾರವರ ಪ್ರೀತಿಯ ಕಂಜರಿಯ (ಸಂಗೀತದ ಒಂದು ಉಪಕರಣ) ಆಕಾರದಲ್ಲಿನ ೨೨ ಅಡಿಯಷ್ಟು ಸ್ವಾಗತಕಮಾನು ನಿಲ್ಲಿಸುವುದು’, ‘ಪ.ಪೂ. ಬಾಬಾ ಮತ್ತು ಅವರ ಶ್ರೀ ಗುರುಗಳಾದ ಶ್ರೀ ಅನಂತಾನಂದ ಸಾಯೀಶ ಇವರ ಪಾದುಕೆಗಳ ಮೆರವಣಿಗೆ ಮತ್ತು ಹೆಲಿಕ್ಯಾಪ್ಟರ್‌ನಿಂದ ಅವರ ಮೇಲೆ ಪುಷ್ಪವೃಷ್ಟಿ ಮಾಡು ವುದು’, ‘೧೨ ಧ್ವನಿಮುದ್ರಿಕೆಗಳು, ೧೬ ವಿಡಿಯೋಗಳು ಮತ್ತು ಗ್ರಂಥಗಳನ್ನು ಪ್ರಕಾಶಿಸುವುದು, ‘ಸಂತರನ್ನು ಸನ್ಮಾನಿಸುವುದು’, ‘ಪ.ಪೂ. ಬಾಬಾರವರು ಶ್ರೀಕೃಷ್ಣನ ವಸ್ತ್ರಾಲಂಕಾರವನ್ನು ಧರಿಸಿ ಭಕ್ತರಿಗೆ ದರ್ಶನವನ್ನು ನೀಡುವುದು’, ‘ಕಿರುನಾಟಕವನ್ನು ಪ್ರಸ್ತುತಪಡಿಸುವುದು’ ಇತ್ಯಾದಿ ವೈಶಿಷ್ಟ್ಯಪೂರ್ಣ ವಿಷಯಗಳನ್ನು ಆಯೋಜಿಸಿದ್ದರು.
೨ ಆ. ಪರಾತ್ಪರ ಗುರು ಡಾ. ಆಠವಲೆಯವರು ಎತ್ತಿದ ಅಮೃತ ಮಹೋತ್ಸವದ ಶಿವಧನಸ್ಸು ! : ಮೇಲೆ ಕೊಟ್ಟಿರುವ ವಿಷಯಗಳು ಮುಖ್ಯ ಆಯೋಜನೆಯ ಕೆಲವು ಕೃತಿಗಳಿದ್ದವು. ಇದರ ಹೊರತು ಅದಕ್ಕನುಸರಿಸಿ ಬರುವ ತುಂಬಾ ವಿಷಯಗಳ ಬಗ್ಗೆ ಕೊನೆಯವರೆಗೆ ಚಿಕ್ಕಚಿಕ್ಕ ವಿಷಯಗಳನ್ನೂ ಸಂಪೂರ್ಣವಾಗಿ ಆಯೋಜಿಸಿದ್ದರು. ‘ಇಂದಿನಂತೆ ಗಣಕಯಂತ್ರ, ಸಂಚಾರವಾಣಿ ಇಂತಹ ಆಧುನಿಕ ಉಪಕರಣಗಳು ಲಭ್ಯವಿಲ್ಲದಿರುವಾಗ ಇದೆಲ್ಲ ಆಯೋಜನೆ ಮಾಡುವುದು’, ಎಂದರೆ ಶಿವಧನಸ್ಸನ್ನು ಎತ್ತಿದಂತಾಗಿತ್ತು. ಆದ್ದರಿಂದ ಆ ಸಮಯದಲ್ಲಿಯೇ ಪ.ಪೂ. ಬಾಬಾರವರು, ”ಇಂತಹ ಸಮಾರಂಭವು ಇದುವರೆಗೆ ಆಗಿಲ್ಲ ಮತ್ತು ಎಂದಿಗೂ ಆಗಲಾರದು !” ಎಂದಿದ್ದರು. ಇದರಿಂದ ಗಮನಕ್ಕೆ ಬರುವುದೇನೆಂದರೆ, ‘ಗುರುದೇವರು ಈ ಸಮಾರಂಭದ ಆಯೋಜನೆಯ ಮಾಧ್ಯಮದಿಂದ ಆದರ್ಶವನ್ನು ಮುಂದಿರಿಸಿ ಶ್ರೀ ಗುರುಗಳ ಮನಸ್ಸನ್ನು ಗೆದ್ದರು !
೩. ಬ್ರಹ್ಮೋತ್ಸವವನ್ನು ಆಚರಿಸುವಾಗ ಅನೇಕ ಆಧುನಿಕ ಹೊಸ ಉಪಕರಣಗಳು ಮತ್ತು ಸಾಧಕರು ಲಭ್ಯವಿರುವುದರಿಂದ ಆ ತುಲನೆಯಲ್ಲಿ ಅದನ್ನು ಆಚರಿಸಲು ಸುಲಭವಾಗುವುದು
೨೦೧೫ ರಿಂದ ೨೦೨೧ ರವರೆಗೆ ಆಶ್ರಮದ ಅಂತರ್ಗತ ದೇವತೆಗಳ ರೂಪದಲ್ಲಿನ ಗುರುದೇವರ ದರ್ಶನಸಮಾರಂಭ ವಾಯಿತು. ೨೦೨೨ ರಲ್ಲಿ ದೊಡ್ಡ ಪ್ರಮಾಣದಲ್ಲಿ ರಥೋತ್ಸವ ವನ್ನು ಆಚರಿಸಲಾಯಿತು. ೨೦೨೩ ರಲ್ಲಿ ತುಂಬಾ ದೊಡ್ಡ ಪ್ರಮಾಣದಲ್ಲಿ ‘ಬ್ರಹ್ಮೋತ್ಸವ’ವನ್ನು ಆಚರಿಸಲಾಯಿತು. ಬ್ರಹ್ಮೋತ್ಸವವನ್ನು ಆಚರಿಸುವಾಗ ಪ.ಪೂ. ಬಾಬಾರವರ ಅಮೃತಮಹೋತ್ಸವದ ತುಲನೆಯಲ್ಲಿ ಸಾಧಕರ ಸಂಖ್ಯೆ ಮತ್ತು ಹೊಸ ಆಧುನಿಕ ಉಪಕರಣಗಳು ಬಹಳಷ್ಟು ಪ್ರಮಾಣದಲ್ಲಿ ಲಭ್ಯಗಳಿದ್ದವು, ಉದಾ. ‘ಫ್ಲೆಕ್ಸ್ ಪ್ರಿಂಟಿಂಗ್’ ಇಂತಹ ಸುಲಭ ವ್ಯವಸ್ಥೆ, ಸ್ವಾಗತಕಮಾನಿನ ಮೇಲಿನ ಛಾಯಾಚಿತ್ರಗಳು ಮತ್ತು ಗಣಕಯಂತ್ರದಲ್ಲಿ ಬರವಣಿಗೆಯ ಸಂಕಲನ, ಸಮನ್ವಯಕ್ಕಾಗಿ ಪ್ರತಿಯೊಬ್ಬರಲ್ಲಿರುವ ಸಂಚಾರವಾಣಿ ಇತ್ಯಾದಿ. ಆದ್ದರಿಂದ ಅದರ ತುಲನೆಯಲ್ಲಿ ಆಯೋಜನೆ ತುಂಬಾ ಸುಲಭವಾಯಿತು.
೪. ಭಗವಂತನಂತೆಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೂ ಸಾಧಕರು ಭಾವಪೂರ್ಣ ಅರ್ಪಣೆ ಮಾಡಿದ ಚಿಕ್ಕ ಸೇವೆಯ ಬಗ್ಗೆಯೂ ತುಂಬಾ ಪ್ರಶಂಸೆ ಎನಿಸುವುದು
ಗುರುದೇವರು ಅಮೃತಮಹೋತ್ಸವದಲ್ಲಿ ಮಾಡಿದ ಆಯೋಜನೆಯನ್ನು ನೋಡಿದರೆ, ಆ ತುಲನೆಯಲ್ಲಿ ‘ಪುಷ್ಪವೃಷ್ಟಿ, ರಥೋತ್ಸವ, ಬ್ರಹ್ಮೋತ್ಸವ’, ಈ ಎಲ್ಲ ಸಮಾರಂಭಗಳನ್ನು ಪ್ರತ್ಯೇಕವಾಗಿ ಆಚರಿಸುವುದು’, ಇವುಗಳು ತುಂಬಾ ಚಿಕ್ಕ ಸೇವೆಯಾಗಿದೆ; ಯಾವ ಭಕ್ತನು ನನಗೆ ಎಲೆ, ಹೂವು, ಹಣ್ಣು, ನೀರು ಇತ್ಯಾದಿ ಗಳನ್ನು ಪ್ರೀತಿಯಿಂದ ಅರ್ಪಿಸುತ್ತಾನೋ, ಆ ಶುದ್ಧ ಬುದ್ಧಿಯ ಮತ್ತು ನಿಸ್ವಾರ್ಥ ಪ್ರೀತಿಯಿಂದ ಅರ್ಪಿಸಿದ ಆ ಎಲೆ, ಹೂವು ಇತ್ಯಾದಿ ಗಳನ್ನು ನಾನು ಸಗುಣ ರೂಪದಲ್ಲಿ ಕಾಣಿಸಿಕೊಂಡು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಶ್ರೀಕೃಷ್ಣನು ಹೇಳಿದ್ದಾನೆ. ಗುರುದೇವರಿಗೂ ಸಾಧಕರ ಚಿಕ್ಕ-ಚಿಕ್ಕ ಕೃತಿಗಳ ಬಗ್ಗೆಯೂ ಪ್ರಶಂಸೆ ಎನಿಸುತ್ತದೆ. ಇಂತಹ ಸಮಾರಂಭಗಳಾದ ನಂತರ ಆ ಆಯೋಜಕ ಸಾಧಕರ ಮತ್ತು ಆ ಸೇವೆಯಲ್ಲಿ ನಿರತರಾಗಿರುವ ಸಾಧಕರನ್ನು ತುಂಬಾ ಪ್ರಶಂಸಿಸುತ್ತಾರೆ. ಹಾಗಾಗಿ ತಮ್ಮ, ಶ್ರೀ ಗುರುಗಳ ಜನ್ಮೋತ್ಸವವನ್ನು ಆಚರಿಸುವ ವಿಷಯದಲ್ಲಿಯೂ ನೀವೇ ಗೆದ್ದಿರಿ ! ನಾವು ಸೋತೆವು.’
– ಶ್ರೀ. ಸಾಗರ ನಿಂಬಾಳಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೫.೨೦೨೪)