ವಟಪೂರ್ಣಿಮೆ (ವಟಸಾವಿತ್ರಿ ವ್ರತ) (ಜ್ಯೇಷ್ಠ ಶುಕ್ಲ ಚತುರ್ದಶಿ, ಜೂನ್‌ ೨೧)

ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್‌ ೨೧ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗು ತ್ತದೆ. ಈ ವ್ರತದ ಪ್ರಧಾನ ದೇವತೆ ಸಾವಿತ್ರಿ ಸಹಿತ ಬ್ರಹ್ಮದೇವ. ಸತ್ಯವಾನ, ನಾರದ ಮತ್ತು ಯಮಧರ್ಮ ಇವರು ಉಪದೇವತೆಗಳಾಗಿದ್ದಾರೆ.

ವ್ರತವನ್ನು ಆಚರಿಸುವ ಪದ್ಧತಿ :

ಅ. ಸಂಕಲ್ಪ : ಪ್ರಾರಂಭದಲ್ಲಿ ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ದೊರೆಯಲಿ’, ಎಂದು ಸಂಕಲ್ಪ ಮಾಡಬೇಕು.

ಆ. ಪೂಜೆ : ವಟಕ್ಕೆ ಷೋಡಶೋಪಚಾರ ಪೂಜೆ- ಅಭಿಷೇಕ ವಾದ ನಂತರ ವಟಕ್ಕೆ ಅಂದರೆ ವಟದ ಕೊಂಬೆಯ ಸುತ್ತಲೂ ಪ್ರದಕ್ಷಿಣೆಯ ದಿಕ್ಕಿನಲ್ಲಿ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು. ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ, ಪ್ರತಿಯೊಂದು ಜನ್ಮದಲ್ಲಿ ಇವರೇ ಪತಿಯೆಂದು ಲಭಿಸಲಿ, ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ’, ಎಂದು ಸಾವಿತ್ರಿ ಸಹಿತ ಬ್ರಹ್ಮದೇವನಿಗೆ ಪ್ರಾರ್ಥಿಸುತ್ತಾರೆ.

ಇ. ಉಪವಾಸ : ಸ್ತ್ರೀಯರು ಈ ದಿನ ಉಪವಾಸ ಮಾಡಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’)